ಮುನಿರತ್ನ ನಿರ್ಮಾಣದ ಬಹು ನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ಚಿತ್ರ ಕುರುಕ್ಷೇತ್ರ ಬಿಡುಗಡೆಗೆ ಇರುವುದು ಬೇರೆ ಚಿತ್ರಗಳ ಸಮಸ್ಯೆಯಲ್ಲ, ಬದಲಿಗೆ ಲೋಕಸಭೆ ಚುನಾವಣೆ. ಏಪ್ರಿಲ್ 5ರಂದು ಚಿತ್ರ ಬಿಡುಗಡೆ ಮಾಡಬೇಕೆಂದು ನಿರ್ಮಾಪಕ ಮುನಿರತ್ನ ಅಂದುಕೊಂಡಿದ್ದರು. ಇದೀಗ ಚಿತ್ರ ಬಿಡುಗಡೆ ಮಾಡಬೇಕಾದರೆ ಅವರಿಗೆ ಚುನಾವಣಾ ಆಯೋಗದ ಅನುಮತಿ ಸಿಗಬೇಕು.
ಇದರ ಹಿಂದಿನ ಮುಖ್ಯ ಕಾರಣ ಸಿನಿಮಾದಲ್ಲಿ ಸಿಎಂ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಅಭಿನಯಸಿರುವುದು. ಚಿತ್ರದಲ್ಲಿ ನಿಖಿಲ್ ಅಭಿಮನ್ಯು ಪಾತ್ರದಲ್ಲಿ ನಟಿಸಿದ್ದು ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಪ್ರಕಾರ ಅಭ್ಯರ್ಥಿಗಳನ್ನು ಯಾವ ರೀತಿಯಲ್ಲಾದರೂ ಪ್ರಚಾರಕ್ಕೆ ಬಳಸಿಕೊಳ್ಳುವುದು ನೀತಿ ಸಂಹಿತೆ ಉಲ್ಲಂಘನೆಯಾಗಿರುತ್ತದೆ.
ಹೀಗಾಗಿ ದರ್ಶನ್ ಅಭಿನಯದ ಕುರುಕ್ಷೇತ್ರ ಯಾವಾಗ ರಿಲೀಸ್ ಎಂದು ಕಾದು ನೋಡಬೇಕಿದೆ .