ಮೆಜೆಸ್ಟಿಕ್ ನಿಂದ ಆಟೋ ಬುಕ್ ಮಾಡೋ ಮುನ್ನ ಈ ಸ್ಟೋರಿ ನೋಡಿ!

Date:

 

ಬೆಂಗಳೂರು:- ಪ್ರಯಾಣಿಕರೇ ಮೆಜೆಸ್ಟಿಕ್ ನಿಂದ ಆಟೋ ಬುಕ್ ಮಾಡೋ ಮುನ್ನ ಎಚ್ಚರ. ನಾವು ಹೇಳುತ್ತೀರೋ ಸುದ್ದಿಯನ್ನು ನೀವು ನೋಡಲೇಬೇಕು.

ಹೌದು, ನಗರದಲ್ಲಿ ಆಟೋ ಚಾಲಕರ ಹಾವಳಿ ಮಿತಿ ಮೀರಿದೆ. ಬೆಳ್ಳಂಬೆಳಗ್ಗೆ ಮಹಿಳೆ ಜೊತೆ ಆಟೋ ಚಾಲಕ ಕಿರಿಕ್ ತೆಗೆದಿದ್ದು, ಮಹಿಳೆ ಮೇಲೆ ದರ್ಪ ಮೆರೆದಿದ್ದಾರೆ. ಮೆಜೆಸ್ಟಿಕ್ ನಿಂದ ಬಿಟಿಎಂ ಲೇಔಟ್ ಗೆ ಮಹಿಳೆ 300 ರುಪಾಯಿಗೆ ಆಟೋ ಬುಕ್ ಮಾಡಿದ್ದರು. ಟ್ರಾಫಿಕ್ ಹೆಚ್ಚಾಗುತ್ತಿದ್ದಂತೆ ಆಟೋ ಚಾಲಕ ಹೈಡ್ರಾಮಾ ಆಡಿದ್ದಾನೆ.

ಕಾರ್ಪೋರೇಷನ್ ಸರ್ಕಲ್ ನಲ್ಲಿ ಆಟೋ ನಿಲ್ಲಿಸಿ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಪ್ರಯಾಣಿಕರು ಹೆಚ್ಚು ಹಣ ನೀಡಲು ಒಪ್ಪದ ಹಿನ್ನಲೆ ನಡುರಸ್ತೆಯಲ್ಲೆ ಮಹಿಳೆ ಮತ್ತು ಮಗುವನ್ನ ಆಟೋದಿಂದ ಕೆಳಗಿಳಿಸಿ ಕಿರಿಕ್ ತೆಗೆದಿದ್ದಾನೆ. ಮೆಜೆಸ್ಟಿಕ್ ನಿಂದ ಬೆಳಗ್ಗೆ 9 ಗಂಟೆಗೆ ಓಲಾ ಮೂಲಕ ಮಹಿಳೆ ಆಟೋ ಬುಕ್ ಮಾಡಿದ್ದರು.

ಅರ್ಧ ದಾರಿಗೆ ಬಂದಿದ್ದೆ ತಡ ಆಟೋ ಚಾಲಕ ತನ್ನ ನಕಲಿ ಬುದ್ದಿ ತೋರಿಸಿದ್ದಾನೆ. ಆಟೋ ಚಾಲಕನ ಕಿರಿಕ್ ಗೆ ಬೇಸತ್ತು ತನ್ನ ಗಂಡನಿಗೆ ಮಹಿಳೆ ಕರೆ ಮಾಡಿದ್ದಾರೆ. ನಂತ್ರ ಕಾರ್ಪೊರೇಷನ್ ಸರ್ಕಲ್ ನಡು ರಸ್ತೆಯಲ್ಲೇ ಮಹಿಳೆ ಮೇಲೆ ಆಟೋ ಚಾಲಕ ಗಲಾಟೆ ಮಾಡಿದ್ದಾನೆ.

ಹೆಚ್ಚಿನ ಹಣ ಕೊಟ್ಟರೆ ಕರೆದುಕೊಂಡು ಹೋಗುತ್ತೇನೆ . ಇಲ್ಲ ಅಂದ್ರೆ ಇಲ್ಲೇ ಬಿಟ್ಟು ಹೋಗ್ತೀವಿ ಎಂದು ಆಟೋ ಚಾಲಕ ಅವಾಜ್ ಹಾಕಿದ್ದಾನೆ. ಆಟೋ ಚಾಲಕನ ನಡೆಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಕಡೆಗೆ ನಡುರಸ್ತೆಯಲ್ಲೆ ಮಹಿಳೆ ಬಿಟ್ಟು ಆಟೋ ಚಾಲಕ ಎಸ್ಕೇಪ್ ಆಗಿದ್ದಾನೆ

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...