ಮತ್ತೆ ಕ್ರಿಕೆಟ್ ಅಂಗಳದಲ್ಲಿ ಸಚಿನ್, ಸೆಹ್ವಾಗ್, ಯುವಿ, ಜಾಂಟಿ, ಲಾರಾ ಮೊದಲಾದ ದಿಗ್ಗಜರು..!

0
632

ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತನ್ನು ಆಳಿದ ಕ್ರಿಕೆಟಿಗರು ಮತ್ತೆ ಮೈದಾನದಲ್ಲಿ ಆಡಿದ್ರೆ… ಅದೂ ಕೂಡ ತಮ್ಮ ಸಮಕಾಲೀನ ಸ್ಟಾರ್ ಗಳ ಎದುರು ಹಿಂದಿನಂತೆ ಅಖಾಡಕ್ಕೆ ಇಳಿದ್ರೆ ಹೇಗಿರುತ್ತೆ? ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್, ವಿಂಡೀಸ್ ದಂತಕಥೆ ಬ್ರಿಯನ್ ಲಾರಾ, ಆಸೀಸ್ ಮಾಜಿ ವೇಗಿ ಬ್ರೇಟ್​ ಲೀ ಸೇರಿದಂತೆ ವಿಶ್ವ ಕ್ರಿಕೆಟ್​ ಆಳಿದ ಮಹಾ ತಾರೆಯರು ಮತ್ತೆ ಅಂಗಳದಲ್ಲಿ ಸೆಣೆಸಲಿದ್ದಾರೆ.

ಕ್ರಿಕೆಟ್ ದಂತಕಥೆಗಳು ಮತ್ತೆ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಗತವೈಭವ ಮರುಕಳಿಸಿದಂತಿದೆ.

ಕ್ರಿಕೆಟ್ ದಿಗ್ಗಜರು ಆಡುವ ಈ ಟೂರ್ನಿ ‘ರೋಡ್‌ ಸೇಫ್ಟಿ ವರ್ಲ್ಡ್ ಸೀರೀಸ್ 2020’ . ನಾಳೆ ಅಂದರೆ ಮಾರ್ಚ್​ 7ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ  ಭಾರತ ಲೆಜೆಂಡ್ಸ್ ಮತ್ತು ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡಗಳು ಸೆಣೆಸಲಿವೆ. ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ತಂಡಗಳು ಪಾಲ್ಗೊಳ್ಳಲಿವೆ.

ಟ್ಟು 11 ಪಂದ್ಯಗಳು ಟೂರ್ನಿಯಲ್ಲಿವೆ. ಮಾರ್ಚ್ 7ರಂದು ಆರಂಭಗೊಳ್ಳಲಿದೆ. ಮಾರ್ಚ್​ 22ರಂದು ಫೈನಲ್ ಪಂದ್ಯ ಜರುಗಲಿದೆ.

ಇಂಡಿಯಾ ಲೆಜೆಂಡ್ಸ್, ಆಸ್ಟ್ರೇಲಿಯಾ ಲೆಜೆಂಡ್ಸ್, ಸೌತ್‌ ಆಫ್ರಿಕಾ ಲೆಜೆಂಡ್ಸ್, ವೆಸ್ಟ್ ಇಂಡೀಸ್ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ಹೀಗೆ ಒಟ್ಟು 5 ತಂಡಗಳು ಪ್ರಶಸ್ತಿ ಸುತ್ತಿಗಾಗಿ ಪರಸ್ಪರ ಸೆಣಸಾಡಲಿವೆ. ಟೂರ್ನಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಆರಂಭಗೊಳ್ಳಲಿವೆ.

ಇಂಡಿಯಾ ಲೆಜೆಂಡ್ಸ್:  ಸಚಿನ್ ತೆಂಡೂಲ್ಕರ್ (ಕ್ಯಾಪ್ಟನ್), ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಅಜಿತ್ ಅಗರ್ಕರ್, ಸಂಜಯ್ ಬಂಗಾರ್, ಮುನಾಫ್ ಪಟೇಲ್, ಮೊಹಮ್ಮದ್ ಕೈಫ್, ಪ್ರಗ್ಯಾನ್ ಓಜಾ, ಸಾಯಿರಾಜ್ ಬಹುತುಲೆ, ಅಬೆ ಕುರುವಿಲ್ಲಾ, ಜಹೀರ್ ಖಾನ್, ಇರ್ಫಾನ್ ಪಠಾನ್, ಸಮೀರ್ ದಿಘೆ.

