ಕೇಪ್ಟೌನ್(ದಕ್ಷಿಣ ಆಫ್ರಿಕಾ): ಪ್ರಪಂಚದಾದ್ಯಂತ ಕೊರೊನಾ ವೈರಸ್ ಹಾವಳಿ ನಿಲ್ಲದ ಕಾರಣ ಮಾಸ್ಕ್ ಬಳಕೆ ಕಡ್ಡಾಯಗೊಳಿಸಲಾಗಿದ್ದು, ಮಾಲ್, ಸೂಪರ್ ಮಾರ್ಕೆಟ್ ಸೇರಿ ಹೊರಗಡೆ ಹೋಗಬೇಕಾದರೆ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.
ಆದರೆ ಮಾಸ್ಕ್ ಮರೆತು ಸೂಪರ್ ಮಾರ್ಕೆಟ್ಗೆ ಬಂದ ಯುವತಿಯೋರ್ವಳನ್ನ ಸಿಬ್ಬಂದಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಗಲಿಬಿಲಿಗೊಂಡು ಹಾಕಿಕೊಂಡಿದ್ದ ಅಂಡರ್ವೇರ್ ತೆಗೆದು ಮಾಸ್ಕ್ ಮಾಡಿಕೊಂಡಿರುವ ಘಟನೆ ನಡೆದಿದೆ.
ದಕ್ಷಿಣ ಆಫ್ರಿಕಾದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸೂಪರ್ ಮಾರ್ಕೆಟ್ಗೆ ಮಾಸ್ಕ್ ಮರೆತು ಬಂದಿರುವ ಯುವತಿಯೋರ್ವಳನ್ನ ಅಲ್ಲಿನ ಸಿಬ್ಬಂದಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಒಳ ಉಡುಪು ತೆಗೆದು ಮಾಸ್ಕ್ ರೀತಿಯಲ್ಲಿ ಮುಖಕ್ಕೆ ಹಾಕಿಕೊಂಡಿದ್ದಾಳೆ. ಸದ್ಯ ಇದರ ವಿಡಿಯೋ ವೈರಲ್ ಆಗಿದ್ದು, ಲಕ್ಷಾಂತರ ಜನರು ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಈ ಹಿಂದೆ ಕೂಡ ಇಂತಹ ಘಟನೆ ಉಕ್ರೇನ್ನಲ್ಲಿ ನಡೆದಿತ್ತು.
https://twitter.com/YB_JLN/status/1364253718904979462?ref_src=twsrc%5Etfw%7Ctwcamp%5Etweetembed%7Ctwterm%5E1364253718904979462%7Ctwgr%5E%7Ctwcon%5Es1_c10&ref_url=https%3A%2F%2Fwww.etvbharat.com%2Fkannada%2Fkarnataka%2Finternational%2Feurope%2Fwomen-removes-her-underwear-and-use-as-face-mask-in-south-africa%2Fka20210227223214313