ಮುಂದಿನ ಐಪಿಎಲ್ ನಿಂದ 5 ವಿದೇಶಿ ಆಟಗಾರರು

0
73

ಏಪ್ರಿಲ್ 9ರಂದು ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯದಲ್ಲಿಯೇ ಮೊಟಕುಗೊಂಡಿದೆ. ಟೂರ್ನಿಯಲ್ಲಿ ಇದುವರೆಗೂ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು ಕೆಲ ಆಟಗಾರರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮುಂದೂಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಉಳಿದ 31 ಪಂದ್ಯಗಳು ಇಂಗ್ಲೆಂಡ್ ಅಥವಾ ಯುಎಇಯಲ್ಲಿ ನಡೆಯಲಿವೆ ಎಂಬ ಸುದ್ದಿ ಹರಿದಾಡುತ್ತಿದೆ.

 

ಇದೀಗ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮುಂದಿನ ಬಾರಿಯ ಐಪಿಎಲ್ ಟೂರ್ನಿಯಲ್ಲಿ ದೊಡ್ಡ ಬದಲಾವಣೆಯೊಂದನ್ನು ಮಾಡಬೇಕು ಎಂದು ಸಲಹೆಯನ್ನು ನೀಡಿದ್ದಾರೆ. ಹೇಗಿದ್ದರೂ ಮುಂದಿನ ಬಾರಿಯ ಐಪಿಎಲ್ ಟೂರ್ನಿಗೆ 2 ಹೊಸ ತಂಡಗಳ ಸೇರ್ಪಡೆಯಾಗುತ್ತಿದ್ದು ತಂಡವೊಂದರಲ್ಲಿ 5 ವಿದೇಶಿ ಆಟಗಾರರನ್ನು ಆಡಿಸಲು ಅನುಮತಿ ನೀಡಬೇಕು. ಐಪಿಎಲ್ ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ವೀಕ್ಷಕರನ್ನು ಹೊಂದಿದ್ದು ಹೆಚ್ಚು ಹೆಚ್ಚು ವಿದೇಶೀ ಪ್ರತಿಭೆಗಳಿಗೂ ಸಹ ಅವಕಾಶವನ್ನು ನೀಡುವುದು ಉತ್ತಮ’ ಎಂದು ಆಕಾಶ್ ಚೋಪ್ರಾ ಸಲಹೆಯನ್ನು ನೀಡಿದ್ದಾರೆ.

 

‘ಐಪಿಎಲ್ ಗುಣಮಟ್ಟವನ್ನು ಕಾಪಾಡುವ ಸಲುವಾಗಿ ತಂಡವೊಂದಕ್ಕೆ 5 ವಿದೇಶಿ ಆಟಗಾರರನ್ನು ಆಡಿಸುವ ಅವಕಾಶವನ್ನು ನೀಡಬೇಕು. ಕೆಲ ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭಾರತೀಯ ಕ್ರಿಕೆಟಿಗರ ಸಂಖ್ಯೆ ಹೆಚ್ಚಿರುತ್ತದೆ, ಆದರೆ ಇನ್ನೂ ಕೆಲವು ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭಾರತೀಯ ಕ್ರಿಕೆಟಿಗರ ಸಂಖ್ಯೆ ಕಡಿಮೆ ಇರಬಹುದು ಹೀಗಾಗಿ 5 ವಿದೇಶಿ ಕ್ರಿಕೆಟಿಗರನ್ನು ಆಡಿಸಲು ಅವಕಾಶ ನೀಡುವುದರಿಂದ ಐಪಿಎಲ್ ಗುಣಮಟ್ಟ ಹೀಗೆಯೇ ಮುಂದುವರಿಯಲಿದೆ. ಇಲ್ಲವಾದರೆ ಮುಂದೊಂದು ದಿನ ಇತರೆ ಫ್ರಾಂಚೈಸಿ ಲೀಗ್‌ಗಳಂತೆ ಐಪಿಎಲ್ ಕೂಡ ಒಂದು ಸಾಮಾನ್ಯ ಲೀಗ್ ಆಗಿಬಿಡಬಹುದು’ ಎಂದು ಆಕಾಶ್ ಚೋಪ್ರಾ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here