ಮನೆಯಲ್ಲಿ ನೋಡಿದ ಸಂಗಾತಿಯನ್ನು ಒಪ್ಪಿಕೊಳ್ಳುವ ಮುನ್ನ…

Date:

ಎದುರಾಗಬಹುದು ಎಂಬ ಅಳುಕು ಮೂಡುತ್ತಿದೆಯೇ? ಹಾಗಾದರೆ, ನೀವು ಈ ಸಂಬಂಧವನ್ನು ಕೇವಲ ನಿಮ್ಮ ಹಿರಿಯರು ನಿಶ್ಚಯಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಒಪ್ಪಬಾರದು.

ಬದಲಿಗೆ ಕೆಲವು ಸಂಗತಿಗಳನ್ನು ಪರಿಶೀಲಿಸಿ, ಪರಾಮರ್ಶಿಸಿ, ಸಾಧಕ ಬಾಧಕಗಳನ್ನು ಪರಿಗಣಿಸಿ ಎಲ್ಲಾ ರೀತಿಯಿಂದಲೂ ಈ ವಿವಾಹ ಸಮರ್ಪಕ ಎಂದು ಖಚಿತಪಡಿಸಿಯೇ ನೀವು ಈ ವಿವಾಹಕ್ಕೆ ಒಪ್ಪಿಕೊಂಡರೆ ಒಳ್ಳೆಯದು. ಇದರಿಂದ ಮುಂದಿನ ಜೀವನದಲ್ಲಿ ಯಾವುದೇ ತೊಂದರೆ ಎದುರಾಗದೇ ಸುಖವಾಗಿರಲು ಸಾಧ್ಯವಾಗುತ್ತದೆ.

ಪ್ರೇಮ ವಿವಾಹ ಇಬ್ಬರು ವ್ಯಕ್ತಿಗಳು ಪರಸ್ಪರ ಒಪ್ಪಿಕೊಂಡು ಆಗುವ ವಿವಾಹವಾಗಿದ್ದು ಮನಮೆಚ್ಚಿದ ವ್ಯಕ್ತಿಯೇ ಜೀವನಸಂಗಾತಿಯಾಗುವ ಹರ್ಷ ಮತ್ತು ಸಂತಸ ತುಂಬು ತುಳುಕುತ್ತಿರುತ್ತದೆ. ವಾಸ್ತವದಲ್ಲಿ, ದುರ್ದೈವವೋ ಎಂಬತೆ, ಇಂದು ಪರ್ಯವಸಾನಗೊಳ್ಳುತ್ತಿರುವ ವಿವಾಹಗಳಲ್ಲಿ ಪ್ರೇಮ ವಿವಾಹಗಳೇ ಹೆಚ್ಚು. ನ್ಯಾಯಾಲಗಳಲ್ಲಿ ಬರುವ ವಿಚ್ಛೇದನ ಪ್ರಕರಣಗಳಲ್ಲಿ ಸಿಂಹಪಾಲು ಪ್ರೇಮವಿವಾಹವಾದ ಜೋಡಿಗಳೇ ಇರುತ್ತಾರೆ. ಇವನ್ನು ಪರಿಗಣಿಸಿದರೆ ಹಿರಿಯರು ನಿಶ್ಚಯಿಸಿದ ವಿವಾಹಗಳೇ ಹೆಚ್ಚಾಗಿ ಯಶಸ್ವಿಯಾಗಿವೆ ಎಂಬುದು ಖಚಿತ.

ಇಂದಿನ ದಿನಗಳಲ್ಲಿ ಪ್ರೇಮವಿವಾಹಕ್ಕಿಂತಲೂ ಹಿರಿಯರು ನಿಶ್ಚಯಿಸಿದ ವಿವಾಹವನ್ನೇ ಒಪ್ಪಿಕೊಳ್ಳುತ್ತಿರುವುದು ಹೆಚ್ಚಾಗಿ ಕಾಣಬರುತ್ತಿದೆ. ಏಕೆಂದರೆ, ಒಂದು ಸಂಬಂಧ ಕೂಡಿಬರಬೇಕಾದರೆ ಹಿರಿಯರು ಮಕ್ಕಳ ಆದ್ಯತೆ ಅವಶ್ಯಕತೆಗಳ ಜೊತೆಗೇ, ಮಕ್ಕಳು ಕಾಣದ ಇನ್ನೂ ಕೆಲವಾರು ವಿಷಯಗಳನ್ನು ಗಮನಿಸುತ್ತಾರೆ.

