ಮಾಸ್ಕ್ ಧರಿಸಿ ಕಾಮಿಡಿ ಪೀಸ್ ಆದ ಸಲ್ಮಾನ್‌ ಖಾನ್

Date:

ಸೆಲೆಬ್ರಿಟಿಗಳು ಆಗಾಗ ಟ್ರೋಲಿಗರಿಗೆ ಆಹಾರವಾಗುತ್ತಿರುತ್ತಾರೆ. ಚಿಕ್ಕ ವಿಚಾರಗಳು ಸಹ ಟ್ರೋಲಿಗೆ ದೊಡ್ಡದಾಗಿ ಕಾಣಿಸುತ್ತದೆ. ಅದರಲ್ಲೂ ನಟಿಯಮಣಿಯರು ಹೆಚ್ಚಾಗಿ ಟ್ರೋಲಿಗೆ ಗುರಿಯಾಗುತ್ತಿರುತ್ತಾರೆ. ಡ್ರೆಸ್, ಹೇಳಿಕೆಗಳು, ಫೋಟೋಶೂಟ್ ಹೀಗೆ ಪ್ರತಿಯೊಂದು ವಿಚಾರದಲ್ಲೂ ಟ್ರೋಲ್ ಮಾಡುತ್ತಿರುತ್ತಾರೆ. ಇದೀಗ ಸಲ್ಮಾನ್ ಖಾನ್ ಸಹ ಟ್ರೋಲಿಗೆ ಗುರಿಯಾಗಿದ್ದಾರೆ.

ಮಾಸ್ಕ್ ವಿಚಾರವಾಗಿ ಸಲ್ಮಾನ್ ಖಾನ್ ನನ್ನು ಟ್ರೋಲಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಚಿತ್ರೀಕರಣಕ್ಕೆಂದು ವಿದೇಶಿ ಪಯಣಕ್ಕೆ ಹೋಗಿದ್ದ ಸಲ್ಮಾನ್ ಇದೀಗ ಮುಂಬೈಗೆ ವಾಪಸ್ ಆಗಿದ್ದಾರೆ. ಮುಂಬೈ ಏರ್ ಪೋರ್ಟ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ ಸಲ್ಮಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಲ್ಮಾನ್ ಉಲ್ಟ ಮಾಸ್ಕ ಧರಿಸಿದ್ದಾರೆ. ಇದೀಗ ಮಾಸ್ಕ್ ಧರಿಸುವುದು ಒಂದು ಫ್ಯಾಷನ್ ಆಗಿದೆ. ಚಿತ್ರ ವಿಚಿತ್ರ ಮಾಸ್ಕಗಳನ್ನು ಧರಿಸುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಡ್ರೆಸ್ ಹಾಗೆಯೇ ಮಾಸ್ಕ್ ಗಳನ್ನು ಸಹ ವಿಶೇಷವಾಗಿ ಡೆಸೈನ್ ಮಾಡಿಸಿ ಧರಿಸುತ್ತಾರೆ. ಸಲ್ಮಾನ್ ಖಾನ್ ಧರಿಸಿದ್ದ ಮಾಸ್ಕ್ ನಲ್ಲಿ ಎಸ್ ಕೆ ಎಂದು ಬರೆಯಲಾಗಿದೆ. ಎಸ್ ಕೆ ಎಂದು ಬರೆದಿರುವುದು ಉಲ್ಟ-ಪಲ್ಟವಾಗಿದೆ. ನೆಟ್ಟಿಗರು ಕಾಮೆಂಟ್ ಮಾಡಿ ಮಾಸ್ಕ್ ಉಲ್ಟ ಆಗಿದೆ ಎಂದು ಹೇಳುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...