ಕ್ರಿಕೆಟ್ ಗೆ ಯುವರಾಜ ಸಿಂಗ ನಿವೃತ್ತಿ ಘೋಷಿಸಿದ ನಂತರ ಇತ್ತೀಚಿನ ಕೆಲ ದಿನಗಳಿಂದ ಯುವರಾಜ್ ಸಿಂಗ್ ಮತ್ತೆ ಟಿಕೆಟ್ ಆಡಲಿದ್ದಾರೆ ಎಂಬ ಕನಸನ್ನು ಅಭಿಮಾನಿಗಳು ಹೊತ್ತುಕೊಂಡಿದ್ದರು. ಇದಕ್ಕೆ ಕಾರಣ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ತೆಗೆದುಕೊಂಡಿದ್ದ ಒಂದು ನಿರ್ಧಾರ. ಹೌದು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಮತ್ತೆ ಯುವರಾಜ ಸಿಂಗ್ ಅವರನ್ನು ಮುಂಬರುವ ಸೈಯದ್ ಮುಷ್ತಾಕ್ ಅಲಿ ಟಿ 20 ಲೀಗ್ ನಲ್ಲಿ ಆಡಿಸುವ ಯೋಚನೆಯಲ್ಲಿತ್ತು.
ಇನ್ನು ಇದೇ ನಿಟ್ಟಿನಲ್ಲಿ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಬಿಸಿಸಿಐಗೆ ಪತ್ರವನ್ನು ಸಹ ಬರೆದಿತ್ತು. ಈ ಪತ್ರವನ್ನು ಇದೀಗ ಬಿಸಿಸಿಐ ತಿರಸ್ಕರಿಸಿದೆ. ಹೌದು ಯುವರಾಜ್ ಸಿಂಗ್ ಅವರಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಆಡಲು ಬಿಸಿಸಿಐ ಅವಕಾಶವನ್ನು ನೀಡುತ್ತಿಲ್ಲ.
ಬಿಸಿಸಿಐ ನಿಯಮದ ಪ್ರಕಾರ ಒಬ್ಬ ಭಾರತೀಯ ಆಟಗಾರರ ನಿವೃತ್ತಿಯನ್ನು ಘೋಷಿಸಿದ ನಂತರ ಯಾವುದೇ ರೀತಿಯ ವಿದೇಶಿ ಲೀಗ್ ಗಳಲ್ಲಿ ಆಡಿರಬರದು.. ಹೀಗಿದ್ದಾಗ ಮಾತ್ರ ಮತ್ತೆ ಆತ ತನ್ನ ನಿವೃತ್ತಿಯನ್ನು ವಾಪಸ್ ಪಡೆದುಕೊಂಡು ದೇಸಿ ಕ್ರಿಕೆಟ್ ಗಳಲ್ಲಿ ಆಡಬಹುದು. ಒಂದು ವೇಳೆ ಆತ ವಿದೇಶಿ ಲೀಗ್ ಗಳಲ್ಲಿ ಆಡಿದ್ದರೆ ಆತ ಮತ್ತೆ ತನ್ನ ನಿವೃತ್ತಿಯನ್ನು ವಾಪಸ್ಸು ಪಡೆಯಲು ಅನರ್ಹ ನಾಗಿರುತ್ತಾನೆ. ಯುವರಾಜ್ ಸಿಂಗ್ ಅವರು ನಿವೃತ್ತಿಯ ನಂತರ ವಿದೇಶಿ ಲೀಗ್ ಗಳಲ್ಲಿ ಆಡಿರುವುದರಿಂದ ಅವರು ತಮ್ಮ ನಿವೃತ್ತಿಯನ್ನು ವಾಪಸ್ ಪಡೆದುಕೊಂಡು ದೇಸಿ ಕ್ರಿಕೆಟ್ ಆಡಲು ಅನರ್ಹರಾಗಿದ್ದಾರೆ.