ಮಳೆಯಿಂದ ತುಂಬಿ ಕೋಡಿ ಹರಿದ ಕೆರೆ: ನೀರು ನೋಡಲು ಹೋದವ ಯಮನ ಪಾಲಾದ!
ದಾವಣಗೆರೆ:- ಜಗಳೂರು ತಾಲೂಕಿನ ಸಂಗೇನಹಳ್ಳಿ ಗ್ರಾಮದಲ್ಲಿ ಅವಘಡ ಒಂದು ಸಂಭವಿಸಿದೆ. ತುಂಬಿ ಕೋರಿ ಹರಿಯುತ್ತಿದ್ದ ಕೆರೆ ನೋಡಲು ಬಂದವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
45 ವರ್ಷದ ಜಯಣ್ಣ ಮೃತ ದುರ್ದೈವಿ. ಸಂಗೇನಹಳ್ಳಿ ಕೆರೆ ಕೋಡಿ ಬಿದ್ದಿದ್ದನ್ನು ನೋಡಲು ಜಯಣ್ಣ ಹೋಗಿದ್ದರು. ಬಳಿಕ ತಂಗಿಯ ಮನೆಗೆ ತೆರಳುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ.
ನಿನ್ನೆ ರಾತ್ರಿ ಹಳ್ಳದಲ್ಲಿ ಜಯಣ್ಣ ಕೊಚ್ಚಿ ಹೋಗಿದ್ದರು. ಇಂದು ಅವರ ಮೃತದೇಹ ಪತ್ತೆಯಾಗಿದೆ. ಸಂಗೇನಹಳ್ಳಿ ಗ್ರಾಮಕ್ಕೆ ಬೇರೆ ಕಡೆ ದಾರಿಯಿಲ್ಲದೆ ಹಳ್ಳ ದಾಟಲು ಅವರು ಯತ್ನಿಸಿದ್ದರು. ಮೃತ ದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ.