ಇಂದು ಕರ್ನಾಟಕದ(14) ಜೊತೆಗೆ ಅಸ್ಸಾಂ, ಬಿಹಾರ, ಗೋವಾ(3), ಗುಜರಾತ್(26), ಕೇರಳ(20), ಮಹಾರಾಷ್ಟ್ರ(14), ಒಡಿಸ್ಸಾ, ಉತ್ತರ ಪ್ರದೇಶ(10), ಪಶ್ಚಿಮ ಬಂಗಾಳ, ಛತ್ತಿಸ್ಗಢ, ಜಮ್ಮು ಕಾಶ್ಮೀರ, ತ್ರಿಪುರ, ಡಿಯು ದಮನ್, ದಾದ್ರಾ ನಾಗರ್ ಪ್ರದೇಶಗಳಲ್ಲಿ ಇಂದು ಮತದಾನ ಆಗಲಿದೆ.
ಇಂದು ಗುಜರಾತ್ ನಲ್ಲಿ ಮತದಾನ ಮಾಡಿದ ಮೋದಿ ತಮ್ಮ ಅನಿಸಿಕೆಗಳನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ, ಈ ಕುರಿತು ಟ್ವೀಟ್ ಮಾಡಿರುವ ಮೋದಿ ನಿಮ್ಮ ಮತ ಅಮೂಲ್ಯ ವಾದದ್ದು ನಮ್ಮ ದೇಶದ ಅಭಿವೃದ್ಧಿಯ ನಕ್ಷೆಯನ್ನು ನಿಮ್ಮ ಮತ ನಿರ್ಧರಿಸಲಿದೆ,
ನಾನು ಕೂಡ ಕೆಲವೇ ನಿಮಿಷಗಳ ಹಿಂದೆ ಅಹಮದಾಬಾದ್ ನಲ್ಲಿ ಮತ ಚಲಾಯಿಸಿದ್ದೇನೆ ನೀವು ನಿಮ್ಮ ಮತ ಚಲಾಯಿಸಿ ಎಂದು ಟ್ವಿಟರ್ ಮೂಲಕ ಕರೆ ನೀಡಿದ್ದಾರೆ.
ಅಲ್ಲದೆ ಮೂರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಪಾಲ್ಗೊಳ್ಳಬೇಕೆಂದು ಮನವಿಯನ್ನು ಮಾಡಿದ್ದಾರೆ