ಹುಚ್ಚ ವೆಂಕಟ್ ತನ್ನ ಹುಚ್ಚಾಟವನ್ನು ಮತ್ತೆ ಮುಂದುವರೆಸಿದ್ದಾನೆ ಈ ಹಿಂದೆ ಮಡಿಕೇರಿಯಲ್ಲಿ ಕಾರಿನ ಗಾಜು ಒಡೆದು ದಾಂಧಲೆ ನಡೆಸಿದ್ದ ಹುಚ್ಚ ವೆಂಕಟ್ ಇದೀಗ ದೊಡ್ಡಬಳ್ಳಾಪುರದಲ್ಲಿ ಬಸ್ಸಿಗೆ ಕಾಯುತ್ತಿದ್ದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಹೌದು ಬಸ್ಸಿಗೆಂದು ಕಾಯುತ್ತಾ ನಿಂತಿದ್ದ ಯುವತಿ ಬಳಿ ತೆರಳಿದ ಹುಚ್ಚ ವೆಂಕಟ್ ಆಕೆಯನ್ನು ಬಸ್ ಹತ್ತದಂತೆ ತಡೆದಿದ್ದಾನೆ ಈ ಘಟನೆಯನ್ನು ಸಾರ್ವಜನಿಕರು ವಿಡಿಯೋ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಸಮೀಪದಲ್ಲಿ ತೆರಳುತ್ತಿದ್ದ ವಾಹನ ಸವಾರರಿಗೂ ಸಹ ಹುಚ್ಚ ವೆಂಕಟ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇನ್ನು ಈತನ ಹುಚ್ಚಾಟ ನೋಡಿದ ನಂತರ ಸ್ಥಳಕ್ಕೆ ಸಾರ್ವಜನಿಕರು ಜಮಾಯಿಸಿದ್ದಾರೆ ತದನಂತರ ಖರ್ಚಿಗೆ ಹಣವಿಲ್ಲದೆ ಇಲ್ಲಿಗೆ ಬಂದಿದ್ದಾಗಿ ಹುಚ್ಚ ವೆಂಕಟ್ ತಿಳಿಸಿದ್ದಾನೆ. ಹುಚ್ಚ ವೆಂಕಟ್ ಹೇಳಿದ್ದನ್ನು ಕೇಳಿದ ಕೆಲ ಜನ ಆತನಿಗೆ ಖರ್ಚಿಗೆ ಹಣ ನೀಡಿ ಇಲ್ಲಿಂದ ಹೊರಡುವಂತೆ ವಾರ್ನ್ ಮಾಡಿದ್ದಾರೆ. ಈ ಹಿಂದೆ ಮಹಿಳೆಯರನ್ನು ಗೌರವಿಸಿ ನಿಮಗೆ ನಾಚಿಕೆ ಆಗಲ್ವಾ ಎಂದು ಸಂದೇಶ ನೀಡುತ್ತಿದ್ದ ಹುಚ್ಚ ವೆಂಕಟ್ ಇದೀಗ ತಾನೇ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿರುವುದು ಎಷ್ಟು ಸರಿ?