ಇಂದಿಗೆ ಇಡಿ ಕಸ್ಟಡಿ ಅಂತ್ಯವಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ಇಡಿ ಕಸ್ಟಡಿಯನ್ನು 4 ದಿನ ವಿಸ್ತರಿಸಿ ದೆಹಲಿಯ ರೋಸ್ ಅವೆನ್ಯೂ ಇಡಿ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 16 ರಂದು ಸೋಮವಾರ ಡಿಕೆಶಿ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
ಮೊದಲು ಡಿಕೆಶಿ ಅವರಿಗೆ ವೈದ್ಯಕೀಯ ನೆರವು ಕಲ್ಪಿಸುವಂತೆ ಕೋರ್ಟ್ ತನಿಖಾಧಿಕಾರಿಗೆ ಸೂಚಿಸಿದೆ. ಡಿಕೆಶಿ ಅವರ ಆರೋಗ್ಯಕ್ಕೆ ಮೊದಲು ಆದ್ಯತೆ ನೀಡಿ ಬಳಿಕ ವಿಚಾರಣೆ ನಡೆಸಿ ಎಂದು ಕೋರ್ಟ್ ಸೂಚನೆ ನೀಡಿದೆ.5 ದಿನ ಕಷ್ಟಡಿ ವಿಸ್ತರಿಸುವಂತೆ ಅಧಿಕಾರಿಗಳ ಮನವಿಯನ್ನು ಕೋರ್ಟ್ ಪರಿಗಣಿಸಿ 4 ದಿನಗಳ ಕಾಲ ಡಿಕೆಶಿಯನ್ನು ಇಡಿ ಕಸ್ಟಡಿಗೆ ಒಪ್ಪಿಸಿದೆ