ಮಕ್ಕಳ ಆರೈಕೆ ಮಾಡುವುದು ಸುಲಭವಲ್ಲ. ಸದಾ ಬದಲಾಗೋ ಋತುಗಳ ಮಧ್ಯೆ ಮಕ್ಕಳ ಪಾಲನೆ ಬಗ್ಗೆ ಒಂದಷ್ಟು ಹೆಚ್ಚಿನ ಕಾಳಜಿವಹಿಸಬೇಕು.
ಪ್ರತಿ ಋತುವಿನಲ್ಲೂ ಒಂದೊಂದು ಬಗೆಯ ಕಾಯಿಲೆಗಳು ಪರಿಸರವನ್ನು ಆವರಿಸಿಕೊಳ್ಳುತ್ತವೆ.
ಅದರಲ್ಲೂ ಕಾಯಿಲೆಗಳು
ಮಕ್ಕಳನ್ನು ತಕ್ಷಣವೇ ಆವರಿಸುತ್ತವೆ. ಕಾರಣ ಏನಂಂದರ ಮಕ್ಕಳಿಗೆ ಇಮ್ಯುನಿಟಿ ಪವರ್ ಅತ್ಯಂತ ಕಡಿಮೆ ಇರುತ್ತದೆ. ಈಗ ಮಳೆಗಾಲ ಅದರಲ್ಲೂ ಕೊರೊನಾ ವೈರಾಣು ವ್ಯಾಪಕವಾಗಿ ಹರಡುತ್ತಿರುವ ಕಾಲವಿದು.
ಪ್ರತಿ ಪೋಷಕರಿಗೆ ತಮ್ಮ ಮಕ್ಕಳ ಕಾಳಜಿ ಅತ್ಯಂತ ಮುಖ್ಯವಾಗಿರುತ್ತದೆ. ಮಗುವಿನ ಆರೋಗ್ಯಕ್ಕೆ ಸ್ವಲ್ಪವೇ ಸ್ವಲ ನೋವಾದರೂ ತಾಯಿ ತಂದೆ ಅಳುತ್ತಾ ಗಾಬರಿಯಾಗುತ್ತಾರೆ. ಹೇಳಿ ಕೇಳಿ ಈಗ ಮಳೆಗಾಲ. ಬಿಟ್ಟು ಬಿಡದೇ ಮಳೆ ನಿರಂತರವಾಗಿ ಸುರಿಯುತ್ತಿದೆ. ಮಳೆಯಿಂದ ಅನೇಕ ಕ್ರಿಮಿಗಳು ಸೃಷ್ಟಿಯಾಗುತ್ತವೆ.
ಮಗುವಿನ ಚರ್ಮ ತುಂಬಾ ಸೂಕ್ಷ್ಮ. ಈ ಕಾರಣಕ್ಕಾಗಿ ಪೋಷಕರು ಮಗುವನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕಾಗುತ್ತೆ. ಇಲ್ಲ ಅಂದರೆ ಮಗು ಬೇಗನೆ ಅನೇಕ ರೋಗಗಳಿಗೆ ತುತ್ತಾಗಬಹುದು. ಮಳೆಗಾಲದಲ್ಲಿ ಸೊಳ್ಳೆಗಳ ಕಾಟ , ಜಾಸ್ತಿ ತುರಿಕೆಯಿಂದ ಮಗುವಿನ ಚರ್ಮದ ಕಾಯಿಲೆಗೂ ಕಾರಣವಾಗಬಹುದು ಹೀಗಾಗಿ ತಾಯಂದಿರು ತಮ್ಮ ಮಗುವಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.
ಮಳೆಗಾಲದಲ್ಲಿ ಪ್ರತಿನಿತ್ಯವೂ ತಪ್ಪದೇ ಸ್ನಾನ ಮಾಡಿಸಬೇಕು. ಸ್ನಾನದ ನಂತರ ಚನ್ನಾಗಿ ಒಣಬಟ್ಟೆಯಿಂದ ಮಗುವಿನ ಮೈ ಒರೆಸಬೇಕು.
ಡೈಪರ್ ಬಳಕೆ ಮಾಡಿದರೆ ಚರ್ಮ ಸುಲಿಯುವ ಹಾಗೆ ಇರುತ್ತದೆ. ಇದನ್ನು ತಡೆಯಲು ಸೂಕ್ತವಾದ ಬಟ್ಟೆಗಳನ್ನು ತೊಡಿಸುವುದು ಉತ್ತಮ.
ಪ್ರತಿದಿನವೂ ಅಲಿವ್ ಎಣ್ಣೆ ಅಥವಾ ಬಾದಾಮಿ ಎಣ್ಣೆ ಮತ್ತು ಮೃದುವಾಗಿರುವ ಬೇಬಿ ಸೋಪ್‌ನಿಂದ ಸ್ನಾನ ಮಾಡಿಸುವುದು ಒಳ್ಳೆಯದು. ಬಾದಾಮಿ ಎಣ್ಣೆ ಚರ್ಮದಲ್ಲಿ ತೇವಾಂಶ ಉಳಿಯುವಂತೆ ಸಹಾಯಮಾಡುತ್ತದೆ. ಹಾಗೂ ಅಲಿವ್ ಎಣ್ಣೆ ಶುಷ್ಕತೆಯನ್ನು ದೂರ ಮಾಡುತ್ತದೆ.
