ಕರ್ಬೂಜ ಹಣ್ಣು ಎಂದರೆ ನೆನಪಾಗೋದು ಬಿಸಿಲಿನಲ್ಲಿ ಬಳಲಿ ಬಂದಾಗ ತಂಪಾದ ಕರ್ಬೂಜ ಜ್ಯೂಸ್ ಕುಡಿಯೋಣ ಎಂದು. ಆದರೆ ನಿಮಗೆ ಗೊತ್ತಾ ಈ ಹಣ್ಣಿನಿಂದ ಆರೋಗ್ಯದ ಜೊತೆಗೆ ಅಂದವೂ ಹೆಚ್ಚುತ್ತೆ.
ಹಣ್ಣುಗಳು ಪ್ರತಿಯೊಬ್ಬರ ಅರೋಗ್ಯ ಕಾಪಾಡಲು ಬೇಕು. ಹಣ್ಣುಗಳಲ್ಲಿ ಇರುವ ವಿಟಮಿನ್ಗಳು, ಖನಿಜಾಂಶಗಳು ಮತ್ತು ಆ್ಯಂಟಿ ಆ್ಯಂಟಿ ಕ್ಸಿಡೆಂಟ್ ಅರೋಗ್ಯ ಮತ್ತು ಸೌಂದರ್ಯಕ್ಕೂ ಉತ್ತಮ. ಅದರಲ್ಲಿ ಕರ್ಬೂಜವೂ ಒಂದು. ಇದನ್ನು ಸೇವಿಸೋದ್ರಿಂದ ಒಂದೆರಡಲ್ಲ ಹತ್ತು ಹಲವು ಪ್ರಯೋಜನಗಳಿವೆ…
– ಕರ್ಬೂಜ ಹಣ್ಣಿನ ರಸ ಮಧುಮೇಹಿ ರೋಗಿಗಳಿಗೆ ಉತ್ತಮ. ಇದು ಮಧುಮೇಹಿಗಳ ದೇಹದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡುತ್ತದೆ.
– ಕರ್ಬೂಜ ಹಣ್ಣಿನಲ್ಲಿ ಕೊಲೆಸ್ಟ್ರಾಲ್ ಮತ್ತು ಕ್ಯಾಲರಿ ಕಡಿಮೆ ಇರೋದ್ರಿಂದ ತೂಕ ಇಳಿಸಲು ಬಯಸಿದವರಿಗೆ ಇದು ಬೆಸ್ಟ್.
– ಇದು ಮೂತ್ರ ವರ್ಧಕವಾಗಿದ್ದು, ಕಿಡ್ನಿ ಸಮಸ್ಯೆಯನ್ನು ತಡೆಯುತ್ತದೆ.
– ತ್ವಚೆಯನ್ನು ಒತ್ತಡ ಮತ್ತು ಬಿಸಿಲಿನಿಂದ ಹಾಳಾಗದಂತೆ ಕಾಪಾಡುತ್ತದೆ. ಇದರಲ್ಲಿರುವ ಎಂಜಿಮಿನ್ ತ್ವಚೆಯಲ್ಲಿ ನೆರಿಗೆ ಬಾರದಂತೆ ನೋಡಿಕೊಳ್ಳುತ್ತದೆ.
– ಜೀರ್ಣಕ್ರಿಯೆ ಸಮಸ್ಯೆ ಉಳ್ಳವರು ಈ ಹಣ್ಣನ್ನು ನಿಯಮಿತವಾಗಿ ಸೇವಿಸಬೇಕು. ಇದರಿಂದ ಪಚನ ಕ್ರಿಯೆ ಉತ್ತಮವಾಗಿ, ಅರೋಗ್ಯ ಉತ್ತಮವಾಗುತ್ತದೆ.
– ಇದರಲ್ಲಿರುವ ವಿಟಮಿನ್ ಸಿ ಹೆಚ್ಚಿನ ಪ್ರಮಾಣದ ಬಿಳಿ ರಕ್ತ ಕಣಗಳನ್ನು ಉತ್ಪಾದಿಸುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
– ಈ ಹಣ್ಣಿನಲ್ಲಿ ನೀರು ಮತ್ತು ನಾರಿನ ಅಂಶ ಇರುವುದರಿಂದ ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.
– ಮಾಸಿಕ ಋತುಸ್ರಾವದ ಸಂದರ್ಭದಲ್ಲಿ ಕೆಳಹೊಟ್ಟೆ ಸೆಳೆತ ಮತ್ತು ನೋವು ಹೆಚ್ಚಾಗಿದ್ದರೆ ಕರ್ಬೂಜ ಹಣ್ಣನ್ನು ಸೇವಿಸಬೇಕು.
– ಕೆಲವೊಂದು ಹೃದ್ರೋಗಗಳಿಗೂ ಕರ್ಬೂಜದಿಂದ ಉಪಯೋಗವಿದೆ. ಇದರಲ್ಲಿ ವಿಟಮಿನ್ ‘ಸಿ’ಅಂಶ ಹೇರಳವಾಗಿ ಇರುವ ಕಾರಣ, ಹೃದ್ರೋಗಗಳನ್ನು ದೂರ ಇಡುತ್ತದೆ.
– ಕರ್ಬೂಜವನ್ನು ತಿನ್ನುತ್ತಿದ್ದರೆ, ತ್ವಚೆಯು ಒರಟಾಗಿ ಮತ್ತು ಒಣಗಿದಂತೆ ಕಾಣುವುದಿಲ್ಲ. ಮೃದುವಾಗುತ್ತದೆ. ಕರ್ಬೂಜದಲ್ಲಿರುವ ಕೊಲೆಜಿನ್ ಅಂಶ ಸ್ಕಿನ್ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ.
– ಮಸ್ಕ್ ಮೆಲನ್ ತ್ವಚೆಯ ಕಾಂತಿ ಹಾಗೂ ಬಣ್ಣವನ್ನು ವೃದ್ಧಿಸುತ್ತದೆ. ಇದರ ತಿರುಳು ಅಥವಾ ಜ್ಯೂಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಕಲೆರಹಿತ ಕಾಂತಿಯುಕ್ತ ತ್ವಚೆ ಪಡೆಯಿರಿ.