ಮುಟ್ಟಾದಾ ಸಂದರ್ಭದಲ್ಲಿ ನೀರಿಗಿಳಿಯಬಹುದಾ!

Date:

ಹೆಣ್ಣು ಮುಟ್ಟಾಗುವುದು ಮೌಢ್ಯ ಅಲ್ಲ ಅದು ಸಹಜ ಕ್ರಿಯೆ. ಮುಟ್ಟು ಹೆಣ್ತನದ ಪ್ರತೀಕ. ನೈಸರ್ಗಿಕ ಕೊಡುಗೆಯಾದ ಈ ಬಗ್ಗೆ ಹೆಮ್ಮೆಗಿಂತ ಹೆಣ್ಣು ಶಾಪವೆಂದು ಪರಿಗಣಿಸುವುದೇ ಹೆಚ್ಚು. ಅರಿವೇ ಇಲ್ಲದ ಹೆಣ್ಣಿಗೆ ಮೊದಲು ಬಟ್ಟೆಯಲ್ಲಿ ರಕ್ತ ಕಂಡಾಗ ಭಯ ಹುಟ್ಟೋದು ಸಹಜವಾಗಿರುತ್ತೆ. ನಂತರ ಮಹಿಳೆಯರಿಗೆ ಪ್ರತಿ ತಿಂಗಳು ಉಂಟಾಗುವ ಋತುಸ್ರಾವದ ಸಂದರ್ಭದಲ್ಲಿ ಹೊಟ್ಟೆ ನೋವು, ಇನ್ಫೆಕ್ಷನ್, ಬೆನ್ನು ನೋವು ಮೊದಲಾದ ಸಮಸ್ಯೆಗಳು ಕಾಡುತ್ತವೆ. ಈ ಸಂದರ್ಭದಲ್ಲಿ ಮಹಿಳೆಯರು ಕೆಲವು ವಿಷಯಗಳಲ್ಲಿ ಸೂಕ್ಷ್ಮವಾಗಿರಬೇಕಾಗುತ್ತೆ.
ಹೆಣ್ಣಿಗೆ ಋತುಸ್ರಾವ ಆದಾಗ ಮೂಡ್ ಸ್ವಿಂಗ್ ಆಗುತ್ತೆ. ಬೇಜಾರು ಅಥವಠಾ ಖಿನ್ನತೆಗೆ ಒಳಗಾಗುತ್ತಾರೆ. ಕೆಲವೊಮ್ಮೆ ಪಿರಿಯಡ್ಸ್ ಬೇಗ ಆಗುತ್ತೆ. ಇನ್ನು ಕೆಲವೊಮ್ಮೆ ಒತ್ತಡ, ಬದಲಾದ ಜೀವನ ಶೈಲಿಯಿಂದ ತಡವಾಗುತ್ತದೆ. ಅದಕ್ಕೆಲ್ಲಾ ಚಿಂತೆ ಮಾಡುತ್ತಾ ಕೂರಬಾರದು. ಓವುಲೇಶನ್ ಸ೦ದರ್ಭದಲ್ಲಿ ಪಿರಿಯಡ್ಸ್ ಆಗುವ ಮುನ್ನ ಹಾಗೂ ನ೦ತರ ಬಿಳಿ ದ್ರವ ಸ್ರವಿಸುವುದೂ ಕಾಮನ್ ಆಗಿರುತ್ತೆ. ಅಂತಹ ಸಂದರ್ಭದಲ್ಲಿ ವಿಪರೀತ ಹೊಟ್ಟೆ, ಬೆನ್ನು ನೋವಿನೊಂದಿಗೆ ವಾಂತಿಯಾಗುತ್ತದೆ. ಕೆಲವರಿಗೆ ಋತುಸ್ರಾವದ ಸ೦ದರ್ಭದಲ್ಲಿ ಸ್ವಿಮ್ಮಿಂಗ್ ಮಾಡಲು ಎದರುತ್ತಾರೆ. ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಅಂತಾ. ಆದ್ರೆ ಅಂತಹದ್ದು ಯಾವುದೇ ಅಪಾಯ ಎದುರಾಗುವುದಿಲ್ಲ. ಸ್ವಿಮಿಂಗ್ ಮಾಡುವಾಗ ಟ್ಯಾಂಪೂನ್ ಬಳಸಿದ್ದರೆ ಸೇಫ್ ಆಗಿರುತ್ತೆ. ಸುಖಾ ಸುಮ್ನೆ ಭಯ ಬೇಡ ಪಡುವ ಅವಶ್ಯಕತೆ ಇರುವುದಿಲ್ಲ. ಮಸಾಲೆ ಪದಾರ್ಥಗಳು, ಕುರುಕು ತಿಂಡಿ, ಜಮಕ್ ಫುಡ್ ಕಾಫಿ ತಿಂಡಿಯಿಂದ ದೂರ ಇದ್ದು ತಾಜಾ ಹಣ್ಣಿನ ಜ್ಯೂಸ್, ವಿಟಮಿನ್ ಯುಕ್ತ ಆಹಾರ ಸೇವಿಸಿದ್ರೆ ಒಳ್ಳೆಯದು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...