ಮಹಾರಾಷ್ಟ್ರದಲ್ಲಿ ಮತ್ತೆ ಬಾಲ ಬಿಚ್ಚಿದ MES ಪುಂಡರು

Date:

ಮಹಾರಾಷ್ಟ್ರದಲ್ಲಿ ಎಂಇಎಸ್​ ಪುಂಡರ ಹಾವಳಿ ಮತ್ತೆ ಹೆಚ್ಚಾಗಿದೆ. ಮುಂಬೈನಿಂದ ಕಲಬುರಗಿಗೆ ಬರುತ್ತಿದ ಕರ್ನಾಟಕ ಸಾರಿಗೆ ಬಸ್ ತಡೆದ ಪುಂಡರು, ಬಸ್​ಗೆ ಕಪ್ಪು ಮಸಿ ಬಳೆದು, ಬಸ್ ಮುಂಭಾಗದಲ್ಲಿ ಎಂಇಎಸ್ ಧ್ವಜ ನೆಟ್ಟಿದ್ದಾರೆ. ನಂತರ ಚಾಲಕನ ಕೈಗೆ ಎಂಇಎಸ್ ಧ್ವಜ ಕೊಟ್ಟು ಜೈ ಶಿವಾಜಿ ಅಂತ ಬಲವಂತವಾಗಿ ಘೋಷಣೆ ಕೂಗಿಸಿದ್ದಾರೆ.

ಅಲ್ಲದೆ ಕೆಲ ಬಸ್​ಗಳ ಮೇಲೆ ಜೈ ಮಹಾರಾಷ್ಟ್ರ, ಕನ್ನಡ ನಿಷೇಧ ಅಂತೆಲ್ಲಾ ಬರೆದಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಜಗಳ ಮತ್ತೆ ಮುಂದುವರಿಕೆಯನ್ನು ಪಡೆದುಕೊಂಡಿದ್ದು, ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳೆಯುವ ಮೂಲಕ ಈ ಹಿಂದೆ ಕರ್ನಾಟಕದ ಬಾವುಟವನ್ನು ಮಹಾರಾಷ್ಟ್ರದಲ್ಲಿ ಸುಟ್ಟು ಹಾಕಿದ್ದರ ಸೇಡನ್ನು ಕನ್ನಡಿಗರು ತೀರಿಸಿಕೊಂಡಿದ್ದರು. ಇದೀಗ ಕರ್ನಾಟಕ ಬಸ್ ಗೆ ಮಸಿ ಬಳಿದು ಕಿಡಿಗೇಡಿತನ ಮೆರೆದಿರುವ ಮಹಾರಾಷ್ಟ್ರಕ್ಕೆ ಕರ್ನಾಟಕದಲ್ಲಿ ಸಿಕ್ಕುವ ವಾಹನಗಳನ್ನು ತಡೆದು ಕನ್ನಡಿಗರು ಮಸಿ ಬಳಿದು ಉತ್ತರ ನೀಡುವುದು ಕಟ್ಟಿಟ್ಟ ಬುತ್ತಿ.

Share post:

Subscribe

spot_imgspot_img

Popular

More like this
Related

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ನವದೆಹಲಿ:...

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ ಬೆಂಗಳೂರು:...

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ!

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ! ಗರ್ಭಾವಸ್ಥೆಯಲ್ಲಿ ಮಹಿಳೆ ಅನುಭವಿಸುವ...

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ ನವದೆಹಲಿ:...