ವಿಶೇಷವಾಗಿ, ಕುಟುಂಬ ಸಂಬಂಧಗಳು. ತಮ್ಮ ಮಗಳು ಹೋಗಲಿರುವ ಮನೆಯಲ್ಲಿ ಆಕೆ ಸುಖವಾಗಿರಬೇಕು ಎಂಬುದೇ ಹಿರಿಯರ ಮೊದಲ ಆದ್ಯತೆಯಾಗಿರುತ್ತದೆ. ಪ್ರೇಮ ವಿವಾಹದಲ್ಲಿ ಈ ವಿಷಯಕ್ಕೆ ನಂತರದ ಸ್ಥಾನ ಸಿಗುವುದೇ ಪ್ರೇಮ ವಿವಾಹಗಳ ವೈಫಲ್ಯಕ್ಕೆ ಕಾರಣ ಎಂದು ಹೇಳಬಹುದು.

ಹಿರಿಯರು ನಿಶ್ಚಯಿಸಿದ ವರ ಅಥವಾ ವಧು ಹೇಗಿರುತ್ತಾನೋ / ಳೋ ಎಂಬ ಆತಂಕ ಹಿರಿಯರು ನಿಶ್ಚಯಿಸಿದ ಮದುವೆಗಳಲ್ಲಿ ಇದ್ದೇ ಇರುತ್ತದೆ. ಏಕೆಂದರೆ, ಓರ್ವ ವ್ಯಕ್ತಿಯ ಗುಣವನ್ನು ಹೊರನೋಟದಿಂದ ಎಂದಿಗೂ ಗುರುತಿಸಲು ಸಾಧ್ಯವಿಲ್ಲ. ಆದ್ದರಿಂದ ನೀವು ಹಿರಿಯರು ನಿಶ್ಚಯಿಸಿದ ಸಂಬಂಧವನ್ನು ಒಪ್ಪಿಕೊಳ್ಳುವ ಮುನ್ನ ಖಚಿತಪಡಿಸಿಕೊಳ್ಳಬೇಕಾದ ನಾಲ್ಕು ಸಂಗತಿಗಳು ಇಲ್ಲಿವೆ

ಮೊದಲಾಗಿ, ನಿಮ್ಮ ಹಿರಿಯರು ನಿಶ್ಚಯಿಸಿದ ವ್ಯಕ್ತಿಯೊಂದಿಗೆ ನೀವು ನೇರವಾಗಿ ಮಾತನಾಡುವ ಅವಕಾಶವನ್ನು ಕೇಳಿ ಪಡೆಯಬೇಕು. ಕೆಲವು ಸಂಸ್ಕೃತಿಗಳಲ್ಲಿ ವಿವಾಹದ ಮೊದಲ ರಾತ್ರಿಯವರೆಗೂ ವರ ತನ್ನ ವಧುವಿನ ಮುಖವನ್ನೇ ನೋಡಿರುವುದಿಲ್ಲ. ಆದರೆ ಈ ಪದ್ದತಿ ಈಗ ಇಲ್ಲ ಎಂಬುದೇ ಸಮಾಧಾನಕರ ವಿಷಯ. ನೀವು ನಿಮ್ಮ ಜೀವನಸಂಗಾತಿಯಾಗಲಿರುವ ವ್ಯಕ್ತಿಯೊಂದಿಗೆ ಮುಖಾಮುಖಿಯಾಗಿ ಮಾತನಾಡುವುದು ನಿಮ್ಮ ಹಕ್ಕು ಹಾಗೂ ನೀವು ಇದಕ್ಕಾಗಿ ಒಂದು ಸಮಯವನ್ನು ಮೀಸಲಿಡಲೇಬೇಕು.

ಈ ಸಂದರ್ಭದಲ್ಲಿ ನೀವಿಬ್ಬರೇ ಖಾಸಗಿಯಾಗಿ ಕುಳಿತು ನಿಮ್ಮಿಬ್ಬರ ಮನಸ್ಸಿನಲ್ಲಿರುವ ಪ್ರತಿ ವಿಷಯವನ್ನೂ ಖಚಿತಪಡಿಸಿಕೊಳ್ಳಬೇಕು. ನಿಮ್ಮ ಜೀವನಸಂಗಾತಿಯಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ ಹಾಗೂ ಭವಿಷ್ಯದ ಬಗ್ಗೆ ನಿಮ್ಮ ನಿರ್ಣಯಗಳನ್ನು ಖಚಿತಪಡಿಸಬೇಕು. ಜೀವನದ ಗುರಿ, ಉದ್ದೇಶಗಳು, ಇದಕ್ಕಿರುವ ಅಡ್ಡಿ ಆತಂಕಗಳು, ಕುಟುಂಬ ಕಲಹ ಮೊದಲಾದ ಎಲ್ಲಾ ವಿಷಯಗಳನ್ನೂ ಪ್ರಸ್ತಾಪಿಸಬೇಕು. ಇನ್ನೂ ಮುಖ್ಯ ಎಂದರೆ ನೀವು ಹಿಂದೆಂದೋ ಒಳಗಾಗಿದ್ದ ಓರ್ವ ವ್ಯಕ್ತಿಯ ಆಕರ್ಷಣೆ ಅಥವಾ ಮುರಿದ ಸಂಬಂಧಗಳ ಬಗ್ಗೆಯೂ ತಿಳಿಸಬೇಕು.

