ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಷ್ಟದಲ್ಲಿರುವವರ ಸಹಾಯಕ್ಕೆ ಯಾವಾಗಲೂ ನಿಲ್ಲುತ್ತಾರೆ. ಅದು ಮತ್ತೊಮ್ಮೆ ಸಾಬೀತಾಗಿದೆ.
ಆತನ ಹೆಸರು ರುತನ್ ಅಂತ. ಅವನಿನ್ನೂ ಪುಟ್ಟ ಬಾಲಕ. ಕಿಡ್ನಿವೈಫಲ್ಯದಿಂದ ಬಳಲುತ್ತಿದ್ದಾನೆ. ದರ್ಶನ್ ಎಂದರೆ ಆತನಿಗೆ ಅಚ್ಚುಮೆಚ್ಚು. ಹಾಸನ ಜಿಲ್ಲೆಯ ಅರಸೀಕೆರೆಯ ಈತ ಡಿ.ಬಾಸ್ ಅವರ ಅಪ್ಪಟ ಅಭಿಮಾನಿ. ದರ್ಶನ್ ಅವರ ಐರಾವತ ಸಿನಿಮಾ ನೋಡಿ ಪೊಲೀಸ್ ಆಗಬೇಕೆಂದಿದ್ದ. ಹಾಗಾಗಿ ಹಿಂದೊಮ್ಮೆ ಕಮಿಷನರ್ ಪೊಲೀಸ್ ಡ್ರಸ್ ಹಾಕಿಸಿ ಆತನ ಮೊಗದಲ್ಲಿ ನಗು ತಂದಿದ್ದರು.
ಆದರೆ, ಆತನ ಮಹಾದಾಸೆ ದರ್ಶನ್ ಅವರನ್ನು ನೋಡಬೇಕೆಂದಿತ್ತು. ಇಂದು ದರ್ಶನ್ ಅವರನ್ನು ನೋಡುವ ಆಸೆಯೂ ಈಡೇರಿದೆ. ಖಾಸಗಿ ವಾಹಿನಿಯೊಂದರಲ್ಲಿ ರುತನ್ ಗೆ ಬಗ್ಗೆ ಸ್ಟೋರಿ ಬಂದಿತ್ತು. ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದು ದರ್ಶನ್ ಅವರ ಗಮನಕ್ಕೆ ಬಂದಿದ್ದು, ದರ್ಶನ್ ರುತನ್ ಮತ್ತು ಅವರ ಪೋಷಕರನ್ನು ಇಂದು ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ. ರುತನ್ ನನ್ನು ಎತ್ತಿಕೊಂಡು ಫೋಟೋಕ್ಕೆ ಪೋಸ್ ನೀಡಿದ್ದಾರೆ. ದರ್ಶನ್ ಅವರನ್ನು ಮೀಟ್ ಆಗಿ ರುತನ್ ಫುಲ್ ಖುಷಿಯಾಗಿದ್ದಾನೆ.
ಮಾನವೀಯತೆ ಮೆರೆದ ‘ಯಜಮಾನ’..!
Date: