ಮನೆಯಲ್ಲಿ ‘ಹಲ್ಲಿ’ಗಳ ಕಾಟ ಹೆಚ್ಚಾಗಿದ್ಯಾ! ಇಲ್ಲಿದೆ ನೋಡಿ ಬೆಸ್ಟ್ ಟಿಪ್ಸ್
ಮನೆಯಲ್ಲಿ ಜಿರಳೆ, ಜೀರುಂಡೆಗಳು, ಹಲ್ಲಿಗಳು ಇರುವುದು ಸಾಮಾನ್ಯ. ಆದರೆ ಕೆಲವರು ಅವುಗಳು ಮನೆಯಲ್ಲಿದ್ರೆ ಸಾಕು ಕೆಂಡಾಮಂಡಲವಾಗ್ತಾರೆ. ಏಕೆಂದರೆ ಜಿರಳೆಗಳಂತಹ ಈ ಜೀವಿಗಳು ಅನೇಕ ರೀತಿಯ ಸೋಂಕುಗಳನ್ನು ಉಂಟುಮಾಡಬಹುದು. ಇನ್ನು ಕೆಲವರು ಮನೆಯಲ್ಲಿ ಹಲ್ಲಿಗಳಿದ್ದರೆ ಇಷ್ಟ ಪಡುವುದಿಲ್ಲ.
ಮಕ್ಕಳು ಮತ್ತು ವೃದ್ಧರಿರುವ ಮನೆಯಲ್ಲಿ ಅವುಗಳನ್ನು ಬಳಸದಿರುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ. ಆದರೆ, ಕೆಲವು ನೈಸರ್ಗಿಕ ಸಲಹೆಗಳನ್ನು ಅನುಸರಿಸಿದರೆ ಹಲ್ಲಿಗಳು ಮನೆಯಿಂದ ಓಡಿ ಹೋಗುತ್ತವೆ ಎಂದು ಹೇಳಲಾಗುತ್ತದೆ. ಆ ಸಲಹೆಗಳು ಯಾವುವು ಎಂದು ಇದೀಗ ತಿಳಿಯೋಣ ಬನ್ನಿ.
ಮೊಟ್ಟೆಯ ಚಿಪ್ಪು: ಮನೆಯಲ್ಲಿ ಎಗ್ ಕರಿ ಮಾಡಿದ ನಂತರ ಹೆಚ್ಚಿನವರು ಮೊಟ್ಟೆಯ ಚಿಪ್ಪನ್ನು ಡಸ್ಟ್‌ಬಿನ್‌ಗೆ ಎಸೆಯುತ್ತಾರೆ. ಆದರೆ, ಮೊಟ್ಟೆಯ ಚಿಪ್ಪನ್ನು ಮನೆಯ ಬಾಗಿಲು, ಕಿಟಕಿ, ಅಡುಗೆ ಮನೆ ಅಥವಾ ಇತರ ಸ್ಥಳಗಳಲ್ಲಿ ಇಡುವುದರಿಂದ ಹಲ್ಲಿಗಳ ಕಾಟದಿಂದ ಪಾರಾಗಬಹುದು.
ಬೆಳ್ಳುಳ್ಳಿ: ಬೆಳ್ಳುಳ್ಳಿ ಮತ್ತು ಲವಂಗದ ವಾಸನೆಯನ್ನು ಹಲ್ಲಿಗಳು ಇಷ್ಟಪಡುವುದಿಲ್ಲ. ಆದ್ದರಿಂದ ಬೆಳ್ಳುಳ್ಳಿ ಮತ್ತು ಲವಂಗವನ್ನು ಮನೆಯ ಸುತ್ತಲೂ ಇಡುವುದರಿಂದ ಹಲ್ಲಿಗಳು ದೂರ ಇರುತ್ತವೆ ಎಂದು ಹೇಳಲಾಗುತ್ತದೆ. ಹಲ್ಲಿಗಳು ವಾಸಿಸುವ ಸ್ಥಳಗಳ ಸುತ್ತಲೂ ಬೆಳ್ಳುಳ್ಳಿ ರಸವನ್ನು ಸಿಂಪಡಿಸಬಹುದು ಎಂದು ಹೇಳಲಾಗುತ್ತದೆ.
ಈರುಳ್ಳಿ: ಈರುಳ್ಳಿಯ ಘೋರ ವಾಸನೆ ಹಲ್ಲಿಗಳಿಗೂ ಇಷ್ಟವಾಗುವುದಿಲ್ಲ ಎನ್ನುತ್ತಾರೆ ತಜ್ಞರು. ಹಾಗಾಗಿ ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಗೋಡೆಗಳ ಮೇಲೆ ಸ್ವಲ್ಪ ಈರುಳ್ಳಿ ರಸವನ್ನು ಸಿಂಪಡಿಸಿದರೆ ಮನೆಯಿಂದ ಪಾರಾಗುತ್ತವೆ ಎಂದು ಹೇಳಲಾಗುತ್ತದೆ.
ನ್ಯಾಫ್ತಲೀನ್ ಬಾಲ್ಸ್: ಮನೆಯಿಂದ ಹಲ್ಲಿಗಳನ್ನು ಓಡಿಸಲು ನ್ಯಾಫ್ತಲೀನ್ ಬಾಲ್ಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ಇವುಗಳನ್ನು ಅಡುಗೆ ಮನೆಯ ಕಪಾಟುಗಳಲ್ಲಿ ಮತ್ತು ಕೆಲವೆಡೆ ತಿರುಗುವ ಜಾಗದಲ್ಲಿ ಇಟ್ಟರೆ ಉತ್ತಮ ಫಲ ನೀಡುತ್ತದೆ ಎನ್ನುತ್ತಾರೆ.
ಕಾಳುಮೆಣಸಿನ ಪುಡಿ: ಕಾಳುಮೆಣಸಿನ ಕಟುವಾದ ವಾಸನೆಯಿಂದ ಹಲ್ಲಿಗಳು ಮನೆಯಿಂದ ಹೊರಗೆ ಓಡಿಹೋಗುತ್ತವೆ. ಹಾಗಾಗಿ ಕಾಳುಮೆಣಸಿನ ಪುಡಿಯನ್ನು ಹಲ್ಲಿಗಳು ಹೆಚ್ಚಾಗಿ ಓಡಾಡುವ ಜಾಗದಲ್ಲಿ ಇಡುತ್ತಾರೆ. ಈ ಪುಡಿಯನ್ನು ನೀರಿನೊಂದಿಗೆ ಸಿಂಪಡಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು ಅಂತಾರೆ ತಜ್ಞರು.