ಮಗಳ ಮಾರಕ ಕಾಯಿಲೆಗೆ ಚಿಕಿತ್ಸೆ ನೀಡಲು ಸಾಧ್ಯವಾಗದೆ, ಆತ್ಮಹತ್ಯೆಗೆ ಮುಂದಾದ ಕುಟುಂಬಕ್ಕೆ ಪ್ರಧಾನಿ ಮೋದಿ ಆಸರೆಯಾಗಿದ್ದಾರೆ .

Date:

ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಆಗ್ರಾದ ಬಾಲಕಿ ಲಲಿತ್​ ಚಿಕಿತ್ಸೆಗಾಗಿ ಕುಟುಂಬ ಇದ್ದ ಆಸ್ತಿಯನ್ನೆಲ್ಲ ಮಾರಾಟ ಮಾಡಿದೆ. ಆದರೂ ಖಾಯಿಲೆಯಿಂದ ಬಾಲಕಿ ಗುಣಮುಖಳಾಗಿಲ್ಲ.ತನ್ನ ಮಗಳ ಚಿಕಿತ್ಸೆಗಾಗಿ ಸರ್ಕಾರ ಅಗತ್ಯ ನೆರವು ನೀಡಬೇಕೆಂದು ಆಕೆಯ ತಂದೆ ಮನವಿ ಮಾಡಿ ಪತ್ರ ಬರೆದಿದ್ದರು. ಇದಕ್ಕೆ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಸೂಕ್ತ ಸ್ಪಂದನೆ ದೊರೆತು, ಬಾಲಕಿಯ ಚಿಕಿತ್ಸೆಗಾಗಿ 30 ಲಕ್ಷ ರೂ.ಗಳನ್ನು ನೀಡಲಾಗಿದೆ.

ಮಗಳ ಚಿಕಿತ್ಸೆಗಾಗಿ ನಾನು ಜಮೀನು ಮಾರಿದೆ. ಈಗಾಗಲೇ 7 ಲಕ್ಷ ರೂ.ಗಳನ್ನು ಚಿಕಿತ್ಸೆಗಾಗಿ ವ್ಯಯಿಸಿದ್ದೇನೆ.ಆದರೂ ಮಗಳು ಗುಣಮುಖಳಾಗಿಲ್ಲ. ಇದರಿಂದ ನಾವು ಸಾಯುವ ನಿರ್ಧಾರವನ್ನೂ ಮಾಡಿದ್ದೆವು ಎಂದು ಬಾಲಕಿಯ ತಂದೆ ಸುಮೀರ್ ಸಿಂಗ್ ಹನೋವು ತೋಡಿಕೊಂಡರು.

ಬಾಲಕಿಯ ಅಣ್ಣನ ಬೋನ್​ ಮ್ಯಾರೋವನ್ನು ಆಕೆಗೆ ವರ್ಗಾವಣೆ ಮಾಡಿದರೆ ಬದುಕುಳಿಯುತ್ತಾಳೆ ಎಂದು ಜೈಪುರದ ವೈದ್ಯರು ಹೇಳಿದ್ದರು. ಇದಕ್ಕಾಗಿ 10 ಲಕ್ಷ ರೂ. ವೆಚ್ಚವಾಗುತ್ತೆ ಎಂದೂ ಹೇಳಿದ್ದರು. ಕೊನೆಯ ಪ್ರಯತ್ನವಾಗಿ ಪ್ರಧಾನಿಗಳಿಗೆ ಸಹಾಯ ಕೋರಿ ಪತ್ರ ಬರೆದಿದ್ದರು. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 30 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಇದಕ್ಕಾಗಿ ಬಾಲಕಿ ಕುಟುಂಬ ಪ್ರಧಾನಿಗಳಿಗೆ ಕೃತಜ್ಞತೆ ಸಲ್ಲಿಸಿದೆ.

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...