ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಇಂದಿನಿಂದ ಅಗ್ಗದ ದರದಲ್ಲಿ ಸಿಗಲಿದೆ ದುಬಾರಿ ಮದ್
ಬೆಂಗಳೂರು: ಅಬಕಾರಿ ಇಲಾಖೆ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ದುಬಾರಿ ಬ್ರಾಂಡ್ಗಳ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇಂದಿನಿಂದ ಅಗ್ಗದ ದರದಲ್ಲಿ ಸಿಗಲಿದೆ ದುಬಾರಿ ಮದ್ಯ. ರಾಜ್ಯದಲ್ಲಿ ಮದ್ಯ ಮತ್ತು ಬಿಯರ್ ಬೆಲೆಗಳನ್ನು ಪರಿಷ್ಕರಿಸಲು ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರಿಂದ ರಾಜ್ಯದಲ್ಲಿ ಮದ್ಯದ ದರದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವಾಗಲಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ.
ಎಣ್ಣೆ ರೇಟ್ ಇಳಿಕೆ
ಹೇಗಿದೆ ನೂತನ ಪರಿಷ್ಕತ ದರ ಪಟ್ಟಿ
451-500 ದರ ಸ್ಲ್ಯಾಬ್ಗೆ ಸುಂಕ 294 ರೂ. ಪರಿಷ್ಕರಣೆ ಆಗಲಿದೆ
501-550 ದರ ಸ್ಲ್ಯಾಬ್ಗೆ ಹೆಚ್ಚುವರಿ ಸುಂಕ 386ರೂ ಪರಿಷ್ಕರಣೆ
551-650 ಘೋಷಿತ ಉತ್ಪಾದನಾ ದರ ಸ್ಲ್ಯಾಬ್ಗೆ ಸುಂಕ 523 ರೂ ಪರಿಷ್ಕರಣೆ
651-750 ವರೆಗಿನ ಘೋಷಿತ ಉತ್ಪಾದನಾ ದರ ಸ್ಲ್ಯಾಬ್ಗೆ ಹೆಚ್ಚುವರಿ ಸುಂಕ 620ರೂ ಇಳಿಕೆ
751-900 ದರ ಸ್ಲ್ಯಾಬ್ಗೆ ಸುಂಕ 770 ರೂ ಪರಿಷ್ಕರಣೆ
901-1050 ದರ ಸ್ಲ್ಯಾಬ್ಗೆ ಸುಂಕ 870 ರೂ ಪರಿಷ್ಕರಣೆ
1051-1300 ದರ ಸ್ಲ್ಯಾಬ್ಗೆ ಸುಂಕ 970 ರೂ ಪರಿಷ್ಕರಣೆ
1301-1800 ದರ ಸ್ಲ್ಯಾಬ್ಗೆ ಸುಂಕ 1200 ರೂ ಪರಿಷ್ಕರಣೆ
1801-2500 ದರ ಸ್ಲ್ಯಾಬ್ಗೆ ಸುಂಕ 1400 ರೂ ಪರಿಷ್ಕರಣೆ
2501-5000 ದರ ಸ್ಲ್ಯಾಬ್ಗೆ ಸುಂಕ 1600 ರೂ ಇಳಿಕೆ
5001-8000 ದರ ಸ್ಲ್ಯಾಬ್ಗೆ ಸುಂಕ 2000 ರೂ ಇಳಿಕೆ
8001-12,500 ದರ ಸ್ಲ್ಯಾಬ್ಗೆ ಸುಂಕ 2400 ರೂ ಇಳಿಕೆ
12501-15000 ದರ ಸ್ಲ್ಯಾಬ್ಗೆ ಸುಂಕ 2600 ರೂ ಇಳಿಕೆ
15001-20000 ದರ ಸ್ಲ್ಯಾಬ್ಗೆ ಸುಂಕ 2800ರೂ ಸುಂಕ ಇಳಿಕೆ
ಮತ್ತು 20000 ಮೇಲ್ಪಟ್ಟ ದರ ಸ್ಲ್ಯಾಬ್ಗೆ ಹೆಚ್ಚುವರಿ ಅಬಕಾರಿ ಸುಂಕ 3000 ರೂ ವಿಧಿಸಲಾಗುತ್ತದೆ