ಸೌತ್ ಆಫ್ರಿಕಾ ಲೆಜೆಂಡ್ಸ್: ಜಾಂಟಿ ರೋಡ್ಸ್ (ಕ್ಯಾಪ್ಟನ್), ಹರ್ಷಲ್ ಗಿಬ್ಸ್, ಗಾರ್ನೆಟ್ ಕ್ರುಗರ್, ಜಾಕ್ವೆಸ್ ರುಡಾಲ್ಫ್, ಆಂಡ್ರ್ಯೂ ಹಾಲ್, ಆಲ್ಬಿ ಮೊರ್ಕೆಲ್, ಜೋಹಾನ್ ವ್ಯಾನ್ ಡೆರ್ ವಾತ್, ಲ್ಯಾನ್ಸ್ ಕ್ಲುಸೆನರ್, ಮಾರ್ಟಿನ್ ವ್ಯಾನ್ ಜಾರ್ಸ್ವೆಲ್ಡ್, ಮೊರ್ನೆ ವ್ಯಾನ್ ವೈಕ್, ಪಾಲ್ ಹ್ಯಾರಿಸ್, ರೋಜರ್ ಟೆಲಿಮಾಚಸ್, ರಿಯಾನ್ ಮೆಕ್ಲಾರೆನ್.

 ಆಸ್ಟ್ರೇಲಿಯಾ ಲೆಜೆಂಡ್ಸ್: ಬ್ರೆಟ್ ಲೀ (ಕ್ಯಾಪ್ಟನ್), ಬ್ರೆಟ್ ಗೀವ್ಸ್, ಜೇಸನ್ ಕ್ರೆಜ್ಜಾ, ಮಾರ್ಕ್ ಕಾಸ್ಗ್ರೋವ್, ನಾಥನ್ ರಿಯರ್ಡನ್, ಶೇನ್ ಲೀ, ಟ್ರಾವಿಸ್ ಬರ್ಟ್, ಬೆನ್ ಲಾಫ್ಲಿನ್, ಬ್ರಾಡ್ ಹಾಡ್ಜ್, ಕ್ಲಿಂಟ್ ಮೆಕೆ, ಕ್ಸೇವಿಯರ್ ಡೊಹೆರ್ಟಿ.

ವೆಸ್ಟ್ ಇಂಡೀಸ್ ಲೆಜೆಂಡ್ಸ್: ಬ್ರಿಯಾನ್ ಲಾರಾ (ಕ್ಯಾಪ್ಟನ್), ಆ್ಯಡಮ್ ಸ್ಯಾನ್‌ಫೋರ್ಡ್, ಕಾರ್ಲ್ ಹೂಪರ್, ಡ್ಯಾರೆನ್ ಗಂಗಾ, ಶಿವನರಿನ್ ಚಂದರ್‌ಪಾಲ್, ರಿಕಾರ್ಡೊ ಪೊವೆಲ್, ರಿಡ್ಲೆ ಜೇಕಬ್ಸ್, ಸ್ಯಾಮ್ಯುಯೆಲ್ ಬದ್ರಿ, ಸುಲೈಮಾನ್ ಬೆನ್, ಟಿನೋ ಬೆಸ್ಟ್, ದಿನನಾಥ್ ರಾಮ್‌ನರಿನ್, ಪೆಡ್ರೊ ಕಾಲಿನ್ಸ್, ಡಾಂಜಾ ಹಯಾಟ್.

 ಶ್ರೀಲಂಕಾ ಲೆಜೆಂಡ್ಸ್: ತಿಲಕರತ್ನೆ ದಿಲ್ಶನ್ (ಕ್ಯಾಪ್ಟನ್), ಚಮಿಂದ ವಾಸ್, ಫರ್ವೀಜ್ ಮಹರೂಫ್, ಮಾರ್ವನ್ ಅತಪಟ್ಟು, ಮುತ್ತಯ್ಯ ಮುರಳೀಧರನ್, ರಂಗನಾ ಹೆರಾತ್, ರೋಮೇಶ್ ಕಲುವಿತರಾನ, ಸಚಿತ್ರ ಸೇನನಾಯಕ, ಚಮರ ಕಪುಗೇಡರ, ತಿಲನ್ ತುಶಾರ, ಉಪುಲ್ ಚಂದನ, ಮಲಿಂಡಾ ವರ್ಣಪುರ.

