ಬೆಂಗಳೂರು: ಮೇಘಾಲಯದ ನೂತನ ಗವರ್ನರ್ ಆಗಿ ಮೈಸೂರಿನ ಮಾಜಿ ಸಂಸದ ಸಿ.ಹೆಚ್ ವಿಜಯ್ ಶಂಕರ್ ಅವರನ್ನ ನೇಮಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ನೀಡಿದ್ದಾರೆ. ರಾಣೆಬೆನ್ನೂರು ಮೂಲದವರಾದ ಚಂದ್ರಶೇಖರ್ ಹೆಚ್.ವಿಜಯ್ ಶಂಕರ್ ಇವರ ಪೂರ್ಣ ಹೆಸರು. ವಿಜಯ್ ಶಂಕರ್ 1956 ಅಕ್ಟೋಬರ್ 21ರಂದು ಜನಿಸಿದರು. ರಾಜಕೀಯ ಆರಂಭದ ದಿನಗಳಿಂದ ಬಿಜೆಪಿಯಲ್ಲಿದ್ದ ಇವರು, 2017ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.
2019ರಲ್ಲಿ ಮತ್ತೆ ಬಿಜೆಪಿಗೆ ಸೇರಿಕೊಂಡಿದ್ದಾರೆ. ಇದೀಗ ಮೇಘಾಲಯದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಮೊದಲು ಬಿಜೆಪಿಯಿಂದ ಸ್ಪರ್ಧೆ ಮಾಡಿ ಮೈಸೂರಿನ ಸಂಸದರಾಗಿದ್ದರು. 2014ರಲ್ಲಿ ಹಾಸನದಿಂದ ಸ್ಪರ್ಧೆ ಮಾಡಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಿರುದ್ಧ ಸೋಲು ಕಂಡರು. ಮೈಸೂರಿನ ಹುಣಸೂರು ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.