ನವರಸ ನಾಯಕ ಜಗ್ಗೇಶ್ ಅವರು ದರ್ಶನ್ ಅವರ ಅಭಿಮಾನಿಗಳ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂಬ ಆಡಿಯೋ ಇತ್ತೀಚಿಗಷ್ಟೆ ಸಖತ್ ವೈರಲ್ ಆಗಿತ್ತು. ಇನ್ನು ಈ ಆಡಿಯೋ ಕೇಳಿದ ಬಳಿಕ ದರ್ಶನ್ ಅಭಿಮಾನಿಗಳು ಜಗ್ಗೇಶ್ ವಿರುದ್ಧ ಕಿಡಿಕಾರಿದರು. ಜಗ್ಗೇಶ್ ಅವರು ಕೂಡಲೇ ದರ್ಶನ್ ಅಭಿಮಾನಿಗಳ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದಿದ್ದರು.
ಈ 1ಘಟನೆ ನಡೆದ ಬಳಿಕ ಜಗ್ಗೇಶ್ ಅವರು ಇಲ್ಲಿಯೂ ಸಹ ಕಾಣಿಸಿಕೊಂಡಿರಲಿಲ್ಲ ಆದರೆ ಇತ್ತೀಚೆಗೆ ಮೈಸೂರಿನಲ್ಲಿ ತಮ್ಮ ತೋತಾಪುರಿ ಚಿತ್ರದ ಚಿತ್ರೀಕರಣದಲ್ಲಿ ಜಗ್ಗೇಶ್ ಅವರು ಭಾಗಿಯಾಗಿದ್ದರು. ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿದ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿದರು.
ಜಗ್ಗೇಶ್ ಅವರ ಸುತ್ತ ಸುತ್ತುವರೆದ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರನ್ನು ಕೂಡಲೇ ದರ್ಶನ್ ಅಭಿಮಾನಿಗಳ ಕ್ಷಮೆ ಯಾಚಿಸಬೇಕು ಆ ರೀತಿ ಮಾತನಾಡಲು ನಿಮಗೆ ಎಷ್ಟು ಧೈರ್ಯ ಎಂದು ಆವಾಜ್ ಹಾಕಲು ಶುರು ಮಾಡಿದರು. ಒಬ್ಬರ ಮೇಲೆ ಒಬ್ಬರು ಜಗ್ಗೇಶ್ ಅವರಿಗೆ ಮಾತನಾಡಲು ಬಿಡದ ಹಾಗೆ ಪ್ರಶ್ನೆಗಳನ್ನು ಹಾಕತೊಡಗಿದರು.
ಆಡಿಯೊ ಹಿಂದೆ ನಡೆದದ್ದು ಏನು ಎಂಬುದನ್ನು ಜಗ್ಗೇಶ್ ಅವರು ವಿವರಿಸಲು ಪ್ರಯತ್ನಿಸಿದರು. ಆದ್ರೆ ಜಗ್ಗೇಶ್ ಅವರಿಗೆ ಮಾತನಾಡಲು ಅವಕಾಶ ನೀಡದ ದರ್ಶನ್ ಅಭಿಮಾನಿಗಳ ವಿರುದ್ಧ ಅಲ್ಲಿಯೇ ಜಗ್ಗೇಶ್ ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದೇನಾ ನೀವು ಒಬ್ಬ ಹಿರಿಯ ಕಲಾವಿದನಿಗೆ ನೀಡುವ ಗೌರವ ಎಂದು ದರ್ಶನ್ ಅಭಿಮಾನಿಗಳ ವಿರುದ್ಧ ಜಗ್ಗೇಶ್ ಅವರು ಕಿಡಿಕಾರಿದರು. ಇದಕ್ಕೆ ಪ್ರತಿಯಾಗಿ ಅಲ್ಲಿ ನೆರೆದಿದ್ದ ದರ್ಶನ್ ಅಭಿಮಾನಿಗಳು ಅದೇ ಒಬ್ಬ ಹಿರಿಯನಟನಾಗಿ ನೀವು ದರ್ಶನ್ ಅಭಿಮಾನಿಗಳ ಬಗ್ಗೆ ಆ ರೀತಿ ಮಾತನಾಡುವುದು ಎಷ್ಟು ಸರಿ ಎಂದು ಮರುಪ್ರಶ್ನೆ ಹಾಕಿದರು..