ಮಿಸ್ ಮಾಡ್ದೆ ನೋಡ್ಲೇ ಬೇಕಾದ ವಿಸ್ಮಯ ಸ್ಥಳಗಳು..!

Date:

ನಮ್ ಇಂಡಿಯಾದಲ್ಲಿ ಕೆಲವೊಂದು ವಿಸ್ಮಯಕಾರಿ ಸ್ಥಳಗಳಿವೆ..! ಇವುಗಳನ್ನು ನೋಡಿದ್ರೆ ಹೀಗೂ ಉಂಟೇ..? ಎಂಬ ಉದ್ಘಾರ ನಿಮ್ಮಿಂದ ಬಂದೇ ಬರುತ್ತೆ..! ಆದ್ರೆ ಹೀಗೂ ಉಂಟು..ಸಾರ್..! ನಂಬಲು ತುಸು ಕಷ್ಟ ಅನಿಸಿದ್ರೂ ನಂಬಲೇ ಬೇಕು..! ಇಂಡಿಯಾದಲ್ಲಿನ ಅಂತಹ ಕೆಲವೊಂದು ವಿಸ್ಮಯಕಾರಿ, ಅಸಾಮಾನ್ಯ ಸ್ಥಳಗಳ ಪರಿಚಯವನ್ನೀಗ ನಾವು ನಿಮಗೆ ಮಾಡಿಸ್ತೀವಿ..! ಸಾಧ್ಯವಾದ್ರೆ ಒಮ್ಮೆಯಾದ್ರೂ ಅಲ್ಲಿಗೆ ಹೋಗಿಬನ್ನಿ..!

“ಅಸ್ಥಿಪಂಜರಗಳ” ಸರೋವರ..! : ಅಸ್ಥಿಪಂಜರಗಳ ಸರೋವರ ನಾ..?! ಯಸ್, ಅಸ್ಥಿಪಂಜರಗಳ ಸರೋವರನೇ..! ಇದು ಇರುವುದು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ..! ಈ ಪ್ರದೇಶದ ಹೆಸರು “ರೂಪಕುಂಡ”..! ಈ ರೂಪಕುಂಡ ಅನ್ನೋದು ಹಿಮಾಲಯ ಪ್ರಾಂತ್ಯದ ಸರೋವರ ಪ್ರದೇಶ..! ಆದ್ರೆ ಇದನ್ನು ಈಗ “ಅಸ್ಥಿಪಂಜರಗಳ ಸರೋವರ” ಎಂದೇ ಕರೆಯುತ್ತಿದ್ದಾರೆ..! ಅದಕ್ಕೆ ಕಾರಣವೇ ಇಲ್ಲಿ ಸಿಕ್ಕಿರುವ ಅಸ್ಥಿಪಂಜರಗಳು..! ಹೌದು, ಸಾರ್ ಇಲ್ಲಿ ಸುಮಾರು 300ರಿಂದ 400 ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೇ..! ಎಲ್ಲಿ ನೋಡಿದರೂ… ಅಸ್ಥಿಪಂಜರ..!

ಟ್ವಿನ್ ಟೌನ್( ಅವಳಿ ಪಟ್ಟಣ)..! : ಕೇರಳದ ಮಲ್ಲಾಪುರಂ ಜಿಲ್ಲೆಯ ಸಣ್ಣ ಹಳ್ಳಿ “ಕೊಡಿನೈ”..! ಈ ಹಳ್ಳಿಯಲ್ಲಿ ಹುಟ್ಟುವ ಬಹುತೇಕ ಮಕ್ಕಳು ಅವಳಿಗಳೇ..! ಅದಕ್ಕಾಗಿ ಈ ಹಳ್ಳಿಯನ್ನು “ಅವಳಿ ಪಟ್ಟಣ” ಅಥವಾ “ಟ್ವಿನ್ ಟೌನ್” ಎಂದು ಕರೆಯುತ್ತಾರೆ..! ಈ ಹಳ್ಳಿಯಲ್ಲಿನ 2000 ಜನಸಂಖ್ಯೆಯಲ್ಲಿ 350 ಜೋಡಿ ಅವಳಿ-ಜವಳಿಯರೇ(ಟ್ವಿನ್ಸ್) ಇದ್ದಾರೆ..! ಸಾಮಾನ್ಯವಾಗಿ ಹುಟ್ಟುವ ಪ್ರತಿ ಸಾವಿರ ಮಕ್ಕಳಲ್ಲಿ ಆರು ಟ್ವಿನ್ಸ್ ಇರುತ್ತಾರೆ..! ಅಂದರೆ ಪ್ರತಿ ಸಾವಿರಕ್ಕೆ ಆರು ಅವಳಿ-ಜವಳಿಗಳು..! ಆದರೆ ಇದೇ ಟ್ವಿನ್ಸ್ ಪ್ರಮಾಣ ಈ “ಕೊಡಿನೈ”ನಲ್ಲಿ ಹುಟ್ಟುವ ಸಾವಿರ ಮಕ್ಕಳಲ್ಲಿ 42 ಜೋಡಿ ಅವಳಿಗಳೇ..! ಕೊಡಿನೈನ ಬಹುತೇಕ ಎಲ್ಲಾ ಕುಟುಂಬಗಳೂ ಒಂದಕ್ಕಿಂತ ಹೆಚ್ಚು ಟ್ವಿನ್ಸ್ ನ್ನು ಹೊಂದಿವೆ..!

