ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಗೆ ವಿಶ್ವಚೇತನ ಪ್ರಶಸ್ತಿ..
ಭಾರತ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಕ್ರೀಡಾಪಟು ಕನ್ನಡಿಗೆ ಅನಿಲ್ ಕುಂಬ್ಳೆ ಅವರು ವಿಶ್ವ ಚೇತನ ಪ್ರಶಸ್ತಿಗೆ ಬಾಜನರಾಗಿದ್ದಾರೆ.. ತಮ್ಮ ಆಟದ ವೈಖರಿ ಮೂಲಕ ಹಲವಾರು ಪಂದ್ಯಗಳನ್ನ ಗೆಲ್ಲಿಸಿ ಕೊಟ್ಟಿದ್ದ ಕುಂಬ್ಳೆ, ನಿವೃತ್ತಿ ಬಳಿಕ ಟೀಮ್ ಇಂಡಿಯಾದ ಕೋಚ್ ಆಗಿಯು ಕಾರ್ಯ ನಿರ್ವಹಿಸಿದ್ದಾರೆ..
ಸದ್ಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವಿಶಾಳಿ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನ ನೀಡಲಾಗಿದೆ.. ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಸ್ವಾಮೀಜಿ ಸೇರಿದಂತೆ ಕಾಶಿ ಜಗದ್ಗುರು ಹಾಗು ನಿಡಸೋಶಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಗಳು ಅನುಲ್ ಕುಂಬ್ಳೆ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ..