ವೇಶ್ಯೆಯಾಗಿದ್ದ ಆಕೆ ಬಾಲಿವುಡ್ ಟಾಪ್ ಸ್ಕ್ರಿಪ್ಟ್ ರೈಟರ್ ಆದ ಕಹಾನಿ..!

0
127

ವೇಶ್ಯೆಯಾಗಿದ್ದ ಆಕೆ ಬಾಲಿವುಡ್ ಟಾಪ್ ಸ್ಕ್ರಿಪ್ಟ್ ರೈಟರ್ ಆದ ಕಹಾನಿ..!

ಬಾಲಿವುಡ್ನ ಟಾಪ್ ಸ್ಕ್ರಿಪ್ಟ್ ರೈಟರ್ ಶಗುಫ್ತಾ ರಫೀಕ್. ಹತ್ತಾರು ಹಿಟ್ ಹಿಂದಿ ಚಿತ್ರಗಳಿಗೆ ಸಂಭಾಷಣೆಗಳನ್ನು ಬರೆದಿದ್ದಾರೆ. ಇವರದು ಈಗ ಬಾಲಿವುಡ್ನಲ್ಲಿ ದೊಡ್ಡ ಹೆಸರುಗಳಲ್ಲೊಂದು.
ಟಾಪ್ ಸ್ಕ್ರಿಪ್ಟ್ ರೈಟರ್ ಶಗುಫ್ತಾ ಅವರಿಗೇನು, ಕಲರ್ಫುಲ್ ಹಿಂದಿ ಚಿತ್ರಗಳಿಗೆ ಬಣ್ಣ ಬಣ್ಣದ ಕಥೆಗಳನ್ನು ಬರೆದುಕೊಂಡು, ಫಿಲ್ಮ್ ಪಾರ್ಟಿಗಳಲ್ಲಿ ಓಡಾಡಿಕೊಂಡು ಆರಾಮವಾಗಿದ್ದಾರೆ ಅಂತ ಅಂದುಕೊಳ್ಳುವವರೇ ಹೆಚ್ಚು. ಆದರೆ ಶಗುಫ್ತಾ ಇತಿಹಾಸವನ್ನೊಮ್ಮೆ ಕೆದಕಿ ನೋಡಿದರೆ, ಎಂಥವರಿಗೂ ಶಾಕ್ ಆಗದೇ ಇರದು. ಒಬ್ಬರ ಜೀವನದಲ್ಲಿ ಹೀಗೂ ನಡೆಯುತ್ತಾ ಅನ್ನುವ ಆತಂಕ, ಆಕ್ರೋಶ ಹಾಗೂ ಅಸಹನೆಗಳು ಹುಟ್ಟಿಕೊಳ್ಳುತ್ತವೆ.
ಶಗುಫ್ತಾ ಅವರಿಗೆ ತನ್ನ ತಂದೆ- ತಾಯಿ ಯಾರು ಅನ್ನೋದೇ ಗೊತ್ತಿಲ್ಲ. ಶಗುಫ್ತಾ ಅವರ ಬಾಲ್ಯ ನೋವು, ವೇದನೆಗಳಿಂದಲೇ ಕೂಡಿತ್ತು ಎಂದರೆ ತಪ್ಪಾಗಲಾರದು. ಕಾರಣ ಅವರ ಹುಟ್ಟು ಅನ್ನೋದನ್ನ ಮತ್ತೆ ಹೇಳಬೇಕಿಲ್ಲ. ಅನೈತಿಕ ಸಂಬಂಧದಿಂದ ಹುಟ್ಟಿದವಳು ಅಂತ ಬಾಲಕಿ ಶಗುಫ್ತಾಳನ್ನು ಜರಿದವರೇ ಹೆಚ್ಚು. ಹೀಗಾಗಿಯೇ ಇವರ ತಾಯಿಯಂತಿದ್ದ ಅಕ್ಕ ಮಾತ್ರ ಶಗುಫ್ತಾಳಿಗೆ ಆಸರೆ.


