No menu items!
4.9 C
Munich
Saturday, May 2, 2026

ನಿಖಿಲ್ ಎಲ್ಲಿದ್ದಿಯಪ್ಪಾ ಸಿನಿಮಾನೇ ಆಗಿ ಬಿಡುತ್ತಾ?

Must read

ನಿಖಿಲ್ ಎಲ್ಲಿದ್ದಿಯಪ್ಪಾ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿಖಿಲ್ ಹಾಗೂ ಸಿಎಂ ಕುಮಾರಸ್ವಾಮಿ ಅವರ ಬಗೆಗಿನ ಟ್ರೋಲ್​ಗಳಿಗೆ ಸೇರಿದಂತೆ ಎಲ್ಲದಕ್ಕೂ ಇದನ್ನು ಬೇರೆ ಬೇರೆ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ.
ಈ ನಿಖಿಲ್​ ಎಲ್ಲಿದ್ದಿಯಪ್ಪಾ ಯಾವ ಮಟ್ಟಿಗೆ ಸೌಂಡ್ ಮಾಡುತ್ತಿದೆ ಎಂದರೆ ಸಿನಿಮಾವಾಗಿ ತೆರೆಗೆ ಬರುವ ಮಟ್ಟಿಗೆ ಸೌಂಡು ಮಾಡುತ್ತಿದೆ.
ಇದು ತಮಾಷೆ ಅಲ್ಲ,… ಚಿತ್ರ ತಂಡವೊಂದು ಸಿನಿಮಾಕ್ಕೆ ನಿಖಿಲ್ ಎಲ್ಲಿದ್ದಿಯಪ್ಪಾ ಟೈಟಲ್ ಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದೆ. ಫಿಲ್ಮ್ ಚೇಂಬರ್ ಈ ಬಗ್ಗೆ ಮೇ 23ರ ಬಳಿಕ ನೋಡೋಣ ಎಂದು ಹೇಳಿ ಕಳುಹಿಸಿದೆ.
ಸಿಎಂ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಅವರ ಮೊದಲ ಸಿನಿಮಾ ಜಾಗ್ವಾರ್​ ಆಡಿಯೋ ಲಾಂಚ್​ ಪ್ರೋಗ್ರಾಂನಲ್ಲಿ ನಿಖಿಲ್ ಅವರನ್ನು ಎಲ್ಲಿದ್ದಿಯಪ್ಪಾ ನಿಖಿಲ್, ನಿಖಿಲ್ ಎಲ್ಲಿದ್ದಿಯಪ್ಪಾ ಎಂದು ಕರೆದಿದ್ದರು. ಆ ತುಣುಕು ನಿಖಿಲ್ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಮೇಲೆ ನಾನಾ ರೀತಿಯಲ್ಲಿ ಟ್ರೋಲ್​ಗೆ ಗುರಿಯಾಗುತ್ತಿದೆ. ಸ್ಯಾಂಡಲ್​ವುಡ್​ ನಲ್ಲೂ ಸದ್ದು ಮಾಡಲು ತಯಾರಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article