ವೇಳಾಪಟ್ಟಿ

ಮಾರ್ಚ್ 7 :  ಇಂಡಿಯಾ ಲೆಜೆಂಡ್ಸ್ vs ವೆಸ್ಟ್ ಇಂಡೀಸ್ ಲೆಜೆಂಡ್ಸ್ – ಸ್ಥಳ : ಮುಂಬೈನ ವಾಂಖೆಡೆ – ಸಂಜೆ 7 ಗಂಟೆಗೆ

ಮಾರ್ಚ್ 8 : ಆಸ್ಟ್ರೇಲಿಯಾ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್ – ಸ್ಥಳ : ಮುಂಬೈನ ವಾಂಖೆಡೆ ಕ್ರೀಡಾಂಗಣ  – ಸಂಜೆ 7 ಗಂಟೆಗೆ

ಮಾರ್ಚ್ 10, ಇಂಡಿಯಾ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್ ಸ್ಥಳ : ನವೀ ಮುಂಬಯಿಯ ಡಿವೈ ಪಾಟೀಲ್ ಕ್ರೀಡಾಂಗಣ -ಸಂಜೆ 7 ಗಂಟೆಗೆ

ಮಾರ್ಚ್ 11, ವೆಸ್ಟ್ ಇಂಡೀಸ್ ಲೆಜೆಂಡ್ಸ್ ವರ್ಸಸ್ ಸೌತ್ ಆಫ್ರಿಕಾ ಲೆಜೆಂಡ್ಸ್ , ಸ್ಥಳ : ಡಿವೈ ಪಾಟೀಲ್ ಕ್ರೀಡಾಂಗಣ, ನವೀ ಮುಂಬಯಿಯಲ್ಲಿ – ಸಂಜೆ 7 ಗಂಟೆಗೆ

ಮಾರ್ಚ್ 13, ದಕ್ಷಿಣ ಆಫ್ರಿಕಾ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್, ಸ್ಥಳ : ನವ ಮುಂಬಯಿಯ ಡಿವೈ ಪಾಟೀಲ್ ಕ್ರೀಡಾಂಗಣ – ಸಂಜೆ 7 ಗಂಟೆಗೆ

ಮಾರ್ಚ್ 14, ಇಂಡಿಯಾ ಲೆಜೆಂಡ್ಸ್ vs ದಕ್ಷಿಣ ಆಫ್ರಿಕಾ ಲೆಜೆಂಡ್ಸ್, ಪುಣೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಕ್ರೀಡಾಂಗಣ –  ಸಂಜೆ 7 ಗಂಟೆಗೆ

ಮಾರ್ಚ್ 16, ಆಸ್ಟ್ರೇಲಿಯಾದ ಲೆಜೆಂಡ್ಸ್ vs ವೆಸ್ಟ್ ಇಂಡೀಸ್ ಲೆಜೆಂಡ್ಸ್ ಪುಣೆಯ ಎಂಸಿಎ ಕ್ರೀಡಾಂಗಣ – ಸಂಜೆ 7 ಗಂಟೆಗೆ

ಮಾರ್ಚ್ 17, ವೆಸ್ಟ್ ಇಂಡೀಸ್ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್, ಸ್ಥಳ : ಪುಣೆಯ ಎಂಸಿಎ ಕ್ರೀಡಾಂಗಣ – ಸಂಜೆ 7 ಗಂಟೆಗೆ

ಮಾರ್ಚ್ 19, ಆಸ್ಟ್ರೇಲಿಯಾ ಲೆಜೆಂಡ್ಸ್ vs ದಕ್ಷಿಣ ಆಫ್ರಿಕಾ ಲೆಜೆಂಡ್ಸ್ – ಸ್ಥಳ :  ನವೀ ಮುಂಬಯಿಯ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ – ಸಂಜೆ 7 ಗಂಟೆಗೆ

ಮಾರ್ಚ್ 20, ಇಂಡಿಯಾದ ಲೆಜೆಂಡ್ಸ್ vs ಆಸ್ಟ್ರೇಲಿಯಾ ಲೆಜೆಂಡ್ಸ್ – ಸ್ಥಳ : ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ – ಸಂಜೆ 7 ಗಂಟೆಗೆ

ಮಾರ್ಚ್ 22, ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಫೈನಲ್ -7 ಗಂಟೆಗೆ.

LEAVE A REPLY

Please enter your comment!
Please enter your name here