ಶಗುಫ್ತಾ ಅವರದು ಆರ್ಥಿಕವಾಗಿ ಚೆನ್ನಾಗಿದ್ದ ಕುಟುಂಬ. ಆದರೆ, ಕಾರಣಾಂತರಗಳಿಂದ ಬಡತನದತ್ತ ಸಾಗಿತ್ತು. ಹೀಗಾಗಿ ಶಗುಫ್ತಾ ಚಿಕ್ಕ ವಯಸ್ಸಿನಲ್ಲೇ ಬಾರ್ಗಳಿಗೆ ಹೋಗಿ ಡ್ಯಾನ್ಸ್ ಮಾಡತೊಡಗಿದರು. ಈ ಮೂಲಕ ಕುಟುಂಬದ ಜವಾಬ್ದಾರಿಯನ್ನು ತನ್ನ ಪುಟ್ಟ ಹೆಗಲ ಮೇಲೆ ಹೊತ್ತಳು. ಅದು ಅಲ್ಲಿಗೇ ಮುಗಿಯದೇ ತನ್ನ 17ರ ವಯಸ್ಸಿನಲ್ಲಿ ಶಗುಫ್ತಾ ವೇಶ್ಯಾವೃತ್ತಿಯಲ್ಲೂ ತೊಡಗಬೇಕಾಯ್ತು. ಆದರೂ ಹೇಗೋ ತನ್ನ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದೀನಲ್ಲಾ ಎಂಬ ತೃಪ್ತಿಯೊಂದಿಗೆ ಅವರು ದಿನದೂಡತೊಡಗಿದರು.
ಶಗುಫ್ತಾ ಅವರು ವೇಶ್ಯಾ ವೃತ್ತಿಗೂ ಇಳಿದಿದ್ದ ವಿಷಯ ಮನೆಯವರಿಗೆ ಗೊತ್ತಿತ್ತು. ಆದರೆ, ಬೇರೆ ದಾರಿಯಿಲ್ಲದೆ ಕುಟುಂಬದವರು ಸುಮ್ಮನಿದ್ದರು. ಹೀಗೆ, ಅದಾಗಲೇ ಸಂಕಷ್ಟದಲ್ಲಿ ಸಿಲುಕಿದ್ದ ಶಗುಫ್ತಾಳ ಮೇಲೆ ಇನ್ಯಾರ ಕಣ್ಣು ಬಿತ್ತೋ, ಅದೊಂದು ದಿನ ಆಕೆಯ ತಂದೆ ಕುಡಿದ ಅಮಲಿನಲ್ಲಿ ಬಂದೂಕು ಹಿಡಿದು, ಶಗುಫ್ತಾ ಇಲ್ಲದಿದ್ದಾಗ ಇಡೀ ಕುಟುಂಬವನ್ನೇ ಶೂಟ್ ಮಾಡಿ ಕೊಂದುಬಿಟ್ರು. ಅಲ್ಲಿಗೆ ಎಲ್ಲರೂ ಇದ್ದೂ ಅನಾಥೆಯಾಗಿದ್ದ ಶಗುಫ್ತಾ ಮತ್ತೊಮ್ಮೆ ಅನಾಥೆಯಾಗಿಬಿಟ್ಟರು.
ನೋಡಿ, ಶಗುಫ್ತಾ ಅವರು ಅಷ್ಟರಲ್ಲಾಗಲೇ ವೇಶ್ಯಾವೃತ್ತಿಯಲ್ಲಿ ತೊಡಗಿ 10 ವರ್ಷಗಳೇ ಕಳೆದಿದ್ದವು. ಆಗ ಪರಿಚಯದವರು ಅವರಿಗೆ ದುಬೈಗೆ ಹೋಗುವಂತೆ ಹೇಳಿದರು. ಅದರಂತೆ ಶಗುಫ್ತಾ ದುಬೈಗೆ ಹೋದರು. ಅಲ್ಲಿ ಡ್ಯಾನ್ಸ್ ಬಾರ್ಗಳಲ್ಲಿ ಕೆಲಸ ಮಾಡತೊಡಗಿದರು. ಕೆಲ ವರ್ಷಗಳ ಬಳಿಕ ಭಾರತಕ್ಕೆ ಬಂದ ಶಗುಫ್ತಾ ಖಾಸಗಿ ಕಾರ್ಯಕ್ರಮಗಳಲ್ಲಿ ಹಾಡಲು ಪ್ರಾರಂಭಿಸಿದರು.
2002ರ ಹೊತ್ತಿಗೆ ಶಗುಫ್ತಾ ರಫೀಕ್ ಅವರಿಗೆ ಬಾಲಿವುಡ್ ನಿರ್ದೇಶಕ ಕಮ್ ನಿರ್ಮಾಪಕ ಮಹೇಶ್ ಭಟ್ ಪರಿಚಯವಾಯಿತು. ಅವರ ಬಳಿ ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆ ಬರೆಯುವುದಾಗಿ ಕೇಳಿಕೊಂಡರು ಶಗುಫ್ತಾ. ಆದರೆ ಮೊದಲ ಅವಕಾಶಕ್ಕಾಗಿ ಅವರು 4 ವರ್ಷಗಳೇ ಕಾಯಬೇಕಾಯಿತು. 2006ರ “ವೋ ಲಮ್ಹೇ” ಚಿತ್ರದ ಮೂಲಕ ಶುಗುಫ್ತಾರ ಬದುಕುವಾಸೆ ಮತ್ತೆ ಚಿಗುರೊಡೆಯಿತು. ಬಾಲಿವುಡ್ ಕರಿಯರ್ ಪ್ರಾರಂಭವಾಯಿತು.
ಶಗುಫ್ತಾ ರಫೀಕ್ ಕ್ರಮೇಣ ಭಟ್ ಕ್ಯಾಂಪ್ನ ಎಲ್ಲಾ ಚಿತ್ರಗಳಿಗೂ ಚಿತ್ರಕಥೆ, ಸಂಭಾಷಣೆ ಬರೆಯತೊಡಗಿದರು. ಆವಾರಾಪನ್, ಧೋಖಾ, ಶೋಬಿಜ್, ರಾಜ್ 2, ಜಿಸ್ಮ್ 2, ಮರ್ಡರ್ 2, ಜನ್ನತ್ 2, ರಾಜ್ 3 ಸೇರಿದಂತೆ 2014ರ ಸೂಪರ್ಹಿಟ್ ಆಶಿಕಿ 2 ಚಿತ್ರಕ್ಕೂ ಶಗುಫ್ತಾ ಚಿತ್ರಕಥೆ, ಸಂಭಾಷಣೆಗಳನ್ನು ಬರೆದಿದ್ದಾರೆ. ಈಗ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
ಏನೇ ಹೇಳಿ, ಶಗುಫ್ತಾ ರಫೀಕ್ ಅವರು ಬಾಲಿವುಡ್ ಸದ್ಯದ ಸಕ್ಸಸ್ ಫುಲ್ ಸ್ಟೋರಿ ರೈಟರ್ ಸಾಲಿಗೆ ಅವರು ಸೇರಿದ್ದಾರೆ. ಅವರ ಬೆಳೆದು ಬಂದ ಹಾದಿ ಅತ್ಯಂತ ದುರ್ಗಮವಾದರೂ ಅವರೀಗ ಮುನ್ನಡೆಯುತ್ತಿರುವ ಹಾದಿ ಅತ್ಯಂತ ರೋಚಕ ಅಲ್ಲವೇ..!?

LEAVE A REPLY

Please enter your comment!
Please enter your name here