ನಾಗಮಂಗಲದ ಬೈರಸಂದ್ರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಯಶ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು,ಬಾಡಿಗೆ ಮನೆಯಲ್ಲಿದ್ದಾಗ ಬಾಡಿಗೆ ಕೊಡದೆ ಇದ್ದವರು ಇವರು,
ಈತ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರ ಹಿರಿಮಗನೋ ಕಿರಿ ಮಗನೋ ನಂಗೆ ಗೊತ್ತಿಲ್ಲ. ಬೆಂಗಳೂರಿನಲ್ಲಿ ಬಾಡಿಗೆ ಮನೆಯವರಿಗೆ ಬಾಡಿಗೆ ಕೊಡೋಕೆ ಯೋಗ್ಯತೆ ಇಲ್ಲದೇ ಇದ್ದವರು ಇವತ್ತು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ಬಹಿರಂಗವಾಗಿ ರಾಕಿಂಗ್ ಸ್ಟಾರ್ ಯಶ್ ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಎಸಿ ಕಾರು ಅಂತೆಲ್ಲಾ ಮಾತನಾಡೋ ಇವರುಗೆ ಒಂದು ಮಾತು ಹೇಳೊಕೆ ಇಷ್ಟಪಡ್ತೀನಿ, ದೊಡ್ಡ ಮನುಷ್ಯ ಮಹಾನುಭಾವ ನಮ್ಮ ತಾತ ಪ್ರಧಾನಿಯಾದಾಗ ನಾವು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ 5 ಸಾವಿರ ರೂಪಾಯಿಯ ಬಾಡಿಗೆ ಮನೆಯಲ್ಲಿದ್ದವರು, ಆದರೆ ಇವತ್ತು ಬಾಡಿಗೆ ಕೊಡದೇ ಇದ್ದವರು ಇಷ್ಟೆಲ್ಲಾ ಮಾತನಾಡುತ್ತಾರೆ ಎಂದು ಹೇಳಿದ ನಿಖಿಲ್,
ನೀವು ನಮ್ಮ ತಂದೆ, ತಾಯಿ ಇದ್ದ ಹಾಗೆ ನನ್ನ ತಂದೆ ಹಾಗೂ ತಾತನಿಗೆ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರ ಹಾಗೆಯೇ ನನಗೂ ಕೊಡುತ್ತೀರ ಎಂದುಕೊಂಡು ಬಂದಿದ್ದೀನಿ ಎಂದು ಪ್ರಚಾರ ಭಾಷಣದಲ್ಲಿ ನೇರವಾಗಿ ಯಶ್ ವಿರುದ್ಧ ಕಿಡಿ ಕಾರಿದರು.