ಕರಿಯ ದರ್ಶನ್ ಸಿನಿ ಜೀವನದಲ್ಲಿ ದೊಡ್ಡ ಮೈಲಿಗಲ್ಲು. ಪ್ರೇಮ್ ನಿರ್ದೇಶನದ ಚೊಚ್ಚಲ ಸಿನಿಮಾ ಕರಿಯ ಕನ್ನಡ ಚಲನಚಿತ್ರರಂಗದಲ್ಲಿ ದೊಡ್ಡಹೆಸರನ್ನು ಮಾಡಿದೆ. ಇಂದಿಗೂ ಸಹ ಕರಿಯ ತನ್ನದೇ ಆದ ಕ್ರೇಜ್ ಹೊಂದಿದೆ. ವರ್ಷಕ್ಕೂ ಹೆಚ್ಚು ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಕರಿಯ ದರ್ಶನ್ ಅವರನ್ನು ಸ್ಟಾರ್ಹೀರೋ ಮಾಡಿತು.
ಇದೀಗ ಅಂತಹ ಮಿರಾಕಲ್ ಮಾಡಿದ್ದ ಜೋಡಿ ಮತ್ತೆ ಒಂದಾಗುತ್ತಿದೆ. ಹೌದು ದರ್ಶನ್ ಮತ್ತು ಪ್ರೇಮ್ ಮತ್ತೆ ಒಂದಾಗುತ್ತಿದ್ದು ಈ ಬಾರಿ ಕರಿಯ ಆ ರೀತಿಯ ಮತ್ತೊಂದು ಅಂಡರ್ ವರ್ಲ್ಡ್ ಸಿನಿಮಾ ಮಾಡುತ್ತಾರಾ ಅಥವಾ ಕಮರ್ಷಿಯಲ್ ಚಿತ್ರ ಮಾಡಲಿದ್ದಾರಾ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.
ದರ್ಶನ್ ಮತ್ತು ಪ್ರೇಮ್ ಸಿನಿಮಾ ಬರಲಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹಬ್ಬಿದ್ದು ಅಧಿಕೃತವಾಗಿ ಘೋಷಣೆಯಾಗಬೇಕಿದೆ. ಒಟ್ಟಿನಲ್ಲಿ ಸದ್ಯಕ್ಕೆ ದರ್ಶನ್ ಅವರಿಗೆ ಇರುವ ಕ್ರೇಜ್ ಮತ್ತು ಪ್ರೇಮ್ ಅವರ ನಿರ್ದೇಶನ ಸೇರಿದರೆ ಆ ಸಿನಿಮಾ ಮಾಡುವಷ್ಟು ಸೌಂಡ್ ಮತ್ತು ಕಲೆಕ್ಷನ್ ನೆಕ್ಸ್ಟ್ ಲೆವೆಲ್ನಲ್ಲಿ ಇರುವುದಂತೂ ಪಕ್ಕಾ.