ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ: ಪ್ರಭು ಚೌಹಾಣ್ ಪುತ್ರನ ವಿರುದ್ಧ ಯುವತಿ ದೂರು
ಬೆಂಗಳೂರು: ಮಾಜಿ ಸಚಿವ ಹಾಗೂ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಯುವತಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ನಂತರ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ಸಂತ್ರಸ್ತೆಯ ಪ್ರಕಾರ, 2023ರ ಡಿಸೆಂಬರ್ 25ರಂದು ನಿಶ್ಚಿತಾರ್ಥ ನಡೆದಿದ್ದು, ಬಳಿಕ ಹೊಂದಾಣಿಕೆಗೆ ಪ್ರತೀಕ್ ಅವರೊಂದಿಗೆ ಬೇರೆ ಸ್ಥಳಕ್ಕೆ ಕಳಿಸಲಾಗಿದೆ. ಈ ಸಂದರ್ಭದಲ್ಲಿ, ಪ್ರತೀಕ್ ಅವರನ್ನು ಮಹಾರಾಷ್ಟ್ರದ ಲಾತೂರಿಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಮದುವೆಗೆ ಒತ್ತಾಯ ಮಾಡಿದ್ರೆ ಮುಂದೂಡಿದ್ದಾರೆ. ಸಾಲದಕ್ಕೆ ಅವರ ಮನೆಗೆ ಹೋಗಿ ನನ್ನ ಪೋಷಕರು ಕೇಳಿದ್ರೆ ಗಲಾಟೆ ಮಾಡಿದ್ದು, ನಮ್ಮ ಮನೆಯವರನ್ನ ಬಡವರು ಎಂದು ಹೀಯಾಳಿಸಿದ್ದಾರೆ. ಈ ಕುರಿತು 2025ರ ಜುಲೈ 6ರಂದು ಔರಾದ್ನ ಹೋಕ್ರಾಣ್ ಠಾಣೆಗೆ ದೂರು ಕೊಡಲು ಹೋಗಿದ್ವಿ. ಆದ್ರೆ, ಪೊಲೀಸರು ದೂರನ್ನ ಸ್ವೀಕಾರ ಮಾಡಿಲ್ಲ ಎಂದು ಆರೋಪಿಸಿದ್ದಾಳೆ.