ಕೋಲಾರ :- ಕೋಲಾರದ ಹೊರವಲಯದ ಸಹಕಾರ ನಗರದ ಬಳಿ ಆಡಿ ಕಾರು ಮರಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು ಕಾರ್ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಜರುಗಿದೆ.
ಹರ್ಷವರ್ಧನ್, ಬಸವರಾಜ್, ನಿಶ್ಚಲ್ ಮೃತ ದುರ್ದೈವಿಗಳು. ಘಟನೆಯಲ್ಲಿ ಮತ್ತೋರ್ವ ಆಶ್ಚರ್ಯ ರೀತಿಯಲ್ಲಿ ಬಜಾವ್ ಆಗಿದ್ದಾರೆ. ಅದೃಷ್ಟವಶಾತ್ ಬಂಗಾರಪೇಟೆಯ ಸಾಯಿ ಗಗನ್ ದುರಂತದಲ್ಲಿ ಬಚಾವ್ ಆಗಿದ್ದಾರೆ.
ಮೃತಪಟ್ಟ ಮೂವರು ರೇವಾ ಯೂನಿವರ್ಸಿಟಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸಾಯಿಗಗನ್ ಸೋದರಿ ಮದುವೆ ಆಮಂತ್ರಣ ಹಂಚಲು ಸ್ನೇಹಿತರೆಲ್ಲ ಕಾರಿನಲ್ಲಿ ಹೊರಟಿದ್ದಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.