ಮದಗಜಕ್ಕಾಗಿ ಕಾಲೇಜಿಗೆ ರಜೆ ನೀಡಿ ಎಂದು ಪತ್ರ ಬರೆದ ವಿದ್ಯಾರ್ಥಿ

Date:

ಶ್ರೀಮುರಳಿ ಅವರಿಗೆ ಎಲ್ಲ ವಯಸ್ಸಿನ ಅಭಿಮಾನಿಗಳೂ ಇದ್ದಾರೆ. ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಫ್ಯಾನ್ಸ್​ ಇದ್ದಾರೆ. ಶ್ರೀಮುರಳಿ ಅಭಿನಯದ ಸಿನಿಮಾ ಮದಗಜ ಇನ್ನೇನು ರಿಲೀಸ್​ ಆಗಲಿದೆ. ಹೀಗಿರುವಾಗ ರೋರಿಂಗ್ ಸ್ಟಾರ್​ ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗುವುದು. ಶ್ರೀಮುರಳಿ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನ ಸಿನಿಮಾ ನೋಡಲು ಇಡೀ ಕಾಲೇಜಿಗೆ ಒಂದು ದಿನ ರಜೆ ನೀಡಿ ಎಂದು ಪ್ರಿನ್ಸಿಪಾಲ್​ಗೆ ಪತ್ರ ಬರೆದಿದ್ದಾರಂತೆ.

ಹೌದು, ಮೈಸೂರಿನ ಜ್ಞಾನೋದಯ ಕಾಲೇಜಿನ ವಿದ್ಯಾರ್ಥಿ ವಿಕ್ರಮ್​ ಎಂಬುವರು ತಮ್ಮ ಕಾಲೇಜಿನ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ. ಸಿನಿಮಾ ರಿಲೀಸ್​ ಆಗುತ್ತಿರುವ ದಿನಾಂಕ ಡಿ. 3ರಂದು ಇಡೀ ಕಾಲೇಜಿಗೆ ರಜೆ ನೀಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. 

ಈ ವಿಷಯವನ್ನು ಮದಗಜ ಸಿನಿಮಾದ ನಿರ್ದೇಶಕ ಮಹೇಶ್​ ಕುಮಾರ್ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮೊದಲ ದಿನ ಫಸ್ಟ್​ ಶೋ ನೋಡಲು ಎಷ್ಟು ಕಾತರರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಾಬರ್ಟ್​ ಸಿನಿಮಾದ ನಿರ್ಮಾಪಕ ಉಮಾಪತಿ ನಿರ್ಮಾಣದ ಮದಗಜ ಸಿನಿಮಾದ ಟೈಟಲ್​ ಟ್ರ್ಯಾಕ್​ ಇತ್ತೀಚಗಷ್ಟೆ ರಿಲೀಸ್​ ಆಗಿತ್ತು. ಅಲ್ಲದೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಕ್ಕಾ ಮಾಸ್​ ಎಂಟರ್​ಟೈನರ್ ಆಗಿರುವ ಮದಗಜ ಸಿನಿಮಾವನ್ನು 1500 ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಯೋಜನೆ ಚಿತ್ರತಂಡದ್ದಾಗಿದೆ. ಇನ್ನು ಈ ಸಿನಿಮಾದಲ್ಲಿ ನಟಿ ಆಶಿಕಾ ರಂಗನಾಥ್​ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

 

 

Share post:

Subscribe

spot_imgspot_img

Popular

More like this
Related

2ನೇ ಬೆಳೆಗೆ ನೀರಿಲ್ಲದಿದ್ದರೆ ಎಕರೆಗೆ 50 ಸಾವಿರ ರೂ.ಪರಿಹಾರ ಕೊಡಿ: ನಿಖಿಲ್ ಕುಮಾರಸ್ವಾಮಿ ಆಗ್ರಹ

2ನೇ ಬೆಳೆಗೆ ನೀರಿಲ್ಲದಿದ್ದರೆ ಎಕರೆಗೆ 50 ಸಾವಿರ ರೂ.ಪರಿಹಾರ ಕೊಡಿ: ನಿಖಿಲ್...

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಹಾಡಹಗಲೇ ಕೋಟಿ ಕೋಟಿ ದರೋಡೆ!

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಹಾಡಹಗಲೇ ಕೋಟಿ ಕೋಟಿ ದರೋಡೆ! ಬೆಂಗಳೂರು:  ಸಿಲಿಕಾನ್ ಸಿಟಿ...

Mantri Mall: ಮತ್ತೆ ಮಲ್ಲೇಶ್ವರಂ ಮಂತ್ರಿ ಮಾಲ್ʼ​ಗೆ ಬಿತ್ತು ಬೀಗ!

Mantri Mall: ಮತ್ತೆ ಮಲ್ಲೇಶ್ವರಂ ಮಂತ್ರಿ ಮಾಲ್ʼ​ಗೆ ಬಿತ್ತು ಬೀಗ! ಬೆಂಗಳೂರು: ಕೋಟಿ...

ಭ್ರಷ್ಟ-ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ: ವಿಜಯೇಂದ್ರ

ಭ್ರಷ್ಟ-ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ: ವಿಜಯೇಂದ್ರ ದಕ್ಷಿಣ ಕನ್ನಡ:...