ದಾಸವಾಳ ಸೊಪ್ಪು ಹಾಗೂ ಕಡಲೆ ಹಿಟ್ಟು ಮುಂತಾದ ಅಂಶಗಳಿಂದ ಕೂಡಿದ ಶಾಂಪೂವಿನಿಂದ ಮಗುವಿನ ಕೂದಲನ್ನು ಆರೈಕೆ ಮಾಡಿ. ದಾಸವಾಳ ಕೂದಲಿನಲ್ಲಿ ತೇವಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಗುವಿಗೆ ಸ್ನಾನ ಮಾಡಿಸಿದ ಮೇಲೆ ಚೆನ್ನಾಗಿ ಒರೆಸುವುದು ಅತಿ ಅವಶ್ಯಕ. ಅದರಲ್ಲೂ ಚರ್ಮ ಮಡಿಕೆಯಾಗುವ ಗಲ್ಲದ ಕೆಳಗೆ, ಕುತ್ತಿಗೆ, ತೊಡೆ ಸಂದಿಗಳಲ್ಲಿ ಚೆನ್ನಾಗಿ ಒರೆಸಬೇಕು.
ಒದ್ದೆ ನ್ಯಾಪ್‌ಕಿನ್‌ನಿಂದ ದದ್ದುಗಳಾಗುವುದು ಸಾಮಾನ್ಯ. ಇದ್ರಿಂದ ಮಕ್ಕಳಿಗೆ ಕಿರಿಕಿರಿಯಾಗಬಹುದು. ಹಾಗಾಗಿ ದದ್ದುನಿವಾರಿಸಲು ಬಾದಾಮಿ ಆಯಿಲ್ ಹಚ್ಚಿ, ಹಗರುವಾಗಿರುವ ಪೂರ್ತಿ ಮೈ ಮುಚ್ಚುವ ಬಟ್ಟೆ ಹಾಕಿ. ಅತ್ಯಂತ ಹೆಚ್ಚು ದಪ್ಪವಾಗಿರುವ ಬಟ್ಟೆ ಹಾಕಿದರೆ ಮಕ್ಕಳು ಹೆಚ್ಚು ಬೆವರುತ್ತಾರೆ. ಅಷ್ಟೇ ಅಲ್ಲ ಉಸಿರುಗಟ್ಟುವ ಸಾಧ್ಯತೆ ಹೆಚ್ಚು ಇರುವುದು. ಹೀಗಾಗಿ ಹೆಚ್ಚು ದಪ್ಪವಾದ ಬಟ್ಟೆ ಹಾಕಬೇಡಿ.
ಮಳೆಗಾಲದಲ್ಲಿ ಹೆಚ್ಚು ಕಾಡುವುದು ಸೊಳ್ಳೆಗಳು. ಇದರಿಂದ ಮಲೇರಿಯಾ, ಡೈರಿಯಾ, ಕಾಲರ, ಡೆಂಘೀ, ಚಿಕನ್ ಗುನ್ಯಾದಂತ ಕಾಯಿಲೆಗಳು ಬರಬಹುದು. ಹಾಗಾಗಿ ಮನೆಯ ಮುಂದೆ-ಹಿಂದೆ ಸ್ವಚ್ಛವಾಗಿಟ್ಟುಕೊಳ್ಳಿ, ಮಗುವಿಗೆ ಸೊಳ್ಳೆಪರದೆಯಲ್ಲೇ ಮಲಗಿಸಿ, ಸ್ವಲ್ಪ ದೊಡ್ಡ ಮಗುವಾಗಿದ್ದರೆ ಬಿಸಿನೀರು ಕುಡಿಸಿ. ಅತ್ಯಂತ ಅವಶ್ಯಕ ಅಂದರೆ ತಾಯಿ ಸದಾ ಬಿಸಿ ನೀರು ಕುಡಿಯುತ್ತಿದ್ದರೆ ಮಗು ಅತ್ಯಂತ ಆರೋಗ್ಯವಾಗಿರುತ್ತದೆ. ಕೋವಿಡ್ ನಿಂದ ಮಗುವನ್ನು ರಕ್ಷಣೆ ಮಾಡಿಕೊಳ್ಳಲು ತಾಯಿ ಹಾಲಿನಲ್ಲಿ ಅರಿಶಿಣ ಹಾಕಿ ಕುಡಿಯಬೇಕು.
ಮಳೆಗಾಗಲದಲ್ಲಿ ತಾಯಂದಿರು ಅತ್ಯಂತ ಹೆಚ್ಚು ಜತನದಿಂದ ಮಗುವನ್ನು ಕಾಪಾಡಿಕೊಳ್ಳಬೇಕು.