ನಿಶ್ಚಯವಾಗಿದ್ದ ಮದುವೆಗಳು ಎಂಗೇಜ್ಮೆಂಟ್ ಬಳಿಕ ಮುರಿದು ಬಿದ್ದಿರೋದು, ಮದುವೆಗೆ ತಿಂಗಳು, ವಾರ ಇರುವಾಗ ಮುರಿದು ಬಿದ್ದಿರೋದು..ಅಷ್ಟೇ ಅಲ್ಲದೆ ಹಸೆಮಂಟಪದಲ್ಲಿ ಮುರಿದು ಬಿದ್ದಿರೋದು ನಿಮ್ಗೆ ಗೊತ್ತಿದೆ. ಇಲ್ಲೊಂದು ಮದುವೆ ಏಡ್ಸ್ ಹೆಸರಲ್ಲಿ ಮದುವೆ ನಿಂತಿದೆ. ವರನೇ ತನಗೆ ಏಡ್ಸ್ ಎಂದು ನಾಟಕವಾಡಿ ತನ್ನ ಮದುವೆಯನ್ನು ನಿಲ್ಲಿಸಿಕೊಂಡು… ಜೈಲಿಗೆ ಹೋಗಿದ್ದಾನೆ.
ಹೌದು.. ಮದುವೆ ನಿಲ್ಲಿಸಲು ತನಗೆ ಏಡ್ಸಿದೆ ಎಂದು ನಾಟಕವಾಡಿದ್ದ ವರನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಕಿರಣ್ ಆರೋಪಿ. ಡಿಸೆಂಬರ್ 1 ರಂದು ಕಿರಣ್ ಕುಮಾರ್ ಮದುವೆ ನಿಗದಿಯಾಗಿತ್ತು. ಮದುವೆಗೆ 4 ದಿನ ಇರುವಾಗ ಕಿರಣ್ ಕುಮಾರ್ ತನಗೆ ಹೆಚ್ ಐ ವಿ ಸೋಂಕಿದೆ ಎಂದು ಸುಳ್ಳು ಹೇಳಿ ಮದುವೆ ನಿಲ್ಲಿಸುವಂತೆ ದೊಂಬಾಲು ಬಿದ್ದಿದ್ದ. ಮದುವೆಗೆ 15 ಲಕ್ಷ ರೂ ಖರ್ಚು ಮಾಡಿ ತಯಾರಿ ಮಾಡಿಕೊಂಡಿದ್ದ ಯುವತಿ ಮನೆಯವರು ಜಯ ನಗರ ಠಾಣೆಗೆ ದೂರು ನೀಡಿದ್ದು, ಪರೀಕ್ಷೆಗೆ ಒಳಪಡಿಸಿದಾಗ ಏಡ್ಸಿಲ್ಲ ಎಂಬುದು ತಿಳಿದುಬಂದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಮದುವೆಗೆ ನಾಲ್ಕೇ ನಾಲ್ಕು ದಿನ ಬಾಕಿ ಇರುವಾಗ ತಾನೊಬ್ಬ ಏಡ್ಸ್ ರೋಗಿ ಎಂದ ವರ!
Date:






