ಟಾಲಿವುಡ್ ನಟಿ ರೋಜಾ, ರಾಜಕೀಯದಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ಸಚಿವೆಯಾಗಿದ್ದ ರೋಜಾ, ಈ ಬಾರಿ ಚುನಾವಣೆಯಲ್ಲಿ ಸೋಲು ಕಂಡ್ರು. ಇದೀಗ ನಟಿ ಹಾಗೂ ಮಾಜಿ ಸಚಿವೆ ವಿದೇಶದಲ್ಲಿ ರೌಂಡ್ಸ್ ಹಾಕ್ತಿದ್ದಾರೆ. ನಟಿ ಶಾರ್ಟ್ ಡ್ರೆಸ್ ನೋಡಿದ ನೆಟ್ಟಿಗರು ನಾನಾ ಕಮೆಂಟ್ ಮಾಡ್ತಿದ್ದಾರೆ.
ಎರಡು ಬಾರಿ ಶಾಸಕರಾಗಿ ಗೆದ್ದು ಸಂಚಲನ ಮೂಡಿಸಿದ್ದ ರೋಜಾ ಈ ಬಾರಿಯ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರು. ಸೋಲಿನ ನಂತರ ರೋಜಾ ಮಾಧ್ಯಮಗಳ ಮುಂದೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ . ಹೌದು, 2024ರ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ರೋಜಾಗೆ ಭಾರೀ ಮುಖಭಂಗವಾಗಿದೆ. ಈ ಸೋಲು ನಟಿಗೆ ದೊಡ್ಡ ಶಾಕ್ ಆಗಿತ್ತು. ಮಾಧ್ಯಮಗಳ ಮುಂದೆ ಅಬ್ಬರಿಸುತ್ತಿದ್ದ ರೋಜಾ, ಸೋಲಿನ ಬಳಿಕ ಸೈಲೆಂಟ್ ಆಗಿ ಸೈಡಿಗೆ ಸರಿದಿದ್ದಾರೆ.
ಸದ್ಯ ನಟಿ ರೋಜಾ ವಿದೇಶದಲ್ಲಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಟಲಿಯಲ್ಲಿರುವ ರೋಜಾ ರಜಾ ದಿನಗಳನ್ನು ಎಂಜಾಯ್ ಮಾಡ್ತಿದ್ದಾರೆ. ಇದೇ ವೇಳೆ ನಟಿ ರೋಜಾ ಶಾರ್ಟ್ ಡ್ರೆಸ್ ಧರಿಸಿದ್ದು, ಮಾಜಿ ಸಚಿವೆಯ ಅವತಾರ ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ.