ಮರದ ಮೇಲೆ ಐಸೋಲೇಷನ್ಗೆ ಒಳಗಾದ ಬಡಯುವಕ!

0
41

ಕರೋನಾ ಸೋಂಕಿನ ಕಡಿಮೆ ಲಕ್ಷಣಗಳು ಕಾಣಿಸಿಕೊಂಡರೆ ಅಂತಹವರು ಮನೆಯ ಒಂದು ಕೊಠಡಿ ಅಥವಾ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಐಸೋಲೇಶನ್ ಗೆ ಒಳಗಾಗಬಹುದು. ನಗರ ಪ್ರದೇಶಗಳಲ್ಲಿ ಈ ರೀತಿಯ ಪ್ರತ್ಯೇಕ ಕೊಠಡಿ ಅಥವಾ ಕೋವಿಡ್ ಕೇರ್ ಸೆಂಟರ್ ಗಳ ಲಭ್ಯತೆ ಇರುತ್ತದೆ. ಆದರೆ ಹಳ್ಳಿಗಳಲ್ಲಿ ಆಗಲ್ಲ ಅದರಲ್ಲೂ ಬಡ ಕುಟುಂಬದ ಮನೆಗಳಲ್ಲಿ ಪ್ರತ್ಯೇಕ ಕೊಠಡಿ ಇರುವುದಿಲ್ಲ. ಹೀಗಾಗಿ ಹಳ್ಳಿಯಲ್ಲಿನ ಜನರಿಗೆ ಐಸೊಲೇಷನ್ ನಿಯಮ ಪಾಲಿಸುವುದು ತೀರಾ ಕಷ್ಟವಾಗಿದೆ.

 

ಆದರೆ ತೆಲಂಗಾಣದ ಶಿವ ಎಂಬ ವಿದ್ಯಾರ್ಥಿ ಬಡತನದಲ್ಲಿಯೂ ಸಹ ಐಸೋಲೇಷನ್ ನಿಯಮವನ್ನು ಮರದ ಮೇಲೆ ಪಾಲಿಸುವುದರ ಮೂಲಕ ಇಡೀ ದೇಶದ ಗಮನವನ್ನು ಸೆಳೆದಿದ್ದಾನೆ. ಹೈದರಾಬಾದ್ ನಲ್ಲಿ ಪದವಿ ಓದುತ್ತಿದ್ದ ಶಿವ ಎಂಬ ವಿದ್ಯಾರ್ಥಿ ಲಾಕ್ ಡೌನ್ ಮತ್ತು ಕರ್ಫ್ಯೂ ಜಾರಿ ಯಾದ ಹಿನ್ನೆಲೆಯಲ್ಲಿ ತನ್ನ ಸ್ವಗ್ರಾಮ ಕೊತ್ತನದಿಕೊಂಡಕ್ಕೆ ಹಿಂತಿರುಗಿದ್ದಾನೆ. ಹೀಗೆ ಗ್ರಾಮಕ್ಕೆ ಬಂದ ಶಿವ ಎಂಬ ವಿದ್ಯಾರ್ಥಿ ತನ್ನನ್ನು ತಾನು ಐಸೋಲೇಷನ್ ಗೆ ಒಳಗಾಗಿ ಬಳಸಿಕೊಂಡಿದ್ದಾನೆ.

 

 

ತನ್ನಲ್ಲಿ ಕೆಲ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಕಾರಣದಿಂದಾಗಿ ಮನೆಯವರಿಗೆ ಸೋಂಕು ಹರಡಬಾರದು ಎಂಬ ಮುನ್ನೆಚ್ಚರಿಕೆಯಿಂದ ಐಸೋಲೇಷನ್ ಗೆ ಒಳಗಾಗಿದ್ದಾನೆ ಆದರೆ ಮನೆಯಲ್ಲಿ ಪ್ರತ್ಯೇಕ ಕೊಠಡಿಯ ಅನುಕೂಲ ಇರದೆ ಇದ್ದ ಕಾರಣ ಮನೆಯ ಮುಂದೆ ಇದ್ದ ಮರದ ಮೇಲೆ ಬಿದಿರಿನಿಂದ ಮಲಗಲು ಜಾಗ ವನ್ನು ನಿರ್ಮಿಸಿಕೊಂಡಿದ್ದಾನೆ ಅದರ ಮೇಲೆ ಹಾಸಿಗೆಯನ್ನು ಹಾಸಿಕೊಂಡು ಮಲಗಿ ಹನ್ನೊಂದು ದಿನಗಳನ್ನು ಕಳೆದಿದ್ದಾನೆ. ಹೀಗೆ ಕಡುಬಡತನವಿದ್ದರೂ ಸಹ ಮರದ ಮೇಲೆ ಐಸೋಲೇಷನ್ ಗೆ ಒಳಗಾಗುವುದರ ಮೂಲಕ ಕೊರೊನಾ ವಿರುದ್ಧ ಶಿವ ಎಂಬ ವಿದ್ಯಾರ್ಥಿ ಹೋರಾಡಿದ ರೀತಿ ಇದೀಗ ಎಲ್ಲರಿಗೂ ಸ್ಫೂರ್ತಿ ಮತ್ತು ಮಾದರಿಯಾಗಿದೆ.

 

LEAVE A REPLY

Please enter your comment!
Please enter your name here