ಮತ್ತೆ ಸಂಕಷ್ಟಕ್ಕೆ ಸಿಲುಕಿದ ಅರ್ನಾಬ್ ಗೋಸ್ವಾಮಿ

Date:

ಟೆಲಿವಿಷನ್ ರೇಟಿಂಗ್ ಪಾಯಿಂಟ್‌ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಂದು ಪೂರಕ ಆರೋಪಪಟ್ಟಿ ಸಲ್ಲಿಸಿದ್ದಾರೆ. ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಸೇರಿದಂತೆ ಪ್ರಮುಖ ನಾಲ್ವರನ್ನುಆರೋಪಿಗಳಾಗಿ ಹೆಸರಿಸಲಾಗಿದ್ದು, ಸುಮಾರು 1800 ಪುಟಗಳಿಗೂ ಅಧಿಕ ದೋಷಾರೋಪಣ ಪಟ್ಟಿ ಇದಾಗಿದೆ.
ಮುಂಬೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾದ ದೋಷಾರೋಪಣ ಪಟ್ಟಿಯಲ್ಲಿ ಈ ಬಾರಿ 7 ಜನರನ್ನು ಆರೋಪಿಗಳನ್ನಾಗಿ ಸೇರಿಸಲಾಗಿದೆ. ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕರಾದ ಅರ್ನಾಬ್ ರಂಜನ್ ಗೋಸ್ವಾಮಿ, ಅಮಿತ್ ಮೋಹನ್ ದವೆ, ಸಂಜಯ್ ಸುಖದೇವ್ ವರ್ಮಾ, ವಾಹಿನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಪ್ರಿಯಾ ಮುಖರ್ಜಿ, ಮುಖ್ಯ ಹಣಕಾಸು ಅಧಿಕಾರಿ ಶಿವ ಸುಬ್ರಮಣ್ಯಂ, ಉದ್ಯೋಗಿಗಳಾದ ಶಿವೇಂದ್ರ ಮುಂದೇರ್ಕರ್, ರಂಜಿತ್‌ ವಾಲ್ಟರ್‌ ಹೆಸರುಗಳು ಪೂರಕ ಆರೋಪಟ್ಟಿಯಲ್ಲಿ ಇವೆ.

”ಮೊದಲ ಚಾರ್ಜ್‌ಶೀಟ್‌ ಪ್ರಕಾರ ಈ ಪ್ರಕರಣದಲ್ಲಿ 22 ಆರೋಪಿಗಳಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 406, 409 (ಕ್ರಿಮಿನಲ್ ವಿಶ್ವಾಸದ್ರೋಹ) ಮತ್ತು 420 (ವಂಚನೆ) 465, 468 (ಫೋರ್ಜರಿ), 201, 204 (ಸಾಕ್ಷ್ಯ ನಾಶ), 212 (ಅಪರಾಧಿಗೆ ಆಶ್ರಯ), 120 ಬಿ (ಪಿತೂರಿ) ಅಡಿಯಲ್ಲಿ ಅಪರಾಧ ಎಸಗಿದ್ದಕ್ಕಾಗಿ ಆರೋಪಪಟ್ಟಿ ಸಲ್ಲಿಸಲಾಗಿದೆ,” ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಹನ್ಸ್‌ ಸಮೂಹದ ಕೆಲ ಉದ್ಯೋಗಿಗಳು ನಿರ್ದಿಷ್ಟ ಟಿವಿ ವಾಹಿನಿಗಳನ್ನು ವೀಕ್ಷಿಸಲು ಜನರಿಗೆ ಹಣ ನೀಡಿದ್ದರು. ಸ್ಯಾಂಪಲಿಂಗ್‌ ಮೀಟರಿಂಗ್‌ ಸೇವೆಗಳನ್ನು ತಿರುಚಲಾಗಿತ್ತು ಎಂಬುದು ಪತ್ತೆಯಾದ ಬಳಿಕ ಟಿಆರ್‌ಪಿ ಹಗರಣದ ಕುರಿತು ಅಪರಾಧ ವಿಭಾಗದ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಅಕ್ಟೋಬರ್ 8, 2020ರಂದು ಅಂದಿನ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಸುದ್ದಿಗೋಷ್ಠಿ ನಡೆಸಿ, ಟಿಆರ್‌ಪಿ ಹಗರಣದ ವಿವರ ನೀಡಿದ್ದರು.
”ರಿಪಬ್ಲಿಕ್ ಟಿವಿ, ಬಾಕ್ಸ್ ಸಿನಿಮಾ, ಫಕ್ತ್ ಮರಾಠಿ ವಾಹಿನಿಗಳು ರೇಟಿಂಗ್ ತಿರುಚಲು ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತರಿಗೆ ಲಂಚ ನೀಡಿ, ತಮ್ಮ ಚಾನೆಲ್ ಟಿಆರ್‌ಪಿ ಹೆಚ್ಚಿಸಿಕೊಂಡಿದ್ದರು,” ಎಂದು ಸಿಂಗ್ ವಿವರಿಸಿದ್ದರು. ನಂತರ BARC ಈ ಬಗ್ಗೆ ದೂರು ನೀಡಿತ್ತು. ಬಾರ್ಕ್ ಸಿಒಒ ಸೇರಿದಂತೆ 13 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. (ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...