ಡಿಕೆ ಶಿವಕುಮಾರ್ ಅವರು ಇಡಿ ದಾಳಿ ಆದ ಬಳಿಕ ಜೈಲುಪಾಲಗಿರುದು ಎಲ್ಲರಿಗು ತಿಳಿದ ವಿಷಯ ಆದರೆ ಬಳಿಕ ಬೇಲ್ ಇಂದ ಹೊರ ಬಂದ ಡಿಕೆಶಿ ಗೆ ಮತ್ತೆ ವಿಚಾರಣೆ ಹಿನ್ನೆಲೆಯಲ್ಲಿ ಜನವರಿ 13 ರಂದು ದೆಹಲಿ ಇಡಿ ಕಚೇರಿಗೆ ಬರುವಂತೆ ಇಡಿ ಸೂಚನೆ ನೀಡಿದೆ. 2013 -14 ರಲ್ಲಿ ನಡೆಸಿದ ವ್ಯವಹಾರಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಉದ್ದೇಶದಿಂದ ಸಮನ್ಸ್ ನೀಡಲಾಗಿದೆ. ಹೀಗಾಗಿ ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ವಕೀಲರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ತಡರಾತ್ರಿ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಜನವರಿ 15 ರಂದು ದೆಹಲಿ ಹೈಕೋರ್ಟ್ ನಲ್ಲಿಯೂ ಡಿಕೆಶಿ ಪ್ರಕರಣದ ವಿಚಾರಣೆ ನಡೆಯಲಿದೆ. ಡಿ.ಕೆ. ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಇಡಿಯಿಂದ ಅರ್ಜಿ ಸಲ್ಲಿಕೆಯಾಗಿದೆ ಎಂದು ಹೇಳಲಾಗಿದೆ.