ಮೇ 21ಕ್ಕೆ ‘ಯುವರತ್ನ’ ರಿಲೀಸ್ ಆಗುತ್ತಾ? ನೀವು ಕೇಳಿದ್ದೇ ಬೇರೆ, ಡೈರೆಕ್ಟರ್ ಹೇಳಿದ್ದೇ ಬೇರೆ?

Date:

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ‌ ಬಹು ನಿರೀಕ್ಷಿತ ಯುವರತ್ನ ಸಿನಿಮಾ ಮೇ 21ಕ್ಕೆ ರಿಲೀಸ್ ಆಗುತ್ತೆ ಎಂಬ ಸುದ್ದಿಯೊಂದು ಕಾಡ್ಗಿಚ್ಚಿನಂತೆ ಸೋಶಿಯಲ್ ಮೀಡಿಯಾದಲ್ಲಿ ಹರಡಿದೆ…! ಸಿನಿಮಾ‌ ಸೆಟ್ಟೇರಿ ವರ್ಷವೇ ಆಗಿದ್ದು, ಯುವರತ್ನನಾಗಿ ಅಪ್ಪುವನ್ನು ಕಣ್ತುಂಬಿಕೊಳ್ಳಲು ಕಾಯ್ತಿದ್ದ ಅಭಿಮಾನಿಗಳಿಗೆ ಇದು ಸಿಹಿ ಸುದ್ದಿಯಾಗಿತ್ತು…! ಸುದ್ದಿ ಹೊರ ಬರುತ್ತಿದ್ದಂತೆ ಅಭಿಮಾನಿಗಳು ವಿಷಯವನ್ನು ಎಲ್ಲೆಡೆ‌ ಶೇರ್ ಮಾಡಿ ಸಂಭ್ರಮಿಸಿದ್ದೋ ಸಂಭ್ರಮಿಸಿದ್ದು..! ಪುನೀತ್ ಹುಟ್ಟುಹಬ್ಬದಂದು ಟೀಸರ್ ಕಣ್ತುಂಬಿಕೊಂಡ‌‌ ಮೇಲಂತು ನಿರೀಕ್ಷೆ ಬೆಟ್ಟದಷ್ಟಾಗಿದೆ. 

ಈ ನಡುವೆ ಮೇ 21ಕ್ಕೆ ಸಿನಿಮಾ‌ ತೆರೆಗೆ ಬರುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
”ಪವರ್ ಸ್ಟಾರ್ ಎಲ್ಲಾ ಅಭಿಮಾನಿಗಳು ‘ಯುವರತ್ನ’ ಸಿನಿಮಾ ರಿಲೀಸ್ ಗೆ‌ಕಾಯುತ್ತಿರುವವರಿಗೆ ದೊಡ್ಡ ಸರ್ಪ್ರೈಸ್. ಬಹು ನಿರೀಕ್ಷೆಯ ಸಿನಿಮಾ‌ ಮೇ 21 ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಎಲ್ಲರೂ ಸ್ವಾಗತ ಮಾಡಲು ಸಿದ್ದರಾಗಿ” ಎಂದು ಡೈರೆಕ್ಟರ್ ಸಂತೋಷ್ ಆನಂದ ರಾಮ್ ಟ್ಟಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು..! ಈ ಪೋಸ್ಟ್ ವೈರಲ್ ಆಗಿತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು.
ಆದರೆ,‌ ಇದೀಗ ಸಂತೋಷ್ ಆನಂದ್ ರಾಮ್ ಇದು ಸುಳ್ಳು ಸುದ್ದಿ…ಸಿನಿಮಾದ ಇನ್ನೂ ಎರಡು ಹಾಡುಗಳ ಚಿತ್ರೀಕರಣ ಬಾಕಿ‌ ಇದೆ..ಎಂದು ಹೇಳಿದ್ದಾರೆ.
ಅರೆ, ಅವರೇ ಸಿನಿಮಾ ರಿಲೀಸ್ ಬಗ್ಗೆ ಹೇಳಿ , ಈಗ ಹೀಗೆ ಹೇಳ್ತಿದ್ದಾರಲ್ಲಾ? ಅಂತೀರ?

ಅಯ್ಯೋ ಛೇ ಇದು ಏಪ್ರಿಲ್ ಫೂಲ್..! : ಹೌದು ಯುವರತ್ನ ರಿಲೀಸ್ ಡೇಟ್ ಅನೌನ್ಸ್ ಮಾಡಿ ಏಪ್ರಿಲ್ ಫೂಲ್‌ ಮಾಡಲಾಗಿದೆ. ಸಂತೋಷ್ ಆನಂದ್ ರಾಮ್ ಹೆಸರಿನಲ್ಲಿ‌ ಫೇಕ್ ಅಕೌಂಟ್ ‌ಕ್ರಿಯೇಟ್ ಮಾಡಿ ಸಿನಿಮಾ ಡೇಟ್ ಅನೌನ್ಸ್ ಮಾಡಿ ಫೂಲ್ ಮಾಡಲಾಗಿದೆ.
ತಮಗೆ ಗೊತ್ತಿಲ್ಲದಂತೆ ಸಿನಿಮಾ ಡೇಟ್ ಅನೌನ್ಸ್ ಆಗಿದ್ದಕ್ಕೆ ಶಾಕ್ ಆದ ಸಂತೋಷ್ ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅವರು ಸ್ಪಷ್ಟನೆ ನೀಡುತ್ತಿದ್ದಂತೆ ಅಭುಮಾನಿಗಳು ಫೂಲ್ ವಿಶ್ ಮಾಡುತ್ತಿದ್ದಾರೆ!
ಇನ್ನು ಚಿತ್ರ ರಿಲೀಸ್ ಬಗ್ಗೆ ಹೇಳಿರುವ ಸಂತೋಷ್ ಆನಂದರಾಮ್, ” ಇದು ತಪ್ಪು ಮಾಹಿತಿ. ಇನ್ನು 2 ಹಾಡುಗಳ ಚಿತ್ರೀಕರಣವಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಪಕ್ಕಾ ಮುಗಿದ ಮೇಲೆ ರಿಲೀಸ್ ದಿನಾಂಕವನ್ನು ಹೊಂಬಾಳೆ ಫಿಲಮ್ಸ್ ತಿಳಿಸುತ್ತದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಯುವರತ್ನ ರಿಲೀಸ್ ಡೇಟ್ ಅನೌನ್ಸ್ ಆಗಿ ಡೈರೆಕ್ಟರ್‌ಸೇರಿದಂತೆ ಸಾಕಷ್ಟು ಮಂದಿ ಫೂಲ್ ಆಗಿದ್ದಾರೆ…!

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...