ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

Date:

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಕೋಪ ಜಾಸ್ತಿ, ಕೆಲಸದ ಒತ್ತಡದಲ್ಲೋ ಅಥವಾ ಇನ್ಯಾವುದೋ ಕಾರಣಕ್ಕೋ ನಮ್ಮವರು ಅನಿಸಿಕೊಂಡವರಿಗೆ ಸಿಕ್ಕಾಪಟ್ಟೆ ಬೈದು ಬಿಡ್ತೀವಿ…! ಎಷ್ಟೋಸಲ ಯಾರ ಮೇಲಿನ ಸಿಟ್ಟನ್ನು ನಮ್ಮವರ ಮೇಲೆ ತೀರಿಸಿಕೊಳ್ತೀವಿ…! ಆಗ ಅವರೆಷ್ಟು ಬೇಜಾರು ಮಾಡಿಕೊಳ್ಳಬಹುದು? ಈ ಅನುಭವ ಸ್ವತಃ ನಿಮಗೂ ಆಗಿರಬಹುದು…! ಬೇರೆಯರ ಮನಸ್ಸಿಗೆ ನೋವುಂಟು ಮಾಡಿ, ಕ್ಷಮೆ ಕೇಳಿದ್ರೆ ಪ್ರಯೋಜನವೇನು..? ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು…!


ಹೀಗೆ ಒಬ್ಬ ಹುಡುಗನಿಗೆ ಕಂಡಾಪಟ್ಟೆ ಕೋಪವಿತ್ತಂತೆ. ಯಾರ ಮೇಲಾದ್ರು ರೇಗಾಡ್ತಾನೇ ಇದ್ನಂತೆ. ಒಂದು ದಿನ ತನ್ನ ಅಪ್ಪನ ಹತ್ತಿರ ಹೋಗಿ, ‘ಅಪ್ಪಾ ನನಗೆ ತುಂಬಾ ಕೋಪ ಬರುತ್ತಪ್ಪಾ.. ಎಲ್ಲರ ಮೇಲು ಸಿಟ್ಟಾಗ್ತೀನಿ. ಇದನ್ನು ಕಂಟ್ರೋಲ್ ಮಾಡಿಕೊಳ್ಳೋದು ಹೇಗೆ ಅಂತ’ ಕೇಳ್ತಾನಂತೆ.


ಆಗ ಆ ತಂದೆ ಒಂದಿಷ್ಟು ಮೊಳೆಗಳನ್ನು ಕೊಟ್ಟು, ನಿನಗೆ ಕೋಪ ಬಂದಾಗಲೆಲ್ಲಾ ಈ ಮೊಳೆಗಳನ್ನು ಗೋಡೆಗೆ ಹೊಡಿ’ ಅಂತಾರಂತೆ. ಅಪ್ಪ ಯಾಕಾಗಿ ಹೀಗೆ ಹೇಳಿದ್ರು ಅಂತ ಅವನಿಗೆ ಅರ್ಥ ಆಗಿರ್ಲಿಲ್ಲ. ಆದ್ರೂ ಅಪ್ಪ ಹೇಳಿದ್ದಾರಲ್ಲಾ? ಟ್ರೈ ಮಾಡುವ ಅಂತ ಮರುದಿನ ಕೋಪ ಬಂದಾಗಲೆಲ್ಲಾ ಗೋಡೆಗೆ ಮೊಳೆ ಹೊಡೆದ. ಮೊಳೆಗಳೆಲ್ಲಾ ಖಾಲಿ ಆದಮೇಲೆ ಪುನಃ ಅಪ್ಪನ ಬಳಿಗೆ ಬಂದ ಮಗ, ‘ನೀವುಕೊಟ್ಟ ಮೊಳೆಗಳೆಲ್ಲಾ ಖಾಲಿ ಅಂದ’. ಹಾಗಾದ್ರೆ ನಿನಗೆ ತುಂಬಾ ಜನರ ಮೇಲೆ, ತುಂಬಾ ಸಲ ಕೋಪ ಬಂದಿದೆ ಅಂತ ಆಯ್ತು. ಸರಿ, ನಾಳೆಯಿಂದ ಒಂದೊಂದೆ ಮೊಳೆಗಳನ್ನು ಕೀಳುತ್ತಾ ಬಾ ಅಂತ ಅಪ್ಪ ಹೇಳಿದ್ರು. ಮಗ ಕಷ್ಟಪಟ್ಟು ಮೊಳೆಗಳನ್ನು ಕೀಳುವ ಕೆಲಸದಲ್ಲಿ ನಿರತನಾದ. ಮೊಳೆಗಳನ್ನೆಲ್ಲಾ ಕಿತ್ತು ಬಂದು, ‘ಅಪ್ಪಾ ಮೊಳೆಗಳನ್ನು ಕಿತ್ತೆ. ಆದರೆ, ಗೋಡೆಗಳಲ್ಲಿ ರಂಧ್ರಗಳು ಬಿದ್ದಿವೆ’ ಅಂದನಂತೆ.


ಆಗ ತಂದೆ ಹೇಳ್ತಾರಂತೆ, ನೋಡು ಒಬ್ಬರ ಮನಸ್ಸನ್ನು ಗೋಡೆ ಅಂತ ಅನ್ಕೊಂಡ್ರೆ, ನಾವು ಮಾಡುವ ನೋವುಗಳು ಮೊಳೆಗಳು..! ಅವರ ಮನಸ್ಸಿಗೆ ನೋವುಂಟು ಮಾಡಿ, ಬಳಿಕ ಮೊಳೆಯನ್ನು ಕಿತ್ತರೆ.. ಅಂದ್ರೆ ಕ್ಷಮೆ ಕೇಳಿದ್ರೆ ಉಪಯೋಗವೇನು..? ಮನಸ್ಸಿಗೆ ಆದ ಗಾಯ ಮಾಯಲ್ಲ’ ಅಂತ.


ಇದು ನಿಮಗೂ ಗೊತ್ತಿರಬಹುದು. ಇನ್ನೊಮ್ಮೆ ನೆನಪಿಸೋಣ ಅಂತ ಅನಿಸ್ತು. ಸೋ, ನಾವು ಕೋಪದಿಂದ ಯಾರ ಮನಸ್ಸಿಗಾದರೂ ನೋವುಂಟು ಮಾಡಿ, ಬಳಿಕ ಕ್ಷಮೆ ಕೇಳಿದ್ರೆ ಸರಿಯಲ್ಲ. ಅವರ ಮನಸ್ಸಿಗೆ ಒಮ್ಮೆಯಾದ ಗಾಯ ಎಂದೂ ಮಾಯುವುದಿಲ್ಲ. ಹಾಗಾಗಿ ಮಾತಡೋ ಮುಂಚೆ ಯೋಚ್ನೆ ಮಾಡಣ… ಮಾತಾಡಿ ಯೋಚ್ನೆ ಮಾಡೋದು ಬೇಡ.

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ಈ ಗೂಗಲ್ ಟ್ರಿಕ್ಸ್ ಗಳು ನಿಮಗೆ ಗೊತ್ತಾ..?

 

Share post:

Subscribe

spot_imgspot_img

Popular

More like this
Related

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ. ಶಿವಕುಮಾರ್

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ....

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ ಬೆಂಗಳೂರು: ಕರಾವಳಿ ಹಾಗೂ...

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...