ಮಹಾ ಕುಂಭಮೇಳದ ಪ್ರವಾಸದ ಪ್ಯಾಕೇಜ್ ಹೆಸರಿನಲ್ಲಿ ವಂಚನೆ..! ಆರೋಪಿ ಅರೆಸ್ಟ್

Date:

ಮಹಾ ಕುಂಭಮೇಳದ ಪ್ರವಾಸದ ಪ್ಯಾಕೇಜ್ ಹೆಸರಿನಲ್ಲಿ ವಂಚನೆ..! ಆರೋಪಿ ಅರೆಸ್ಟ್

ಬೆಂಗಳೂರು: ಪ್ರಯಾಗ್ ರಾಜ್ನಲ್ಲಿ ನಡೆದಿದ್ದ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾಕುಂಭ ಮೇಳದಲ್ಲಿ ಭಾಗಿಯಾಗಬೇಕು ಎಂಬುದು ಅನೇಕರ ಮಹಾದಾಸೆಯಾಗಿತ್ತು. ಯಾತ್ರಿಗಳ ಈ ಆಸೆಯನ್ನೇ ಬಂಡವಾಳ ಮಾಡಿಕೊಂಡು ಕುಂಭಮೇಳದ ಪ್ರವಾಸದ ಹೆಸರಲ್ಲಿ ಅಮಾಯಕರಿಗೆ ಲಕ್ಷಾಂತರ ರೂ. ವಂಚನೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಗೋವಿಂದರಾಜನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಘವೇಂದ್ರ ರಾವ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಪಾಂಚಜನ್ಯ ಟೂರ್ಸ್ ಅಂಡ್ ಟ್ರಾವೆಲ್ಸ್ ಹೆಸರಲ್ಲಿ ಜಾಹೀರಾತು ನೀಡಿದ್ದ. ಜಾಹೀರಾತಿನಲ್ಲಿ ಅಯೋಧ್ಯೆ, ಕಾಶಿ, ಪ್ರಯಾಗ್ರಾಜ್ ಟೂರ್ ಪ್ಯಾಕೇಜ್ ಬಗ್ಗೆ ತಿಳಿಸಿ 7 ದಿನಗಳ ಪ್ಯಾಕೇಜ್ಗೆ ತಲಾ 49,000 ರೂ. ಪಡೆದು ಜನರಿಗೆ ವಂಚಿಸಿದ್ದನು.
ರಾಘವೇಂದ್ರ ಸುಮಾರು ಇಪ್ಪತ್ತು ಜನರ ಬಳಿ ಹಣ ಪಡೆದು 70 ಲಕ್ಷ ರೂ. ವಂಚನೆ ಮಾಡಿದ್ದ. ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಎ-ಖಾತಾ ಸೋಗಿನಲ್ಲಿ 15 ಸಾವಿರ ಕೋಟಿ ಸುಲಿಗೆ – ಹೆಚ್‌.ಡಿ. ಕುಮಾರಸ್ವಾಮಿ ಕಿಡಿ

ಎ-ಖಾತಾ ಸೋಗಿನಲ್ಲಿ 15 ಸಾವಿರ ಕೋಟಿ ಸುಲಿಗೆ – ಹೆಚ್‌.ಡಿ. ಕುಮಾರಸ್ವಾಮಿ...

RSS ಸೇರಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ಬ್ರೇಕ್!

RSS ಸೇರಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ಬ್ರೇಕ್! ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ...

ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು: ಅದಕ್ಕೇ ಅನ್ನಭಾಗ್ಯ ಜಾರಿಗೆ ತಂದೆ: ಸಿಎಂ ಸಿದ್ದರಾಮಯ್ಯ

ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು: ಅದಕ್ಕೇ ಅನ್ನಭಾಗ್ಯ ಜಾರಿಗೆ...

CM ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಮನೆಗಳಿಗೆ ಹುಸಿ ಬಾಂಬ್ ಬೆದರಿಕೆ

CM ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಮನೆಗಳಿಗೆ ಹುಸಿ ಬಾಂಬ್ ಬೆದರಿಕೆ ಬೆಂಗಳೂರು:...