ಪಾಕಿಸ್ತಾನಿ ಭಯೋತ್ಪಾದಕರು ಮತ್ತು ಪಾಕ್ ಸೇನೆಯ ಕದನ ವಿರಾಮ ಉಲ್ಲಂಘನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಭಾರತೀಯ ಭೂ ಸೇನೆಯ ನೂತನ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ . ಪಾಕ್ ಆಕ್ರಮಿತ ಕಾಶ್ಮೀರದಲ್ಲಿ(ಪಿಒಕೆ) ಭಾರೀ ಸೇನಾ ಕಾರ್ಯಾಚರಣೆ ನಡೆಸಲು ಪರಿಸ್ಥಿತಿ ಎದುರಾದರೆ ಅದಕ್ಕೆ ಸರ್ವಸನ್ನದ್ಧ.
ಭಾರತದ ಯಾವುದೇ ಪ್ರದೇಶದ ಮೇಲೆ ದಾಳಿ ನಡೆಸಲು ಕುತಂತ್ರ ರೂಪಿಸುವ ಪಾಕ್ ಉಗ್ರಗಾಮಿಗಳ ವಿರುದ್ದ ಸೇನಾ ಕಾರ್ಯಾಚರಣೆ ನಡೆಸಲು ನಾವು ಅವಕಾಶ ಹೊಂದಿದ್ದೇವೆ. ಕೇಂದ್ರ ಸರ್ಕಾರ ಸೂಚನೆ ನೀಡಿದರೆ ಮತ್ತು ಪರಿಸ್ಥಿತಿ ಉದ್ಭವಿಸಿದರೆ ಪಿಓಕೆ ಮೇಲೆ ಮತ್ತೊಂದು ಭಾರೀ ಸರ್ಜಿಕಲ್ ಸ್ಟ್ರೈಕ್ ನಡೆಸಲು ಸಿದ್ಧ ಎಂದು ಎಂ.ಎನ್.ನರವಣೆ ಸ್ಪಷ್ಟಪಡಿಸಿದರು.