ಎಷ್ಟೋ ವಿಚ್ಛೇದನಗಳು ಈ ಒಂದು ವಿಷಯದ ಕಾರಣದಿಂದಲೇ ನ್ಯಾಯಾಲಯಕ್ಕೆ ಬಂದಿವೆ. ಹಿಂದೆ ಬೇರೊಂದು ಸಂಬಂಧ ಇದ್ದುದು ತನಗೆ ಮದುವೆಗೂ ಮುನ್ನ ತಿಳಿಸಿರಲಿಲ್ಲ, ಇದು ದ್ರೋಹ ಎಂದೇ ಪರಿಗಣಿಸಬೇಕು ಎಂದು ನ್ಯಾಯಾಲಯಕ್ಕೆ ವಿಚ್ಛೇದನ ಕೋರಿದ ಅರ್ಜಿಯಲ್ಲಿ ಸ್ಪಷ್ಟವಾಗಿಯೇ ನಿವೇದಿಸಿಕೊಳ್ಳಲಾಗಿದೆ. ಆದ್ದರಿಂದ ಈ ವಿಷಯಗಳ ಸಹಿತ ಪ್ರತಿ ವಿಷಯವನ್ನೂ ಖಚಿತಪಡಿಸಿಕೊಳ್ಳಿ. ಇಬ್ಬರೂ ಪರಸ್ಪರ ಮನ ಬಿಚ್ಚಿ ಮಾತನಾಡುವುದು ಅವಶ್ಯಕ.

ಎಷ್ಟೋ ಬಾರಿ, ವ್ಯಕ್ತಿಯೊಬ್ಬರಿಗೆ ಕೆಲವು ಪ್ರಶ್ನೆಗಳನ್ನು ಕೇಳಬೇಕೆಂದುಕೊಂಡಿದ್ದರೂ ಕೇಳಲಾಗದೇ ಹೋಗುತ್ತೇವೆ. ಆದರೆ ನಿಮ್ಮ ಜೀವನಸಂಗಾತಿ ಆಗಲಿರುವ ವ್ಯಕ್ತಿಯಲ್ಲಿ ಈ ಸಂಕೋಚ ಸಲ್ಲದು. ಮೊದಲೇ ಹೇಳಿ, ಈ ಪ್ರಶ್ನೆ ಕೊಂಚ ವಿಚಿತ್ರ ಎನಿಸಬಹುದು, ಆದರೆ ನಮ್ಮಿಬ್ಬರ ಜೀವನಕ್ಕೆ ಸಂಬಂಧಿಸಿದಂತೆ ಇವು ಅಗತ್ಯ ಎಂದು ತಿಳಿಸಿಯೇ ಮುಂದುವರೆಯಬೇಕು.

ಇದರಲ್ಲಿ ತೀರಾ ಖಾಸಗಿ ವಿಷಯಗಳು, ಹಿಂದಿನ ವಿಷಯಗಳು, ಆರೋಗ್ಯ ಸಂಬಂಧಿ (ಅಂದರೆ, ಕಾಯಿಲೆಗಳು), ಅನುವಂಶಿಕ ರೋಗಗಳು, ಕುಟುಂಬ ಕಲಹಗಳು, ನಿಮಗೆ ಆಗದೇ ಇರುವ ಕುಟುಂಬಗಳು, ಈಗ ಲಭಿಸುತ್ತಿರುವ ವೇತನ, ಮುಂದೆ ಎಲ್ಲಿ ನೆಲೆಸಬೇಕು ಎಂದುಕೊಂಡಿರುವುದು ಇತ್ಯಾದಿ. ವಿಶೇಷವಾಗಿ, ವಿದೇಶಕ್ಕೆ ಉದ್ಯೋಗ ನಿಮಿತ್ತ ಹೋಗುವವರಿದ್ದರೆ ಈ ಬಗ್ಗೆಯೂ ಕೇಳಿಕೊಳ್ಳಬೇಕು.

