ವಾಮಾಚಾರ ಮಾಡಿ ಯುವತಿಯನ್ನು ಮದುವೆಯಾಗಿದ್ದಾನೆ ಅಂತ ಯುವಕನಿಗೆ ಯುವತಿಯ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಲಬುರಗಿಯ ಶಹಾಬಜಾರ್ ತಾಂಡಾ ನಿವಾಸಿಯಾಗಿರುವ ಖಾಸಿಪತಿಗೆ ಯುವತಿ ಕುಟುಂಬಸ್ಥರು ಥಳಿಸಿದ್ದಾರೆ. ಖಾಸಿಪತಿ ಬಳ್ಳಾರಿ ಮೂಲದ ಯುವತಿಯನ್ನು ಮದುವೆಯಾಗಿದ್ದ. ಮನೆಯವರಿಗೆ ಹೇಳದೆ ಯುವತಿ ಮದುವೆಯಾಗಿದ್ದಾಳಂತೆ. ಮನೆಯವರಿಗೆ ಮಾಹಿತಿ ನೀಡದೆ ಮದುವೆಯಾಗಿದ್ದಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಬೇಕರಿಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ನಾಲ್ವರು ಥಳಿಸಿದ್ದಾರೆ. ಹಲ್ಲೆಯ ದೃಶ್ಯ ಬೇಕರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅ.18 ರಂದು ಘಟನೆ ನಡೆದಿದ್ದು. ತಡವಾಗಿ ಬೆಳಕಿಗೆ ಬಂದಿದೆ. ಸದ್ದಾಂ ಹಲ್ಲೆಗೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ.