ಮತ ಎಣಿಕೆಗೆ ನಾಳೆ ಮಂಡ್ಯ ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್ !?

Date:

ಲೋಕಸಭಾ ಕ್ಷೇತ್ರದ ರಣಕಣವೆನಿಸಿರುವ ಮಂಡ್ಯ ಕ್ಷೇತ್ರದಲ್ಲಿ ಮೇ 23ರಂದು ನಡೆಯಲಿರುವ ಮತ ಎಣಿಕೆಗೆ ಖಾಕಿ ಸರ್ಪಗಾವಲು ಹಾಕಿದೆ. ಸಿಆರ್‍ಪಿಎಫ್, ಬಿಎಸ್‍ಎಫ್, ಕೆಎಸ್‍ಆರ್‍ಪಿ ಹಾಗೂ ಡಿಎಆರ್ ತುಕಡಿಗಳನ್ನು ಮತ ಎಣಿಕೆ ಕೇಂದ್ರ ಹಾಗೂ ಜಿಲ್ಲಾದ್ಯಂತ ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.

ಚುನಾವಣಾ ಆಯೋಗದ ನಿಯಮದಂತೆ ಗುರುವಾರ (ಮೇ 23) ಮತ ಎಣಿಕೆ ನಡೆಯುವ ನಗರದ ಸರ್ಕಾರಿ ಮಹಾ ವಿದ್ಯಾಲಯ (ಸ್ವಾಯತ್ತ) ಮತ್ತು ಪಿ.ಜಿ.ಕಟ್ಟಡದಲ್ಲಿ ಸುಮಾರು 300 ಮಂದಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಹೊರಜಿಲ್ಲೆಗಳಿಂದ 100 ಜನ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಿಕೊಂಡು ಬ್ಯಾರಿಕೇಡ್, ಹೆಚ್‍ಹೆಚ್‍ಎಂಡಿ, ಡಿಎಫ್‍ಎಂಡಿ, ಸಿಸಿ ಟೀವಿ ಅಳವಡಿಸಿಕೊಂಡು ಅನಧಿಕೃತ ಪ್ರವೇಶ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಿ.ಶಿವಪ್ರಕಾಶ್ ದೇವರಾಜು ತಿಳಿಸಿದರು.

ಮತ ಎಣಿಕೆಗೆ ನಿಯೋಜನೆಗೊಂಡ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ ಎಣಿಕೆ ಏಜೆಂಟರು ಅಧಿಕೃತ ಪಾಸ್‍ಗಳೊಂದಿಗೆ ನಿಗದಿತ ಸಮಯದೊಳಗೆ ಎಣಿಕಾ ಕೇಂದ್ರಗಳಿಗೆ ಲೋಹ ಪರಿಶೋಧಕ ಯಂತ್ರಗಳ ಮೂಲಕ ಪರಿಶೀಲನೆಗೆ ಒಳಪಟ್ಟು ಪ್ರವೇಶಿಸಲು ಸೂಚಿಸಲಾಗಿದೆ.

ಯಾವುದೇ ಟ್ಯಾಬ್, ಲ್ಯಾಪ್‍ಟಾಪ್, ಸೆಲ್‍ ಫೋನ್‍ಗಳು, ಅಪಾಯಕಾರಿ ಆಯುಧಗಳು, ಸ್ಫೋಟಕ ವಸ್ತುಗಳು, ಬೆಂಕಿಪೆಟ್ಟಿಗೆ, ಬೀಡಿ-ಸಿಗರೇಟ್, ಲೈಟರ್‍ ಗಳು ಹಾಗೂ ಇತರೆ ಯಾವುದೇ ಅಪಾಯಕಾರಿ ವಸ್ತುಗಳನ್ನು ತರಬಾರದು. ಸಾರ್ವಜನಿಕರು ವಾಹನಗಳನ್ನು ರಸ್ತೆಗಳಲ್ಲಿ, ಫುಟ್‍ಪಾತ್‍ಗಳಲ್ಲಿ ನಿಲ್ಲಿಸಿ ಸುಗಮ ಸಂಚಾರಕ್ಕೆ ಅನಾನುಕೂಲ ಮಾಡಬಾರದು ಎಂದು ತಿಳಿಸಿದರು. ಮಾಧ್ಯಮದವರು ಚುನಾವಣಾಧಿಕಾರಿ ಅನುಮತಿ ಮೇರೆಗೆ ಸೆಲ್‍ ಫೋನ್‍ಗಳನ್ನು ಮಾಧ್ಯಮ ಕೇಂದ್ರದ ಒಳಗೆ ಮಾತ್ರ ಉಪಯೋಗಿಸಲು ಅನುಮತಿ ನೀಡಿದೆ ಎಂದು ಹೇಳಿದರು.

ಜಿಲ್ಲಾದ್ಯಂತ ಸುಮಾರು 200 ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ ಪಿಕೆಟಿಂಗ್, ಮೊಬೈಲ್ ಗಸ್ತು, ಸೂಪರ್‍ವೈಸಿಂಗ್ ಹಾಗೂ ಉಸ್ತುವಾರಿ ಮೊಬೈಲ್‍ಗಳನ್ನು ಭದ್ರತಾ ಕರ್ತವ್ಯದಲ್ಲಿ ನಿಯೋಜಿಸಲಾಗಿದೆ. ಮತ ಎಣಿಕೆಯ ದಿನದಂದು ಎಣಿಕೆ ಕೇಂದ್ರ ಬಳಿ ಬರುವವರು ದ್ವಿಚಕ್ರ ವಾಹನಗಳನ್ನು ಸರ್ಕಾರಿ ಮಹಾ ವಿದ್ಯಾಲಯದ ಒಳಭಾಗ, ಪಿ.ಜಿ.ಕಟ್ಟಡ ಮುಂಭಾಗ, ನಾಲ್ಕು ಚಕ್ರದ ವಾಹನಗಳಿಗೆ ಬಂದೀಗೌಡ ಬಡಾವಣೆಯ ಗಾಯತ್ರಿ ಮಂಟಪದ ಖಾಲಿ ಮೈದಾನ ಹಾಗೂ ಸರ್ಕಾರಿ ವಾಹನಗಳಿಗೆ ಪ್ರವಾಸಿಮಂದಿರದ ಖಾಲಿ ಜಾಗ ಹಾಗೂ ಎ.ಸಿ.ಕಚೇರಿ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮೇ 23ರಂದು ಬೆಳಗ್ಗೆ 6 ಗಂಟೆಯಿಂದ ಮೇ 24ರ ಮಧ್ಯರಾತ್ರಿಯವರೆಗೆ ಜಿಲ್ಲಾಧಿಕಾರಿ ಆದೇಶದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರನ್ವಯ ಸಾರ್ವಜನಿಕರು ಯಾವುದೇ ವಿಜಯೋತ್ಸವ, ಪಟಾಕಿ ಸಿಡಿಸುವುದು, ಬೈಕ್ ರ್ಯಾಲಿ, ಮೆರವಣಿಗೆಗಳನ್ನು ನಿಷೇಧಿಸಲಾಗಿದೆ.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...