ಹೋರಾಟದ ಹೆಸರಿನಲ್ಲಿ ಬಸ್ ಗಳಿಗೆ ಬೆಂಕಿ ಇಡುವುದು ಎಷ್ಟು ಸರಿ ಸಾರಿಗೆ ಬಸ್‍ಗಳು ನಮ್ಮ ಸೇವೆಗಾಗಿಯೇ ಇರುವುದು ಎಂಬ ಪರಿಜ್ಞಾನವೇ ಇಲ್ಲದೆ ಏನೇ ಹೋರಾಟ, ಬಂದ್ ನಡೆದಾಗಲೆಲ್ಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡುವುದು , ಬೆಂಕಿ ಹಚ್ಚುವಂತಹ ಹೇಯ ಕೆಲಸ ಮಾಡುತ್ತಾರೆ.
ಇದರಿಂದ ನಮ್ಮ ತೆರಿಗೆ ಹಣವೇ ನಷ್ಟವಾಗುತ್ತದೆ. ಮುಂದೆ ನಾವು ಪ್ರಯಾಣಿಸಲು ನಮಗೆ ಸೇವೆ ಸಲ್ಲಿಸಲು ಬಸ್‍ಗಳು ಇರುವುದಿಲ್ಲ ಎಂಬ ಸಾಮಾನ್ಯಜ್ಞಾನವೂ ಇವರಿಗೆ ಇರುವುದಿಲ್ಲ.ಇಂದು ಸಾರ್ವಜನಿಕರಿಗೆ ಅರಿವು ಮೂಡಿಸಲು ನಗರದ ಕೆಎಸ್‍ಆರ್‍ಟಿ ಬಸ್ ನಿಲ್ದಾಣದಲ್ಲಿ ಕಿಡಿಗೇಡಿಗಳಿಂದ ಹಾನಿಗೊಳಗಾದ ಬಸ್‍ಗಳನ್ನು ಪ್ರದರ್ಶಕ್ಕಿಡಲಾಗಿದೆ.ಒಂದೊಂದು ಬಸ್‍ಗಳೂ ಕೂಡ ತಮ್ಮದೇ ಆದ ಕಥೆ ಹೇಳುತ್ತವೆ.