ಜಾರ್ಖಂಡ್ ನಲ್ಲಿ ಚುನಾವಣೆ ನೆಡೆದ ಹಿನ್ನಲೆಯಲ್ಲಿ ಇಂದು ಜಾರ್ಖಂಡ್ ನಲ್ಲಿ 81 ವಿಧಾನಸಭಾ ಸೀಟುಗಳಿದ್ದು, ಅದ್ರಲ್ಲಿ 41 ಸೀಟುಗಳನ್ನು ಗೆದ್ದ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಸದ್ಯ ಎರಡು ಮೂರು ಕ್ಷೇತ್ರಗಳ ಫಲಿತಾಂಶ ಮಾತ್ರ ಹೊರಬಿದ್ದಿದೆ. ಉಳಿದ್ದ ಕ್ಷೇತ್ರಗಳಲ್ಲಿ ಮತ ಎಣಿಕೆ ಮುಂದುವರೆದಿದ್ದು, ಜೆಎಂಎಂ ಮೈತ್ರಿ ಪಕ್ಷ ಮುನ್ನಡೆ ಕಾಯ್ದುಕೊಂಡಿದೆ. ಜೆಎಂಎಂ ಮೈತ್ರಿ ಪಕ್ಷಕ್ಕೆ ಬಹುಮತ ಸಿಗೋದು ಬಹುತೇಕ ಸ್ಪಷ್ಟವಾಗಿದೆ. ಇದರಿಂದ ಬಿಜೆಪಿ ಇಲ್ಲಿಯೂ ತನ್ನ ಹಿಡಿತ ಕಳೆದು ಕೊಂಡಿದೆ ಎಂದು ರಾಜಕೀಯ ವಲಯದಲ್ಲಿ ಮಾತು ಕೇಳಿಬರುತ್ತಿದೆ.
ಕಳೆದ ಚುನಾವಣೆಗಳನ್ನು ನೋಡಿದರೆ ಇದು ಮೂರನೇ ಬಾರಿಗೆ ಅತಿದೊಡ್ಡ ಪಕ್ಷ ರಚನೆಯ ಹೊರತಾಗಿಯೂ ಸರ್ಕಾರ ರಚಿಸುವ ಅವಕಾಶವನ್ನು ಬಿಜೆಪಿ ಕಳೆದುಕೊಂಡಿದೆ. ಮಹಾರಾಷ್ಟ್ರದಂತೆ ಇಲ್ಲಿಯು ಬಿಜೆಪಿ ತನ್ನ ಹಿಡಿತ ಕಳೆದು ಕೊಳ್ಳುವ ಸೂಚನೆ ಕಂಡುಬರುತ್ತಿದೆ ಎಂದು ಹೇಳಲಾಗುತ್ತಿದೆ.