ಮದಕರಿ ನಾಯಕ ಆದ್ಮೇಲೆ ಮತ್ತೆ ಒಂದಾಗಲಿದ್ದಾರೆ ದರ್ಶನ್ -ಮಿಲನ ಪ್ರಕಾಶ್..!

Date:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ನಟ. ಈ ವರ್ಷ ದರ್ಶನ್ ಅಭಿಮಾನಿಗಳು ಭರಪೂರ ಹಬ್ಬ.. ಸಾಲು ಸಾಲು ಸಿನಿಮಾಗಳನ್ನು ದಚ್ಚು ಅಭಿಮಾನಿಗಳಿಗೆ ನೀಡ್ತಿದ್ದಾರೆ. ದರ್ಶನ್ ಅಭಿನಯದ ಸಾಲು ಸಾಲು ಸಿನಿಮಾಗಳು ಈ ವರ್ಷ ಬರುತ್ತಿವೆ..! ವರ್ಷಾರಂಭದಲ್ಲಿ ಯಜಮಾನನಾಗಿ ಮಿಂಚಿದ ದರ್ಶನ್ ಈಗ ಕುರುಕ್ಷೇತ್ರದ ದುರ್ಯೋಧನನಾಗಿ ಅಬ್ಬರಿಸುತ್ತಿದ್ದಾರೆ.
ಕುರುಕ್ಷೇತ್ರದ ಮೂಲಕ ದರ್ಶನ್ ಈಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಕುರುಕ್ಷೇತ್ರ ಮಲ್ಟಿ ಲಾಂಗ್ವೇಜ್​ನಲ್ಲಿ ತೆರೆ ಕಂಡಿದ್ದು ಎಲ್ಲಾ ಕಡೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕುರುಕ್ಷೇತ್ರದ ಬೆನ್ನಲ್ಲೇ ಒಡೆಯನಾಗಿ ಸದ್ದು ಮಾಡಲು ದರ್ಶನ ಬರಲಿದ್ದಾರೆ. ಒಡೆಯ ಸಿನಿಮಾ ನಂತರ ರಾಬರ್ಟ್ ಅವತಾರದಲ್ಲಿ ಡಿ.ಬಾಸ್ ಬರಲಿದ್ದಾರೆ. ರಾಬರ್ಟ್ ಬಳಿಕ ಗಂಡುಗಲಿ ಮದಕಾರಿನಾಯಕನಾಗಿ ದಚ್ಚು ಗರ್ಜಿಸಲಿದ್ದಾರೆ. ಹೀಗೆ ಒಂದರ ಹಿಂದೊಂದು ಸಿನಿಮಾಗಳು ದರ್ಶನ್ ಮುಂದಿವೆ.


ಈ ಎಲ್ಲಾ ಸಿಹಿ ಸುದ್ದಿಗಳ ಜೊತೆಗೆ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಮಿಲನ ಪ್ರಕಾಶ್ ದರ್ಶನ್​ಗಾಗಿ ಕಥೆ ಬರೆಯುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ಅಭಿನಯದ ಸೂಪರ್ ಹಿಟ್ ಸಿನಿಮಾ ಮಿಲನಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಪ್ರಕಾಶ್ ನಂತರದ ದಿನಗಳಲ್ಲಿ ಮಿಲನ ಪ್ರಕಾಶ್ ಎಂದೇ ಜನಪ್ರಿಯರಾದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾರಕ್ ಸಿನಿಮಾದ ಡೈರೆಕ್ಟರ್ ಇದೇ ಮಿಲನ ಪ್ರಕಾಶ್.
ತಾರಕ್​ನಲ್ಲಿ ದರ್ಶನ್​ಗೆ ಆ್ಯಕ್ಷನ್ ಕಟ್ ಹೇಳಿದ್ದ ಮಿಲನ ಡೈರೆಕ್ಟರ್ ಮತ್ತೊಂದು ಕಥೆಯನ್ನು ದರ್ಶನ್​ಗಾಗಿ ಮಾಡುತ್ತಿದ್ದಾರೆ. ದರ್ಶನ್ ಒನ್​ ಲೈನ್ ಸ್ಟೋರಿ ಕೇಳಿ ಸಿನಿಮಾಕ್ಕೆ ಓಕೆ ಅಂದಿದ್ದಾರೆ. ಫಸ್ಟ್ ಹಾಫ್ ಸ್ಕ್ರಿಪ್ಟ್ ಮುಗಿದಿದೆ. ದರ್ಶನ್ ಅವರ ಮದಕರಿ ನಾಯಕ ಸಿನಿಮಾ ಮುಗಿದ ಮೇಲೆ ಈ ಸಿನಿಮಾ ಸೆಟ್ಟೇರಲಿದೆ 2020ರಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ ಎಂದು ಪ್ರಶಾಂತ್ ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...