ಮರ್ಡರ್ ಆಗುತ್ತೆ ಎಂದು ಕ್ಲೂ ಸಿಕ್ಕಿದರೂ ಅಲರ್ಟ್ ಮಾಡಿ ತಡೆಯುವ ಕೆಲಸ ಆಗ್ತಿದೆ: ಸಚಿವ ಜಿ.ಪರಮೇಶ್ವರ್
ಬೆಂಗಳೂರು: ಮರ್ಡರ್ ಆಗುತ್ತೆ ಎಂದು ಕ್ಲೂ ಸಿಕ್ಕಿದರೂ ಅಲರ್ಟ್ ಮಾಡಿ ತಡೆಯುವ ಕೆಲಸ ಆಗ್ತಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ನಾವು ಎಲ್ಲಾ ರೀತಿಯ ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದೇವೆ.
ಮರ್ಡರ್ ಆಗುತ್ತೆ ಎಂದು ಕ್ಲೂ ಸಿಕ್ಕಿದರೂ ಅಲರ್ಟ್ ಮಾಡಿ ತಡೆಯುವ ಕೆಲಸ ಆಗ್ತಿದೆ. ಕೊಲೆ ನಂತರವೂ ಆರೋಪಿಗಳನ್ನು ಬಂಧಿಸಲಾಗ್ತಿದೆ. ಎಲ್ಲಾ ಎಚ್ಚರಿಕೆಗಳನ್ನೂ, ಸೂಚನೆಗಳನ್ನ ಎಸ್ಪಿಗಳಿಗೆ ಕೊಟ್ಟಿದ್ದೇವೆ ಎಂದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ವಹಿಸಲು ಬಿಜೆಪಿ ಒತ್ತಾಯದ ಬಗ್ಗೆ ಮಾತನಾಡಿ, ಅದು ಬಿಜೆಪಿಯವರ ಅಭಿಪ್ರಾಯ. ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡ್ತಾ ಇದೆ. ಎಂಟು ಜನರನ್ನ ಪ್ರಕರಣದಲ್ಲಿ ಬಂಧಿಸಲಾಗಿದೆ.
ತನಿಖೆ ಚೆನ್ನಾಗಿ ನಡೆಯುತ್ತಿದೆ ಎಂಬುದು ನಮ್ಮ ಅಭಿಪ್ರಾಯ. ಹಾಗಾಗಿ, ಈ ಪ್ರಕರಣ ಎನ್ಐಎಗೆ ಕೊಟ್ಟಿಲ್ಲ. ಆ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡ್ತೇವೆ. ಬಿಜೆಪಿ ಆರೋಪ ಸರಿಯಲ್ಲ, ಬಿಜೆಪಿಯವರ ಕಾಲದಲ್ಲೂ ಮರ್ಡರ್ಗಳು ಆಗಿವೆ ಎಂದು ಹೇಳಿದರು.