ದೇವರ ಹಾಗೂ ಜನರ ಆಶೀರ್ವಾದದಿಂದ ಮುಂದಿನ ಅವಧಿಯನ್ನು ಪೂರೈಸುತ್ತೇನೆ. ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇನೆ. ಮಾಜಿ ಸಿಎಂ ಕುಮಾರಸ್ವಾಮಿ ಅಥವಾ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ತೀರ್ಮಾನ ಮಾಡುವವರು ಮತದಾರರು. ಮುಂದಿನ ಮೂರೂವರೆ ವರ್ಷ ಬಿಜೆಪಿಯನ್ನೇ ಪೂರ್ಣ ಅಧಿಕಾರದಲ್ಲಿ ಮುಂದುವರಿಸಬೇಕೆಂದು ಜನ ತೀರ್ಮಾನಿಸಿದ್ದಾರೆ. ಹಾಗಾಗಿ ಯಡಿಯೂರಪ್ಪನವರ ಆಡಳಿತವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚುನಾವಣೆ ಬಂದಾಗ ಹಗುರವಾಗಿ ಮಾತನಾಡುತ್ತಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಏನಾಯಿತು ಎನ್ನುವುದು ಗೊತ್ತಿದೆ. ಅಂದು ಸಿದ್ದರಾಮಯ್ಯ ಏನು ಹೇಳಿದ್ದರು? ಭಾರತೀಯ ಜನತಾ ಪಕ್ಷ 22 ಸ್ಥಾನ ಗೆಲ್ಲಲಿದೆ ಎಂದು ನಾನು ಹೇಳಿದ್ದೆ. ಆದ್ರೆ ಗೆದ್ದಿದ್ದು 25 ಸ್ಥಾನಗಳನ್ನು. ಎರಡು ಪಕ್ಷಗಳು ತಲಾ ಒಂದೊಂದು ಸ್ಥಾನವನ್ನು ಮಾತ್ರ ಗೆದ್ದಿವೆ. ಉಪಚುನಾವಣೆಯಲ್ಲು ನಾವೇ ಗೆಲ್ಲುತ್ತೆವೆ ನಾನು ಅಧಿಕಾರದಲ್ಲಿ ಮುಂದುವರಿಯುವುದನ್ನು ಯಾರು ತಡೆಯಲು ಆಗಲ್ಲ ಎಂದರು.