ಏಕೆಂದರೆ ವಿವಾಹದ ಬಳಿಕ ಮೋಸ ಎಂದು ತಿಳಿದುಬರುವ ವಿಷಯಗಳಲ್ಲಿ ವಿದೇಶದಲ್ಲಿ ಈ ವ್ಯಕ್ತಿಯ ಜೀವನವನ್ನು ತೋರಿಸಿರುವ ವಿಷಯಗಳೂ ಪ್ರಮುಖವಾಗಿವೆ. ಇದರಿಂದ, ಇದುವರೆಗೂ ನಾವು ಯೋಚಿಸದೇ ಇದ್ದ ಕೆಲವು ನಿರ್ಧಾರಗಳನ್ನು ಸರಿಯೋ ತಪ್ಪೋ ಎಂದು ಒರೆ ಹಚ್ಚಲು ಸಾಧ್ಯವಾಗುತ್ತದೆ.

ವಾಸ್ತವದಲ್ಲಿ, ವಿವಾಹ ಒಂದು ನಡೆಯಿತು ಎಂದರೆ ಇದು ಇಬ್ಬರು ವ್ಯಕ್ತಿಗಳ ನಡುವೆ ಮಾತ್ರವಲ್ಲ, ಎರಡು ಕುಟುಂಬಗಳ ನಡುವೆ ಆಗುವ ಸಂಬಂಧವೇ ಆಗಿದೆ. ನೀವು ನಿಮ್ಮ ಜೀವನಸಂಗಾತಿಯನ್ನು ಆರಿಸಿಕೊಂಡು ಒಪ್ಪಿಕೊಂಡರೂ ನಿಮ್ಮ ಅತ್ತೆ ಮಾವಂದಿರಾಗುವ ವ್ಯಕ್ತಿಗಳ ಬಗ್ಗೆಯೂ ನೀವು ಮನ ಬಿಚ್ಚಿ ಮಾತನಾಡಬೇಕು. ಈ ಮೂಲಕ ನೀವು ಅವರನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಹಾಗೂ ಅವರ ಕುಟುಂಬ ಮೌಲ್ಯಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ.

ಹಿರಿಯರು ನಿಶ್ಚಯಿಸಿದ ವಿವಾಹಕ್ಕೆ ನೀವು ಆಗಬಹುದು ಎಂದು ಹೇಳುವ ಮೊದಲು ಪರಿಗಣಿಸಬೇಕಾದ ಪ್ರಮುಖ ವಿಷಯವೆಂದರೆ ನಿಮ್ಮಿಬ್ಬರ ನಡುವೆ ಪರಸ್ಪರ ಹೊಂದಾಣಿಕೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು. ಆರ್ಥಿಕ ಸ್ಥಿತಿಯಿಂದ ಮಾನಸಿಕ ಸ್ಥಿತಿಯ ಹೊಂದಾಣಿಕೆಯವರೆಗೆ, ಮದುವೆಗೆ ಒಪ್ಪುವ ಮೊದಲು ಅದರ ಬಗ್ಗೆ ಸ್ಪಷ್ಟವಾಗಿ ಮಾತನಾಡಿ ಜೀವನದ ನಿರೀಕ್ಷೆಗಳನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.

ಉದಾಹರಣೆಗೆ, ವಧುವಿಗೆ, ವಿವಾಹದ ಬಳಿಕ ತಮ್ಮದೇ ಸ್ವಂತ ಕಾರಿನಲ್ಲಿ ಓಡಾಡಬೇಕು ಎಂದಿರುತ್ತದೆ. ಆದರೆ ವರನ ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲದಿದ್ದು ಸ್ವಂತ ಕಾರು ಕೊಳ್ಳಲು ಸಾಧ್ಯವಾಗದೇ ಇದ್ದರೆ, ಮದುವೆಯ ಬಳಿಕ ಇದೇ ವಿಷಯಕ್ಕೆ ಭಿನ್ನಾಭಿಪ್ರಾಯ ಹಾಗೂ ಕಲಹ ಎದುರಾಗಬಹುದು. ನಿಮ್ಮ ಜೀವನ ಸಂಗಾತಿಯಾಗಿ ಬರಲಿರುವ ವ್ಯಕ್ತಿ ಎಲ್ಲಾ ರೀತಿಯಿಂದಲೂ ನಿಮಗೆ ಹೊಂದಿಕೊಳ್ಳುವ ವ್ಯಕ್ತಿಯೇ ಆಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅವಶ್ಯ.

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...