ತುಮಕೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಕುಣಿಗಲ್ ತಾಲೂಕು, ವಿದ್ಯಾಚೌಡೇಶ್ವರಿ ಸಂಸ್ಥಾನದ ಬಾಲಮಂಜುನಾಥ ಸ್ವಾಮೀಜಿಯನ್ನು ತಡರಾತ್ರಿ ಅರೆಸ್ಟ್ ಮಾಡಲಾಗಿದೆ. ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿ ಸ್ವಾಮೀಜಿ ಕಡೆಯಿಂದಲೇ ಕೆಲವರ ವಿರುದ್ಧ ದೂರು ದಾಖಲಾಗಿತ್ತು. ಸ್ವಾಮಿಜಿಯ ಆಪ್ತ ಅಭಿಲಾಷ್ ಕೆಲವರ ವಿರುದ್ಧ ದೂರು ನೀಡಿದ್ದ. ಆದರೆ, ಅದೇ ಆರೋಪಿಗಳು ಸ್ವಾಮೀಜಿಯವರ ಬೇರೊಂದು ಪೋಕ್ಸೋ ಪ್ರಕರಣವನ್ನ ವಿಚಾರಣೆ ವೇಳೆ ಬಯಲು ಮಾಡಿದ್ದಾರೆ ಎನ್ನಲಾಗಿದೆ.
ವಿಚಾರಣೆ ವೇಳೆ ಸ್ವಾಮಿಜಿಯ ಶಿಶ್ಯ ಅಭಿಲಾಷ್ ಕೂಡ ನಿಜ ಬಾಯ್ಬಿಟ್ಟ ಕಾರಣ ಸ್ವಾಮೀಜಿಯನ್ನು ಅರೆಸ್ಟ್ ಮಾಡಲಾಗಿದೆ. ದೂರು ಕೊಟ್ಟ ಸ್ವಾಮೀಜಿಯೇ ಈಗ ಬೇರೊಂದು ಕೇಸ್ ನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಮಠಕ್ಕೆ ಗುರವಾರ ಸಂಜೆಯೇ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ದಾಖಲೆಗಳು ಸಿಕ್ಕ ಹಿನ್ನೆಲೆ ಮಧ್ಯರಾತ್ರಿ ವೇಳೆಗೆ ಸ್ವಾಮೀಜಿ ಬಂಧನವಾಗಿದೆ.
ಮಠದಲ್ಲಿ ಅಪ್ರಾಪ್ತ ಬಾಲಕಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ: ಸ್ವಾಮೀಜಿ ಅರೆಸ್ಟ್
Date:






