ಕೈಲಾಸ ಸರೋವರ ಯಾತ್ರೆ ಕೈಗೊಂಡಿದ್ದ ಯಾತ್ರಾರ್ಥಿಗಳ ರಕ್ಷಣಾ ಕಾರ್ಯ ಮುಂದುವರೆದಿದೆ.
ಭಾರೀ ಮಳೆ ಹಾಗೂ ಹವಮಾನ ವೈಪರಿತ್ಯದಿಂದ ಕಾರ್ಯಾಚರಣೆ ವಿಳಂಬವಾಗಿದೆ.
ರಸ್ತೆ ಅಪಘಾತದಲ್ಲಿ 5 ಮಂದಿ ಸೇರಿದಂತೆ ಒಟ್ಟು 7ಮಂದಿ ಸಾವನ್ನಪ್ಪಿದ್ದಾರೆ.
ಹಿಲ್ಸಾದಲ್ಲಿ 550ಮಂದಿ , ಸಿಮಿಕೋಟ್ ನಲ್ಲಿ 525 ಮಂದಿ, ಟಿಬೆಟ್ ಭಾಗದಲ್ಲಿ 500ಮಂದಿ ಒಳಗೊಂಡಂತೆ 1575 ಮಂದಿ ಭಾರತೀಯ ಪ್ರವಾಸಿಗರು ಸಂಕಷ್ಟದಲ್ಲಿದ್ದರು. ಇತ್ತ ನೇಪಾಳ್ ಗಂಜ್ ನಿಂದ 104 ಮಂದಿ ಪ್ರವಾಸಿಗರನ್ನು 7ಕಮರ್ಷಿಯಲ್ ವಿಮಾನಗಳ ಮೂಲಕ ಸಿಮಿಕೋಟ್ ಗೆ ಸ್ಥಳಾಂತರಿಸಲಾಗಿದೆ.
ಸಿಮಿಕೋಟ್ ನಿಂದ ಉತ್ತರ ಪ್ರದೇಶ ರಾಜಧಾನಿ ಲಕ್ನೋ ಗೆ ರಸ್ತೆ ಮುಖೇನ ಮೂರು ಗಂಟೆಗಳಲ್ಲಿ ತಲುಪಬಹುದು. ಸಿಲುಕಿರುವ ಯಾತ್ರಾರ್ಥಿಗಳಿಗೆ ವೈದ್ಯಕೀಯ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕದ 290 ಯಾತ್ರಾರ್ಥಿಗಳು ಸೇರಿದಂತೆ ದೇಶದ 1500 ಯಾತ್ರಾರ್ಥಿಗಳ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಕನ್ನಡಿಗರೆಲ್ಲರು ನೇಪಾಳಾದ ಸಿಮಿಕೋಟ್ ನಲ್ಲಿದ್ದು, ರಸ್ತೆ ಮಾರ್ಗವಾಗಿ ಕಠ್ಮಂಡು ಮೊದಲಾದ ಪ್ರದೇಶಗಳಿಗೆ ತರುವ ಯತ್ನ ನಡೆದಿದೆ.
ಯಾತ್ರಾರ್ಥಗಳ ಸಂಪರ್ಕಕ್ಕೆ +9779823672371 ಗೆ ಕರೆಮಾಡಬಹುದು.