ಬಾಗಿಲುಗಳೇ ಇಲ್ಲದ ಮನೆಗಳ ಹಳ್ಳಿ..! ಮಹಾರಾಷ್ಟ್ರ ಸಮೀಪದ “ಶನಿ ಶಿಂಗ್ಪರ್” ಎಂಬ ಹಳ್ಳಿ ಹೆಸರನ್ನು ಕೇಳಿರಬಹುದು…! ಇದು “ಶನಿ ದೇವಸ್ಥಾನ”ದಿಂದ ಹೆಸರುವಾಸಿಯಾಗಿರುವ ಹಳ್ಳಿ..! ಈ ಹಳ್ಳಿಗೆ ಹೋದರೆ ನಿಮಗೊಂದು ಅಚ್ಚರಿ ಕಾದಿದೆ..! ಅದೇನೆಂದರೆ.. ಆ ಹಳ್ಳಿಯ ಯಾವುದೇ ಮನೆಗಳಿಗೆ ಬಾಗಿಲಿಲ್ಲ..! ಬಾಗಿಲುಗಳೇ ಇಲ್ಲದ ಮನೆಗಳ ಹಳ್ಳಿ “ಶಾನಿ”..! ಬಾಗಿಲು ಕತೆ ಬೇಡ.., ಬಾಗಿಲ ಫ್ರೇಂ ಅಥವಾ ಚೌಕಟ್ಟೇ ಈ ಹಳ್ಳಿಯ ಮನೆಗಳಲ್ಲಿ ಇಲ್ಲ..! ಈ ಹಳ್ಳಿಯಲ್ಲಿನ ಮನೆಗಳಿಗೆ ಅದರ ಅಗತ್ಯವೂ ಇಲ್ಲ..! ಯಾಕಪ್ಪಾ.., ಅಂದ್ರೆ ಈ ಹಳ್ಳಿಯ ಇತಿಹಾಸದಲ್ಲಿ ಒಂದೇ ಒಂದು ಕ್ರೈಂ ಕೂಡ ನಡೆದ ಉದಾಹರಣೆನೇ ಇಲ್ಲ..! ಕಳ್ಳ-ಕಾಕರ ಭಯವೇ ಇಲ್ಲದೇ ಇರುವಾಗ ಮನೆಗೆ ಬಾಗಿಲೇಕೆ..?

