ಡಿಕೆ ಶಿವಕುಮಾರ್ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ ದೇವಸ್ಥಾನಗಳಿಗೆ ಭೇಟಿಗಳನ್ನು ನೀಡುತ್ತಿದ್ದಾರೆ. ಇಂದು ಕನಕಪುರ ತಾಲ್ಲೂಕಿನ ಕಬ್ಬಾಳಮ್ಮ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿಯನ್ನು ನೀಡಿದ್ದರು. ಜೈಲಿಂದ ಬಂದ ಡಿಕೆಶಿ ಅವರ ಹಿಂದೆ ಮಾಧ್ಯಮದವರು ಓಡಾಡುವುದು ಕಾಮನ್ ಹೀಗಾಗಿ ದೇವಸ್ಥಾನಕ್ಕೂ ಸಹ ಮಾಧ್ಯಮದವರು ಹೋಗಿದ್ದರು.
ಈ ಸಮಯದಲ್ಲಿ ಮಾಧ್ಯಮದವರ ಬಳಿ ಬಂದ ಡಿಕೆಶಿ ಅವರ ಪುತ್ರಿ ಐಶ್ವರ್ಯಾ ಅವರು ಮಾಧ್ಯಮದವರಿಗೆ ಆವಾಜ್ ಹಾಕಿದ್ದರು. ದಿಢೀರನೆ ಮಾಧ್ಯಮದೆಡೆಗೆ ಬಂದ ಐಶ್ವರ್ಯ ಅವರು ಮಾಧ್ಯಮದವರಿಗೆ ಕೈ ತೋರಿಸಿ ನೀವು ಶಿವಕುಮಾರ್ ಅವರ ವಿಡಿಯೊವನ್ನು ಮಾತ್ರ ಮಾಡಬೇಕು ಅವರ ಕುಟುಂಬದವರ ವಿಡಿಯೋವನ್ನು ಮಾಡಬಾರದು ಅದು ವೈಯಕ್ತಿಕ ಎಂದು ಅವಾಜ್ ಹಾಕಿದರು. ಇನ್ನು ಡಿಕೆಶಿ ಪುತ್ರಿಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.