ನ್ಯಾಚುರಲ್ ಮಮ್ಮಿ..!  : ನೀವು ಯೋಚಿಸಿದ್ದೀರಾ..? “ಮಮ್ಮಿ” ಕಂಡುಬರುವುದು ಈಜಿಫ್ಟಿನಲ್ಲಿ ಮಾತ್ರವೇ ಎಂದು..! ಹಾಗೇ ನೀವು ಥಿಂಕ್ ಮಾಡಿದ್ದೇ ಆಗಿದ್ದಲ್ಲಿ ನಿಮ್ಮ ಕಲ್ಪನೇ ತಪ್ಪು..! ನಮ್ ಇಂಡಿಯಾದ ಹಿಮಾಚಲ ಪ್ರದೇಶದ ಸ್ಪಿಟಿ ಜಿಲ್ಲೆಯ ಅತ್ಯಂತ ಚಿಕ್ಕ ಹಳ್ಳಿ “ಗ್ಯೂ”ನಲ್ಲಿಯೂ ಮಮ್ಮಿ ಇದೆ…! ಅದೂ ಕೂಡ ನ್ಯಾಚುರಲ್ ಆಗಿ ಕುಳಿತ ಬಂಗಿಯಲ್ಲಿನ ಮಮ್ಮಿ..! 1975ರ ನಂತರ ಬೆಳಕಿಗೆ ಬಂದಿರುವ ಈ ಮಮ್ಮಿ ಸುಮಾರು 500 ವರ್ಷ ಹಿಂದಿನದು..! ಅದು ಬೌಧ್ಧ ಸನ್ಯಾಸಿ “ಸಾಂಘ ತೇನ್ಸಿಂಗ್”ರದ್ದು..! ಸೋ, ಮಮ್ಮಿ ನೋಡಲು ಈಜಿಫ್ಟ್ ಗೆ ಹೋಗಬೇಕಿಲ್ಲ..! ಹಿಮಾಚಲ ಪ್ರದೇಶದ “ಗ್ಯೂ” ಎಂಬ ಹಳ್ಳಿಗೆ ಹೋಗಿ..!

ಜೀವಂತ ಬೇರಿನ ಸೇತುವೆ..! :  ಹಾಗೇ ಸುಮ್ಮನೆ ಕಾಡಿನಲ್ಲಿ ಹೆಜ್ಜೆ ಹಾಕಿದ್ರೆ.. ವಿಸ್ಮಯಗಳು ನಮ್ಮ ಕಣ್ಣಿಗೆ ಕಾಣುತ್ತವೆ..! ನೈಸರ್ಗಿಕವಾಗಿ ರೂಪಿತವಾದವು ಮಾನವ ನಿರ್ಮಿತವಾಗಿರುವವುಗಳಿಗಿಂತಾ ಸೊಗಸಾಗಿರುತ್ತವೆ..! ಸಾಧ್ಯವಾದರೆ ಮೇಘಾಲಯದ ಚಿರಾಪುಂಜಿ ಪ್ರಾಂತ್ಯಕ್ಕೆ ಹೋಗ್ಲೇ ಬೇಕು..! ಅಲ್ಲೊಂದು ಪ್ರದೇಶದಲ್ಲಿ ಸರೋವರಕ್ಕೆ ಮರದ ಬೇರಿನ ಸೇತುವೆ ನಿರ್ಮಾಣವಾಗಿದೆ..! ಡಬ್ಬಲ್ ಡೆಕ್ಕರ್ ಸೇತುವೆಯನ್ನೂ ನೋಡುತ್ತೇವೆ..! ಅಲ್ಲಿನ ರಬ್ಬರ್ ಮರದ ಬೇರುಗಳೇ ನಮಗಾಗಿ ಸೇತುವೆ ನಿರ್ಮಾಣ ಮಾಡಿಕೊಟ್ಟಿವೆ..! ಇಂಥಹ ಸೇತುವೆಯನ್ನು ವಿಶ್ವದ ಯಾವ ಮೂಲೆಯಲ್ಲೂ ನಾವು-ನೀವು ನೋಡಲಾರೆವು..!

ಈ ಐದು ವಿಸ್ಮಯ ಸ್ಥಳಗಳಲ್ಲದೇ ಇನ್ನೂ ಅನೇಕ ವಿಸ್ಮಯ ಸ್ಥಳಗಳು ಭಾರತದಲ್ಲಿದೆ..! ಈ ಸ್ಥಳಗಳು ಅತ್ಯಂತ ಕುತೂಹಲ ಮತ್ತು ಅವೆಲ್ಲವಕ್ಕಿಂತಲೂ ಹೆಚ್ಚು ವಿಸ್ಮಯಗಳಾಗಿವೆ..! ಸಧ್ಯಕ್ಕೆ ಇಷ್ಟು ಪ್ಲೇಸ್ ಗಳಿಗೆ ಹೋಗಿಬನ್ನಿ..! ಇವಕ್ಕಿಂತಲೂ ವಿಸ್ಮಯ ಸ್ಥಳಗಳಿದ್ದರೆ ನಮಗೂ ತಿಳಿಸಿ.

 

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...